ಹುಬ್ಬಳ್ಳಿ : ಚಿಕ್ಕಮಗಳೂರಿನಲ್ಲಿನ ದತ್ತಪೀಠ ಹಿಂದೂಗಳಿಗೆ ನೀಡುವ ನಿಟ್ಟಿನಲ್ಲಿ ಸುಗ್ರಿವಾಜ್ಞೆ ಹೊರಡಿಸಬೇಕು ಎಂದು ಶ್ರೀರಾಮ ಸೇನಾ ಸಂಸ್ಥಾಪಕ ಪ್ರಮೋದ ಮುತಾಲಿಕ್ ಆಗ್ರಹಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜು.5ರಂದು ದತ್ತ ಪೀಠವನ್ನು ಹಿಂದೂಗಳಿಗೆ ನೀಡಬೇಕೆಂದು ರಾಜ್ಯಾದ್ಯಂತ ಒಂದು ಕೋಟಿ ಜಪಯಜ್ಞ ಮಾಡಲಾಗುತ್ತಿದೆ. 22 ವರ್ಷಗಳಿಂದ ದತ್ತಪೀಠ ವಿವಾದ ಮುಂದುವರೆದಿದ್ದು, ದತ್ತಪೀಠ ಹೋರಾಟ ಕೃಪೆಯಿಂದಲೇ ಅಧಿಕಾರ ಹಿಡಿದಿರುವ ಬಿಜೆಪಿ ಸರಕಾರ ಇದ್ದ ಅಡ್ಡಿಗಳನ್ನು ನಿವಾರಿಸಿ ದತ್ತಪೀಠವನ್ನು ಹಿಂದೂಗಳ ಸುಪರ್ದಿಗೆ ನೀಡಬೇಕೆಂದು ಎಂದು ಒತ್ತಾಯಿಸಿದ್ದಾರೆ.
ಶಾಸಕರು, ಸಂಸದರಿಗೆ ಮುತ್ತಿಗೆ
ದತ್ತಪೀಠ ಹಿಂದೂಗಳಿಗೆ ನೀಡುವ ನಿಟ್ಟಿನಲ್ಲಿ ಸರಕಾರದ ಮೇಲೆ ದಕ್ಷಿಣ ಕನ್ನಡ, ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಶಾಸಕರು, ಸಂಸದರು ಒತ್ತಡ ಏರಬೇಕು. ಒಂದು ಒತ್ತಡ ತೆರದಿದ್ದರೇ ಶಾಸಕರು, ಸಂಸದರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇನ್ನು ಸಿದ್ದರಾಮಯ್ಯ ನವರು ಮುಖ್ಯಮಂತ್ರಿಯಾಗಿದ್ದಾಗ ದತ್ತಪೀಠ ಕುರಿತಾಗಿ ಆಯೋಗ ದಿಂದ ಸಲ್ಲಿಕೆಯಾಗಿರುವ ವರದಿ ಹಿಂದೂ ವಿರೋಧಿ, ಎಡಪಂಥೀಯ ವಿಚಾರ ಹೊಂದಿದ್ದು ಅದನ್ನು ತಿರಸ್ಕರಿಸಬೇಕೆಂದರು. ದತ್ತಪೀಠ ಹಿಂದೂಗಳಿಗೆ ನೀಡುವ ನಿಟ್ಟಿನಲ್ಲಿ ಸುಗ್ರಿವಾಜ್ಞೆ ಹೊರಡಿಸಬೇಕು ಎಂದು ಒತ್ತಾಯಿಸಿದರು.








