ಬಾಲ್ಕನಿಯಲ್ಲಿ ಬೆತ್ತಲೆಯಾಗಿ ಫೋಟೋಗೆ ಫೋಸ್ ಕೊಟ್ಟಿದ್ದ ಮಹಿಳೆಯರಿಗೆ ದುಬೈನಿಂದ ಬಹಿಷ್ಕಾರ..!
ದುಬೈ : ಅರಬ್ ರಾಷ್ಟ್ರಗಳಲ್ಲಿ ಮಹಿಳೆಯರ ಉಡುಗೆ ತೊಡುಗೆಗಳ ಮೇಲೆ ಕೆಲ ನಿರ್ಬಂಧನಗಳಿವೆ. ಅರೆಬೆತ್ತಲೆ , ಅಸಹಜವಾಗಿ ಬಟ್ಟೆ ಧರಿಸುವುದು ಅಲ್ಲಿ ಕಾನೂನು ಬಾಹಿರ..
ಅಂತಹದ್ರಲ್ಲಿ ಇತ್ತೀಚೆಗೆ ಕೆಲ ಮಾಡೆಲ್ ಗಳ ಗುಂಪು ದುಬೈನ ಕಟ್ಟಡವೊಮಂದರ ಬಾಲ್ಕನಿಯಲ್ಲಿ ನಿಂತು ಪೂರ್ತಿ ಬೆತ್ತಲಾಗಿ ಫೋಟೋ ಶೂಟ್ ಮಾಡಿಸಿದ್ದರು. ಇದು ಸಾಮಾಜಿಕ ಜಾಲತಾಣಗಲಲ್ಲಿ ಹರಿದಾಡ್ತಿದ್ದಂತೆ, ಅಲ್ಲಿನ ಪೊಲೀಸರು ಎಚ್ಚೆತ್ತು ಈ ಬಗ್ಗೆ ತನಿಖೆ ಆರಂಭಿಸಿದ್ದರು. ಬಳಿಕ ಉಕ್ರೇನ್ ಮೂಲಕ ಮಾಡೆಲ್ ಗಳು ಹಾಗೂ ಫೋಟೋಗ್ರಾಫರ್ ನನ್ನ ಅರೆಸ್ಟ್ ಮಾಡಿದ್ದರು.
ಇದೀಗ ಮಹಿಳೆಯರ ವಿರುದ್ಧ ಕ್ರಮ ಕೈಗೊಂಡಿರುವ ಸಂಯುಕ್ತ ಅರಬ್ ಸಂಸ್ಥಾನ ಅವರನ್ನ 5 ವರ್ಷಗಳ ಕಾಲ ದುಬೈನಿಂದ ಬಹಿಷ್ಕರಿಸಿದೆ. ಮುಂದಿನ ಐದು ವರ್ಷಗಳವರೆಗೆ ಅರಬ್ ದೇಶಕ್ಕೆ ಭೇಟಿ ನೀಡದಂತೆ ಬ್ಯಾನ್ ಮಾಡಲಾಗಿದೆ. ಸಾರ್ವಜನಿಕ ಸಭ್ಯತೆಯನ್ನು ಉಲ್ಲಂಘಿಸಿದಕ್ಕೆ ಮಾಡೆಲ್ಗಳಿಗೆ ಈ ಶಿಕ್ಷೆಯನ್ನು ವಿಧಿಸಲಾಗಿದೆ. ಸದ್ಯ ಮಾಡೆಲ್ಗಳು ಮರಳಿ ಉಕ್ರೇನಿಯ ಸೇರಿಕೊಂಡಿದ್ದಾರೆ.
ಏಪ್ರಿಲ್ 3ರಂದು ದುಬೈ ಕಟ್ಟಡದ ಬಾಲ್ಕನಿಯಲ್ಲಿ ಬೆತ್ತಲೆಯಾಗಿ ನಿಂತ ಮಹಿಳೆಯರು ಕ್ಯಾಮೆರಾಗೆ ಪೋಸ್ ನೀಡಿದ್ದರು. ಇದಕ್ಕೆ ಸಂಬಂಧಿಸಿದ್ದ ಫೋಟೋ ಮತ್ತು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು.
ಕೆಂಪುಕೋಟೆ ಹಿಂಸಾಚಾರ ಪ್ರಕರಣ – ನಟ ದೀಪ್ ಸಿಧುಗೆ ಜಾಮೀನು ಮಂಜೂರು..!
ಅಮೆರಿಕಾ ವಿರುದ್ಧ ಸೇಡು ತೀರಿಸಿಕಕೊಂಡ ರಷ್ಯಾ..!
ಅಮೆರಿಕಾದಲ್ಲಿ ಭಾರತೀಯರೇ ಟಾರ್ಗೆಟ್ – ನಾಲ್ವರು ಸಿಖ್ಖರು ಸೇರಿ 8 ಮಂದಿಯ ಕೊಲೆ
BIGGBOSS 8 – ಮಂಜು ಮುಖಕ್ಕೆ ಉಗಿದಿದ್ಯಾಕೆ ದಿವ್ಯಾ ಸುರೇಶ್..?









