ಮಂಗಳೂರು: ಡ್ರಗ್ಸ್ ಸಾಗಿಸುತ್ತಿದ್ದಾಗ ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಬಾಲಿವುಡ್ ನಟ ಕಿಶೋರ್ ಶೆಟ್ಟಿ ವಿಚಾರಣೆ ವೇಳೆ ಸ್ಫೋಟಕ ಸಂಗತಿ ಬೆಳಕಿಗೆ ಬಂದಿದೆ.
ಕಿಶೋರ್ ಶೆಟ್ಟಿ ಇತ್ತೀಚೆಗೆ ಮಂಗಳೂರಿನಲ್ಲಿ ಡ್ರಗ್ಸ್ ಪಾರ್ಟಿ ನಡೆಸಿದ್ದನಂತೆ. ಈತನ ಡ್ರಗ್ಸ್ ಪಾರ್ಟಿಯಲ್ಲಿ ಕನ್ನಡ ಖ್ಯಾತ ರಿಯಾಲಿಟಿ ಶೋಗಳ ಅಂಕರ್ ಹಾಗೂ ನಟಿ ಸಹ ಭಾಗವಹಿಸಿರುವುದು ತಿಳಿದು ಬಂದಿದೆ. ಡ್ಯಾನ್ಸರ್ ಕಂ ನಟನಾಗಿ ಕೆಲಸ ಮಾಡುತ್ತಿದ್ದ ಕಿಶೋರ್ ಶೆಟ್ಟಿ ಆಂಕರ್ ಕಂ ನಟಿ ಜತೆ ಸೇರಿ ಡ್ರಗ್ಸ್ ಪಾರ್ಟಿ ಆಯೋಜಿಸುತ್ತಿದ್ದ. ಈತನ ಪಾರ್ಟಿಗೆ ಬಂದ ಯುವತಿಯರಿಗೆ ಡ್ರಗ್ಸ್ ಕೊಡುತ್ತಿದ್ದನಂತೆ. ಈತ ನಡೆಸುವ ಪಾರ್ಟಿಗಳು ಡ್ರಗ್ಸ್ ಪಾರ್ಟಿಗಳು ಎಂದು ಗೊತ್ತಿದ್ದರೂ ಆಂಕರ್ ಪಾಲ್ಗೊಳ್ಳುತ್ತಿದ್ದಳು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಖ್ಯಾತ ನಿರೂಪಕಿ ಮೇಲೆ ಸಿಸಿಬಿ ಪೊಲೀಸರು ಕಣ್ಣಿಟ್ಟಿದ್ದು ನೋಟಿಸ್ ನೀಡಲು ಸಿದ್ದತೆ ನಡೆದಿದೆ ಎನ್ನಲಾಗಿದೆ.
ಕಿಶೋರ್ ಶೆಟ್ಟಿ ಡ್ರಗ್ಸ್ ಸೆವನೆ ಮಾಡಿರುವುದು ತನಿಖೆಯಿಂದ ತಿಳಿಸು ಬಂದಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತರೇ ತಿಳಿಸಿದ್ದಾರೆ. ಈತನ ಡ್ರಗ್ಸ್ ಜಾಲದ ತನಿಖೆ ಮುಂದುವರೆದಿದೆ ಎಂದು ಅವರು ಹೇಳಿದ್ದಾರೆ
ಮಂಗಳೂರಿನ ನಟ ನಟಿಯರ ಸಂಪರ್ಕ ಹೊಂದಿದ್ದ ಕಿಶೋರ್ ಶೆಟ್ಟಿ, ಡ್ರಗ್ಸ್ ಪಾರ್ಟಿಗಳಿಗೆ ಅವರಿಗೆ ಆಹ್ವಾನ ನೀಡುತ್ತಿದ್ದನಂತೆ. ಅಷ್ಟೇ ಅಲ್ಲದೆ ಖ್ಯಾತ ಆಂಕರ್ ಜತೆ ಮುಂಬೈ ಸೇರಿದಂತೆ ಹಲವೆಡೆ ಸುತ್ತಾಡಿಸಿ ಪಾರ್ಟಿಗಳಲ್ಲಿ ಪಾಲ್ಗೊಂಡಿದ್ದಾನೆ ಎಂಬ ಸಂಗತಿ ಸಿಸಿಬಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.