ಡು ಪ್ಲೆಸಿಸ್, ದಿನೇಶ್ ಕಾರ್ತೀಕ್ ಸ್ಪೋಟಕ ಆಟ – SRH ಗೆ 193 ರನ್ ಟಾರ್ಗೆಟ್
ಭಾನುವಾರ ನಡೆಯುತ್ತಿರುವ IPL ಡಬಲ್ ಹೆಡರ್ ನ ಮೊದಲ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಟಾಸ್ ಗೆದ್ದ ಆರ್ ಸಿ ಬಿ ಮೊದಲು ಬ್ಯಾಟಿಂಗ್ ನಡೆಸಿ 193 ರನ್ ಗಳ ಟಾರ್ಗೆಟ್ ನೀಡಿದೆ.
ಬೆಂಗಳೂರು ಪರ ನಾಯಕ ಫಾಫ್ ಡು ಪ್ಲೆಸಿಸ್ 50 ಎಸೆತಗಳಲ್ಲಿ 73 ರನ್ ಗಳಿಸಿ ಟಾಪ್ ಸ್ಕೋರರ್ ಎನಿಸಿಕೊಂಡಿದ್ದಾರೆ. ಕೊನೆಯ ಓವರ್ ನಲ್ಲಿ ಸ್ಪೋಟಕ ಆಟವಾಡಿದ ದಿನೇಶ್ ಕಾರ್ತೀಕ್ 8 ಎಸೆತಗಳಲ್ಲಿ 30 ರನ್ ಗಳಸಿ ತಂಡದ ರನ್ ಗಳನ್ನ 193 ಕ್ಕೆ ಹತ್ತಿರಕ್ಕೆ ತಂದು ನಿಲ್ಲಿಸಿದ್ದಾರೆ.
ಇದಕ್ಕೂ ಮೊದಲು ರಜತ್ ಪಾಟಿದಾರ್ 48 ರನ್ ಗಳ ಉಪಯುಕ್ತ ಕಾಣಿಕೆ ನೀಡಿದು, ಮ್ಯಾಕ್ಸ್‌ವೆಲ್ 24 ಎಸೆತಗಳಲ್ಲಿ 33 ರನ್ ಗಳಿಸಿದರು. ಆದರೆ ವಿರಾಟ್ ಕೋಹ್ಲಿಯ ಕೆಟ್ಟ ಫಾರ್ಮ್ ಮುಂದುವರೆದಿದೆ, ಈ ಬಾರಿಯೂ ಮೊದಲ ಓವರ್ ನ ಮೊದಲ ಎಸೆತದಲ್ಲೇ ಗೋಲ್ಡ್ ಡಕ್ ಗೆ ವಿಕೆಟ್ ಒಪ್ಪಿಸಿದರು. ಜೆ ಸುಚಿತ್ ಎಸೆದ ಎಸೆತವನ್ನ ಫ್ಲಿಕ್ ಮಾಡಲು ಹೋದ ವಿರಾಟ್ ನಾಯಕ ವಿಲಿಯಮ್ಸನ್ ಸುಲಭ ಕ್ಯಾಚಿತ್ತು ಫೆವಿಲಿಯನ್ ಗೆ ಮರಳಿದ್ದಾರೆ. ಈ ಋತುವಿನಲ್ಲಿ ವಿರಾಟ್ ಮೂರನೇ ಬಾರಿಗೆ ಶೂನ್ಯಕ್ಕೆ ಔಟಾಗಿದ್ದಾರೆ.
SRH ಪರ ಜೆ ಸುಚಿತ್ ಅತಿ ಹೆಚ್ಚು ವಿಕೆಟ್ ಪಡೆದಿದ್ದಾರೆ. 4 ಓವರ್‌ಗಳಲ್ಲಿ 30 ರನ್ ನೀಡಿ 2 ಬ್ಯಾಟ್ಸ್‌ಮನ್‌ಗಳನ್ನ ಔಟ್ ಮಾಡಿದರು.
ವಿರಾಟ್ ಕೊಹ್ಲಿ ಔಟಾದ ಬಳಿಕ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಮತ್ತು ರಜತ್ ಪಾಟಿದಾರ್ ಮೂರನೇ ವಿಕೆಟ್‌ಗೆ 73 ಎಸೆತಗಳಲ್ಲಿ 105 ರನ್‌ಗಳ ಜೊತೆಯಾಟ ನೀಡಿದರು. ಈ ಜೊತೆಯಾಟದಲ್ಲಿ ರಜತ್ ಬ್ಯಾಟ್ 38 ಎಸೆತಗಳಲ್ಲಿ 48 ರನ್ ಗಳಿಸಿದರೆ, ಫಾಫ್ ಬ್ಯಾಟ್ 35 ಎಸೆತಗಳಲ್ಲಿ 52 ರನ್ ಗಳಿಸಿತು.
Du Plessis, Dinesh Karthik Explosive Game – 193 Run Target for SRH








