‘ವಿಲ್ಲನ್ ಪಾತ್ರಕ್ಕೆ ದುನಿಯಾ ವಿಜಿ ಹೊಸ ವ್ಯಾಖ್ಯಾನ’ ಎಂದ ಬಾಲಯ್ಯ..!
ಸಲಗ ಸಕ್ಸಸ್ ನಂತರ ದುನಿಯಾ ವಿಜಿ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ .. ನಿರ್ದೇಶಕನಾಗಿ ಸಕ್ಸಸ್ ಕಂಡ ಬೆನ್ನಲ್ಲೇ ಇದೀಗ ಟಾಲಿವುಡ್ ನಲ್ಲಿ ನಟ ಬಾಲಕೃಷ್ಣ ಸಿನಿಮಾದಲ್ಲಿ ವಿಲ್ಲನ್ ಶೇಡ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ದುನಿಯಾ ವಿಜಿ.. ಇದಕ್ಕಾಗಿ ಅವರು ತಮ್ಮ ಕಂಪ್ಲೀಟ್ ಲುಕ್ ಚೇಂಜ್ ಮಾಡಿಕೊಂಡಿದ್ದು, ಹೆಸರಿಡದ ಈ ಸಿನಿಮಾದಲ್ಲಿ ದುನಿಯಾ ವಿಜಿ ನಟಿಸುತ್ತಿರುವ ವಿಚಾರವನ್ನ ಮೈತ್ರಿ ಮೂವೀಸ್ ಅಧಿಕೃತಗೊಳಿಸಿದೆ.. 
ಬಾಲಕೃಷ್ಣ 107ನೇ ಸಿನಿಮಾದಲ್ಲಿ ವಿಜಯ್ ನಟಿಸುತ್ತಿದ್ದು ಶೀಘ್ರದಲ್ಲೇ ಸಿನಿಮಾ ಸೆಟ್ಟೇರಲಿದೆ.. ಅಂದ್ಹಾಗೆ ನಿರ್ದೇಶಕ ಗೋಪಿಚಂದ್ ಮಲಿನೇನಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಲಿದ್ದಾರೆ.. ಅಂದ್ಹಾಗೆ ಕನ್ನಡದ ಕರಿ ಚಿರತೆ ನಟನೆ ಬಗ್ಗೆ ಟ್ವಿಟ್ಟರ್ ನಲ್ಲಿ ಬಾಲಕೃಷ್ಣ ಅವರು ಮಾತನಾಡಿದ್ದು , ‘ಖಳನಾಯಕನಿಗೆ ಹೊಸ ವ್ಯಾಖ್ಯಾನ’ ಎಂದಿದ್ದಾರೆ..
“ಪುಷ್ಪ” ಗಾಗಿ ಅಲ್ಲು ಅರ್ಜುನ್ , ಸಮಂತಾ , ರಶ್ಮಿಕಾ ಪಡೆದ ಸಂಭಾವನೆ ಎಷ್ಟು ಗೊತ್ತಾ..?








