Vijayapura ವಿಜಯಪುರ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳ ದರ್ಬಾರ್
ವಿಜಯಪುರ : ಸಾರಿಗೆ ನೌಕರರ ಮುಷ್ಕರ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ವಿಜಯಪುರ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳ ದರ್ಬಾರ್ ಮುಂದುವರಿದಿದೆ.
ಬೆಳಗಾವಿ, ಹುಬ್ಬಳ್ಳಿ ಸೇರಿದಂತೆ ವಿವಿಧ ಭಾಗಗಳಿಗೆ ಖಾಸಗಿ ವಾಹನಗಳು ತೆರಳುತ್ತಿವೆ.
ಬಸ್ ಫ್ಯ್ಲಾಟ್ ಫಾರ್ಮ್ ಗಳಲ್ಲಿ ನಿಂತು ಪ್ರಯಾಣಿಕರನ್ನು ಖಾಸಗಿ ವಾಹನಗಳು ಕರೆದುಕೊಂಡು ಹೋಗುತ್ತಿವೆ.
ಸರ್ಕಾರ ನಿಗದಿ ಪಡಿಸಿದ ಪ್ರಯಾಣ ಶುಲ್ಕ ಮಾತ್ರ ತೆಗೆದುಕೊಳ್ಳಬೇಕು ಎಂದು ಅಧಿಕಾರಿಗಳು ಖಾಸಗಿಯವರಿಗೆ ಸೂಚಿಸುತ್ತಿದ್ದಾರೆ.
ಅಲ್ಲದೆ ಹೆಚ್ಚು ಪ್ರಯಾಣ ಶುಲ್ಕ ತೆಗೆದುಕೊಂಡರೆ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.










