ದೇಶದಲ್ಲಿ ಫ್ಯಾಸಿಸ್ಟ್, ಮತಾಂಧ ಸಂಸ್ಕøತಿ ಪ್ರಭಾವ ಹೆಚ್ತಿದೆ : ದ್ವಾರಕಾನಾಥ್ dwarakanath
ಬೆಂಗಳೂರು : ಭಾರತದಲ್ಲಿ ಫ್ಯಾಸಿಸ್ಟ್ ಹಾಗೂ ಮತಾಂಧ ಸಂಸ್ಕøತಿಯ ಪ್ರಭಾವ ಹೆಚ್ಚಾಗುತ್ತಿದೆ ಎಂದು ಡಾ.ಸಿ.ಎಸ್.ದ್ವಾರಕಾನಾಥ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಡಾ ಸಿ ಎಸ್ ದ್ವಾರಕಾನಾಥ್ ಅವರು ಇಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಬಳಿಕ ಮಾತನಾಡಿದ ದ್ವಾರಕಾನಾಥ್, ಸದ್ಯ ಭಾರತದಲ್ಲಿ ಫ್ಯಾಸಿಸ್ಟ್ ಹಾಗೂ ಮತಾಂಧ ಸಂಸ್ಕøತಿಯ ಪ್ರಭಾವ ಹೆಚ್ಚಾಗುತ್ತಿದೆ.
ಈ ಶಕ್ತಿಗಳು ಸಣ್ಣ ಹಾಗೂ ಹಿಂದುಳಿದ ಸಮುದಾಯಗಳನ್ನು ಸೆಳೆಯುತ್ತಿವೆ.
ಈ ಸನ್ನಿವೇಶದಲ್ಲಿ ಸಣ್ಣ ಸಮುದಾಯಗಳನ್ನು ಕಮ್ಯೂನಲಿಸಂನಿಂದ ಉಳಿಸುವ ಸಲುವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡಿದ್ದೇನೆ.
ಈ ಮೂಲಕ ಸಣ್ಣ ಸಮುದಾಯಗಳ ಅಭಿವೃದ್ಧಿ ಹಾಗೂ ರಾಜಕೀಯ ಪ್ರಾತಿನಿಧ್ಯಕ್ಕಾಗಿ ಶ್ರಮಿಸುತ್ತೇನೆ ಎಂದು ಹೇಳಿದರು.









