e -sim cards
ಶೀಘ್ರದಲ್ಲೇ E -SIM ಜಾರಿಗೆ : ಈ ವ್ಯವಸ್ಥೆಯ ವಿಶೇಷತೆಗಳು..!
ರಾಷ್ಟ್ರದ ದೈತ್ಯ ಟೆಲಿ ಕಮ್ಯುನಿಕೇಷನ್ ಕಂಪನಿಗಳಾದ ಜಿಯೋ, ವಿಐ ಮತ್ತು ಏರ್ ಟೆಲ್ ಕಂಪನಿಗಳು ಶೀಘ್ರದಲ್ಲೇ E -SIM ಜಾರಿಗೆ ತರಲು ಸಿದ್ಧತೆ ನಡೆಸಿಕೊಳ್ತಿವೆ. ಯಾವುದೇ ಆಯಂಡ್ರಾಯ್ಡ್ ಮೊಬೈಲ್ ಗಳಲ್ಲಿ ಇ-ಸಿಮ್ ಅಥವಾ ಎಂಬೆಡೆಡ್ ಸಿಮ್ ಅಳವಡಿಸುವ ಮಾದರಿಯ ಸಿಮ್ ಗಳನ್ನು ನೀಡಲು ಈ ವ್ಯವಸ್ಥೆಯ ಉದ್ದೇಶವಾಗಿದೆ. ಈ ಮೂಲಕ ಸಿಮ್ ಅನ್ನು ಮೊಬೈಲ್ ಹಾಕುವ ಅವಶ್ಯಕತೆ ಇರುವುದಿಲ್ಲ.
ಇಂದಿನಿಂದ ಫಾಸ್ಟ್ ಟ್ಯಾಗ್ ಕಡ್ಡಾಯ: ಇಲ್ಲದಿದ್ದರೆ ಏನಾಗುತ್ತೆ..?
ಇ-ಸಿಮ್ ಬಳಕೆದಾರರು ಮೊಬೈಲ್ ನಲ್ಲಿ ಸಿಮ್ ಹಾಕಲು ಬಳಸುವ ಜಾಗವನ್ನು ಬೇರೆ ಉದ್ದೇಶಗಳಿಗೆ ಬಳಸಬಹುದು. ಅಂದ್ರೆ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೋಗುವಾಗ ಸಿಮ್ ಬದಲಿಸುವ ಅಥವಾ ಆಫರ್ ಬದಲಿಸುವಾಗ ಸಿಮ್ ಬದಲಿಸುವ ಅವಶ್ಯಕತೆ ಇರುವುದಿಲ್ಲ. ಬದಲಿಗೆ ಟೋಲ್ ನಂಬರ್ ಗೆ ಕರೆ ಮಾಡಿ ಅಗತ್ಯ ಬದಲಾವಣೆ ಮಾಡಿಕೊಳ್ಳಬಹುದು ಎನ್ನಲಾಗಿದೆ. ಇನ್ನೂ ಸ್ಟೋರೇಜ್ ಹೆಚ್ಚಿಸಿಕೊಳ್ಳಲು ಸಹ ಇದನ್ನ ಬಳಸಬಹುದು ಎನ್ನಲಾಗಿದೆ.
e -sim cards








