Dwayne Bravo: ಆಟಕ್ಕೆ ವಿದಾಯ ಹೇಳಿ ಆಟ ಹೇಳಿಕೊಡಲು ಮುಂದಾದ ಬ್ರಾವೋ…
IPL ನಲ್ಲಿ ಎರಡು ಭಾರಿ ಪರ್ಪಲ್ ಕ್ಯಾಪ್ ಗೆದ್ದ ಆಟಗಾರ, ವೆಸ್ಟ್ ಇಂಡೀಸ್ ನ ಮಾಜಿ ಅನುಭವಿ ಆಲ್‌ರೌಂಡರ್ ಡ್ವೇನ್ ಬ್ರಾವೋ ಐಪಿಎಲ್ ನಿಂದ ನಿವೃತ್ತಿಯಾಗಿದ್ದಾರೆ. ಇತ್ತೀಚೆಗೆ ಅವರನ್ನ ಚೆನೈ ಸೂಪರ್ ಕಿಂಗ್ ರೀಟೈನ್ ಮಾಡದೆ ಬಿಡುಗಡೆ ಮಾಡಿತ್ತು.
39 ವರ್ಷ ವಯಸ್ಸಿನ ಬ್ರಾವೋ 2010 ತಂಡವನ್ನ ಸೇರಿಕೊಂಡು 2011 ರಿಂದ CSK ಗೆ ತಂಡದ ಭಾಗವಾಗಿದ್ದಾರೆ. 2016 ಮತ್ತು 2017 ರಲ್ಲಿ ಚೆನ್ನೈ ತಂಡ ನಿಷೇಧಕ್ಕೊಳಗಾದಾಗ ಬ್ರಾವೋ ಬೇರೊಂದು ತಂಡದಲ್ಲಿ ಆಡಿದ್ದರು. ಬ್ರಾವೋ 2008 ರಿಂದ ಐಪಿಎಲ್ ಆಡುತ್ತಿದ್ದು, ಮೊದಲ ಮೂರು ಋತುಗಳನ್ನ ಮುಂಬೈ ಇಂಡಿಯನ್ಸ್ ಪರ ಆಡಿದ್ದರು.
ಬ್ರಾವೋ ಮೂರು ಬಾರಿ (2011, 2018 ಮತ್ತು 2021) ಚಾಂಪಿಯನ್ ತಂಡದ ಭಾಗವಾಗಿದ್ದಾರೆ. ಸಿಎಸ್ ಕೆ ಒಟ್ಟು ನಾಲ್ಕು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿದೆ. ಇದರೊಂದಿಗೆ ಬ್ರಾವೋ 2014 ರಲ್ಲಿ ಚಾಂಪಿಯನ್ಸ್ ಲೀಗ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿದ್ದರು.
CSK ಬೌಲಿಂಗ್ ಕೋಚ್ ಆಗಿ ನೇಮಕ…
ಡ್ವೇನ್ ಬ್ರಾವೋ ಆಟಕ್ಕೆ ವಿದಾಯ ಹೇಳಿದರೂ ಆಟ ಹೇಳಿಕೊಡಲು ಮುಂದಾಗಿದ್ದಾರೆ. 2023 ರಿಂದ ಲಕ್ಷ್ಮೀಪತಿ ಬಾಲಾಜಿ ಬದಲಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೌಲಿಂಗ್ ಕೋಚ್ ಪಾತ್ರವನ್ನ ನಿರ್ವಹಿಸಲಿದ್ದಾರೆ. ವೈಯಕ್ತಿಕ ಕಾರಣಗಳಿಂದ ಬಾಲಾಜಿ ಒಂದು ವರ್ಷ ವಿರಾಮ ತೆಗೆದುಕೊಂಡಿದ್ದಾರೆ.
ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ದಾಖಲೆ ಬ್ರಾವೋ ಹೆಸರಲ್ಲಿ
ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಬ್ರಾವೋ ಹೆಸರಿನಲ್ಲಿದೆ. 161 ಪಂದ್ಯಗಳಿಂದ 183 ವಿಕೆಟ್ ಪಡೆದಿದ್ದಾರೆ. ಬ್ರಾವೋ ನಂತರ ಲಸಿತ್ ಮಾಲಿಂಗ ಎರಡನೇ ಸ್ಥಾನದಲ್ಲಿದ್ದಾರೆ. ಮಾಲಿಂಗ 122 ಐಪಿಎಲ್ ಪಂದ್ಯಗಳಲ್ಲಿ 170 ವಿಕೆಟ್ ಪಡೆದಿದ್ದಾರೆ. ಬ್ರಾವೋ 161 ಪಂದ್ಯಗಳಲ್ಲಿ 116 ಪಂದ್ಯಗಳನ್ನು ಚೆನ್ನೈನಿಂದ ಆಡಿದ್ದಾರೆ.
ಇದಲ್ಲದೇ ಬ್ರಾವೋ ಈ ಲೀಗ್‌ನಲ್ಲಿ 1560 ರನ್ ಗಳಿಸಿದ್ದಾರೆ. ಅವರ ಅತ್ಯುತ್ತಮ ಸ್ಕೋರ್ ಅಜೇಯ 70 ರನ್. ಐಪಿಎಲ್ ವೃತ್ತಿಜೀವನದಲ್ಲಿ ಬ್ರಾವೋ ಅವರ ಸ್ಟ್ರೈಕ್ ರೇಟ್ 129.57 ಆಗಿತ್ತು. ಇದಲ್ಲದೆ ಐದು ಅರ್ಧಶತಕಗಳನ್ನು ಗಳಿಸಿದರು. ಬ್ರಾವೋ ಅವರ ಸಹ ಆಟಗಾರ ಮತ್ತು ಮುಂಬೈ ಇಂಡಿಯನ್ಸ್ ಕೀರಾನ್ ಪೊಲಾರ್ಡ್ ಕೂಡ ಇತ್ತೀಚೆಗೆ ಐಪಿಎಲ್‌ನಿಂದ ನಿವೃತ್ತರಾದರು.
Dwayne Bravo: Saying goodbye to the game, Bravo is ready to teach the game…