ಟಾಲಿವುಡ್ ನ ಸ್ಟಾರ್ ನಟರಾದ ಅಲ್ಲು ಸಿರಿಶ್, ವಿಜಯ್ ದೇವರಕೊಂಡ ಮಾಲಿವುಡ್ ನ ಸೂಪರ್ ಸ್ಟಾರ್ ದುಲ್ಕರ್ ಸಲ್ಮಾನ್ ಅವರು ಒಂದು ರೀತಿ ಯೂತ್ ಸ್ಟೈಲ್ ಐಕಾನ್ಸ್ ಕೂಡ ಹೌದು.. ಇದೀಗ ಅವರ ಸ್ಟೈಲ್ ಸ್ಟೇಟ್ ಮೆಂಟ್‌ಗಳು ಈ ಮದುವೆಯ ಸೀಸನ್‌ಗೆ ನಿಮ್ಮ ಮಾರ್ಗದರ್ಶಿಯಾಗಲಿದೆ..
ಈ ವೆಡ್ಡಿಂಗ್ ಸೀಸನ್ ನಲ್ಲಿ ದಕ್ಷಿಣ ಸಿನಿಮಾರಂಗದ ಸ್ಟಾರ್ ನಟರು ಫ್ಯಾಶನ್ ಸ್ಪೂರ್ತಿಯಾಗಲಿದ್ದಾರೆ.. ಏಕೆಂದರೆ ಅಲ್ಲು ಸಿರಿಶ್, ವಿಜಯ್ ದೇವರಕೊಂಡ ಮತ್ತು ದುಲ್ಕರ್ ಸಲ್ಮಾನ್ ಕೆಲವು ಪರಿಪೂರ್ಣವಾದ ಉಡುಪಿನಲ್ಲಿ , ಗಂಭೀರವಾದ ನೋಟದಲ್ಲಿ ಇದೀಗ ಎಲ್ಲರ ಗಮನ ಸೆಳೆಯುತ್ತಿದ್ದಾರೆ.. ಅವರಿಂದ ಅವರ ಅಭಿಮಾನಿಗಳು ಖಂಡಿತವಾಗಿಯೂ ಸ್ಪೂರ್ತಿ ಪಡೆದು ಅವರಂತೆಯೇ ಬಟ್ಟೆ ಧರಿಸಲು ಇಚ್ಛುಸುತ್ತಾರೆ. ಹಾಗಾದ್ರೆ ನೀವೂ ಕೂಡ ಅವರಂತೆಯೇ ಡ್ರೆಸ್ ಅಪ್ ಆಗಲು , ಫ್ಯಾಷನ್ ಪ್ರೀಕ್ ನಂತೆ ಕಾಣಲು ರೆಡಿಯಾಗಿ..
ಅಲ್ಲು ಸಿರಿಶ್
ಅಂದ್ಹಾಗೆ ಅಲ್ಲು ಸಿರೀಶ್ ಬಿಳಿ ಶೇರ್ವಾನಿ, ಮತ್ತು ಬಿಳಿ ದುಪಟ್ಟಾದಲ್ಲಿ ಹೊಸ ಲುಕ್ ನೊಂದಿಗೆ ಕಾಣಿಸಿಕೊಂಡಿದ್ದಾರೆ.. ಅವರ ಈ ಲುಕ್ ಯಾವುದೋ ಕನಸಿನ ಲುಕ್ ನಂತೆ ಕಾಣುತ್ತೆ.. ಟೋಟಲಿ ಡ್ರೀಮಿ ಲುಕ್.. ಅದ್ರಲ್ಲಿ ಗೋಲ್ಡನ್ ಕಫ್‌ಗಳು ಮತ್ತು ಕಾಲರ್ ಗನೊಂದಿಗೆ ವಿವರವಾಗಿ ಮತ್ತು ಕಂದು ಬಣ್ಣದ ಬೂಟ್ಸ್ ಗಳೊಂದಿಗೆ ಅವರ ಲುಕ್ ಫರ್ಪೆಕ್ಟ್ ಆಗಿದೆ.. ಅಲ್ಲು ಸಿರಿಶ್ ಅವರ ಈ ವೆಡ್ಡಿಂಗ್ ಲುಕ್ ಸಖತ್ ಅಟ್ರ್ಯಾಕ್ಟೀವ್ ಆಗಿದ್ದು, ಅಭಿಮಾನಿಗಳನ್ನ ಇನ್ ಸ್ಪೈರ್ ಮಾಡಿದೆ..
ದುಲ್ಕರ್ ಸಲ್ಮಾನ್
ಮೆರೂನ್ ಶೇರ್ವಾನಿ , ಗೋಲ್ಡನ್ ಬಟನ್‌ಗಳೊಂದಿಗೆ ಮದುವೆಯನ್ನು ದುಲ್ಕರ್ ಅವರು ರಾಕಿಂಗ್ ಆಗಿ ಕಾಣುವಂತೆ ಮಾಡಿದೆ.. ಅಚ್ಚುಕಟ್ಟಾಗಿ ಕರ್ಚೀಫ್ ಮತ್ತು ಗೋಲ್ಡನ್ ಬಟನ್‌ಗಳಿಂದ ಅಲಂಕರಿಸಲ್ಪಟ್ಟ ಈ ಉಡುಗೆಯು ಎಲ್ಲರ ಕಣ್ಣೋಟವನ್ನ ತನ್ನೆಡೆಗೆ ಹಿಡಿದಿಟ್ಟುಕೊಳ್ತಿದೆ. ಮತ್ತು ಈ ಮದುವೆಯ ಸೀಸನ್ ನಲ್ಲಿ ಈ ರೀತಿಯಾದ ಲುಕ್ ಎಲ್ಲರ ಗಮನವನ್ನ ತನ್ನೆಡೆಗೆ ಸೆಳೆಯುವಂತಿದೆ..
ವಿಜಯ್ ದೇವರಕೊಂಡ
ವಿಜಯ್ ದೇವರಕೊಂಡ ಬಿಳಿ ಮತ್ತು ಪಿಂಕ್ ಶೇರ್ವಾನಿ ಮತ್ತು ಬಿಳಿ ಕುರ್ತಾ ಅಂತಿಮ ಗೇಮ್ ಚೇಂಜರ್ ಆಗಿದೆ. ಓಪನ್ ಶೆರ್ವಾನಿಯೊಂದಿಗೆ ಪ್ಲೇನ್ ಕುರ್ತಾ ಖಂಡಿತವಾಗಿಯೂ ಫ್ಯಾಷನ್ ದಿಕ್ಕನ್ನೇ ಬದಲಾಯಿಸುವಂತಿದೆ. ಈ ಲುಕ್ ಖಂಡಿತವಾಗಿಯೂ ನಿಮ್ಮನ್ನು ಜನಸಂದಣಿಯಲ್ಲಿ ಹೈಲೆಟ್ ಆಗಿ ಕಾಣಿಸವುಂತೆ ಮಾಡುತ್ತದೆ..