ಪ್ರಧಾನಿ ಕಾಶ್ಮೀರ ಬೇಟಿ ಕುರಿತು ಪ್ರತಿಕ್ರಿಯಿಸಲು ಪಾಕ್ ಗೆ ಅಧಿಕಾರವಿಲ್ಲ – ವಿದೇಶಾಂಗ ಸಚಿವಾಲಯ
ಪ್ರಧಾನಿ ನರೇಂದ್ರ ಮೋದಿಯವರ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡುವ ಕುರಿತು ಪ್ರತಿಕ್ರಿಯಿಸಲು ಪಾಕಿಸ್ತಾನಕ್ಕೆ ಯಾವುದೇ ಅಧಿಕಾರವಿಲ್ಲ ಎಂದು ವಿದೇಶಾಂಗ ಸಚಿವಾಲಯ MEA ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.
ಜೆ & ಕೆ ನಲ್ಲಿ ಮೋದಿಗೆ ದೊರೆತ ಸ್ವಾಗತ ಮತ್ತು ಅವರು ಉದ್ಘಾಟಿಸಿದ ಅಭಿವೃದ್ಧಿ ಯೋಜನೆಗಳು ಅವರ ಭೇಟಿಯ ಬಗ್ಗೆ ಎತ್ತಬಹುದಾದ ಯಾವುದೇ ಪ್ರಶ್ನೆಗೆ ಸ್ಪಷ್ಟ ಉತ್ತರವಾಗಿದೆ ಎಂದು ಅವರು ಹೇಳಿದರು.
ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಚೀನಾಗೆ ಪ್ರವಾಸಿ ವೀಸಾಗಳನ್ನು ನೀಡುವುದನ್ನು ಪುನರಾರಂಭಿಸಲು ಇದು ಸೂಕ್ತ ಸಮಯವಲ್ಲ ಎಂದು ವಿದೇಶಾಂಗ ಸಚಿವಾಲಯ ಗುರುವಾರ ಹೇಳಿದೆ. ನವೆಂಬರ್ 2020 ರಿಂದ ಭಾರತೀಯರಿಗೆ ವೀಸಾಗಳ ವಿತರಣೆಯನ್ನು ಚೀನಾ ಸ್ಥಗಿತಗೊಳಿಸಿದೆ ಎಂದು ತಿಳಿಸಿದರು.
‘ವಂದೇ ಭಾರತ್’ ರೈಲಿನ ಕೆಲವು ಘಟಕಗಳನ್ನು ಉಕ್ರೇನ್ನಲ್ಲಿ ತಯಾರಿಸಲಾಗುತ್ತದೆ, ಆದರೆ ನಡೆಯುತ್ತಿರುವ ಸಂಘರ್ಷದಿಂದಾಗಿ, ವಿತರಣಾ ವೇಳಾಪಟ್ಟಿಯ ಮೇಲೆ ಪರಿಣಾಮ ಬೀರಿದೆ. ಭಾರತವು ಸಮಯೋಚಿತ ವಿತರಣೆಗಾಗಿ ಆಯ್ಕೆಗಳನ್ನು ಹುಡುಕುತ್ತಿದೆ ಎಂದು ಅವರು ಹೇಳಿದರು.








