Earthquake
ಕಳೆದ ಕೆಲವು ದಿನಗಳಿಂದ ಜಪಾನ್, ನೇಪಾಳ ಮತ್ತು ಭಾರತ ಸೇರಿದಂತೆ ನೆರೆಯ ಪ್ರದೇಶಗಳಲ್ಲಿ ಸರಣಿ ಭೂಕಂಪಗಳು ಸಂಭವಿಸುತ್ತಿವೆ. ಜಪಾನ್ ನಲ್ಲಿ ಸೋಮವಾರ ಮತ್ತೆ ಭೂಮಿ ಕಂಪಿಸಿದೆ. ಸ್ಥಳದಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.1ರಷ್ಟಿತ್ತು. ಟೋಬಾದಿಂದ ಆಗ್ನೇಯಕ್ಕೆ 84 ಕಿಲೋಮೀಟರ್ ದೂರದಲ್ಲಿ ಭೂಕಂಪ ಸಂಭವಿಸಿದೆ. ಮಧ್ಯಾಹ್ನ 1.38ರ ಸುಮಾರಿಗೆ ಭೂಕಂಪ ಸಂಭವಿಸಿದೆ. ಇದನ್ನು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ ದೃಢಪಡಿಸಿದೆ.
ಇದಕ್ಕೂ ಮುನ್ನ ನವೆಂಬರ್ 12 ರಂದು ನೇಪಾಳದಲ್ಲಿ 5.4 ತೀವ್ರತೆಯ ಭೂಕಂಪ ಸಂಭವಿಸಿತ್ತು. ದೆಹಲಿ, ರಾಷ್ಟ್ರೀಯ ರಾಜಧಾನಿ ಪ್ರದೇಶ (ಎನ್‌ಸಿಆರ್) ನಿಂದ ಉತ್ತರಾಖಂಡದವರೆಗೆ ಕಂಪನದ ಅನುಭವವಾಗಿದೆ. ಉತ್ತರಾಖಂಡದ ಪಿಥೋರ್‌ಗಢ್‌ನ ಪೂರ್ವ-ಆಗ್ನೇಯಕ್ಕೆ 101 ಕಿಮೀ ದೂರದಲ್ಲಿ ಭೂಕಂಪ ಸಂಭವಿಸಿದೆ. ಈ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನೇಪಾಳದ ರಾಷ್ಟ್ರೀಯ ಭೂಕಂಪದ ಮಾನಿಟರಿಂಗ್ ಮತ್ತು ಸಂಶೋಧನಾ ಕೇಂದ್ರದ ಅಧಿಕಾರಿಗಳ ಪ್ರಕಾರ, ಭೂಕಂಪದ ಕೇಂದ್ರಬಿಂದುವು ಬಜಾಂಗ್ ಜಿಲ್ಲೆಯ ಪಟಾಡಬಲ್‌ನಲ್ಲಿ 10 ಕಿಲೋಮೀಟರ್ ಆಳದಲ್ಲಿ 29.28 ಡಿಗ್ರಿ ಉತ್ತರದಲ್ಲಿ, ರೇಖಾಂಶ 81.20 ಡಿಗ್ರಿ ಪೂರ್ವದಲ್ಲಿದೆ. ಒಂದು ವಾರದಲ್ಲಿ ನೇಪಾಳದಲ್ಲಿ ಸಂಭವಿಸಿದ ಮೂರನೇ ಭೂಕಂಪ ಇದಾಗಿದೆ. ಆದರೆ, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
An earthquake with a magnitude of 6.1 on the Richter Scale hit 84 km South Southeast of Toba, Japan today at 13:38:26 UTC: USGS pic.twitter.com/tYyNbBhGkI
— ANI (@ANI) November 14, 2022
ಕಠ್ಮಂಡುವಿನಿಂದ ಪಶ್ಚಿಮಕ್ಕೆ 460 ಕಿಮೀ ದೂರದಲ್ಲಿರುವ ಬಜಾಂಗ್ ಜಿಲ್ಲೆಗೆ ರಾತ್ರಿ 7.57ಕ್ಕೆ ಅಪ್ಪಳಿಸಿದ್ದು, ಜನರು ಭಯಭೀತರಾಗಿ ಮನೆಯಿಂದ ಹೊರಗೆ ಓಡಿದ್ದಾರೆ. ಹಿಮಾಚಲ ಪ್ರದೇಶದ ಇತರ ಜಿಲ್ಲೆಗಳು, ಉತ್ತರಾಖಂಡ್, ಬಿಜ್ನೋರ್, ಮುಜಾಫರ್ ನಗರ ಮತ್ತು ಪಶ್ಚಿಮ ಉತ್ತರ ಪ್ರದೇಶದ ಶಾಮ್ಲಿಯಲ್ಲಿ ಭೂಕಂಪದ ಅನುಭವವಾಗಿದೆ. ಸುಮಾರು 10 ಸೆಕೆಂಡುಗಳ ಕಾಲ ಭೂಮಿ ಕಂಪಿಸಿತು ಎಂದು ನೋಯ್ಡಾ ನಿವಾಸಿಗಳು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಶನಿವಾರ ಸಂಜೆ 4:15ಕ್ಕೆ ಉತ್ತರಾಖಂಡದಲ್ಲಿ 3.4 ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದರ ಕೇಂದ್ರವು ಪೌಡಿ ಗರ್ವಾಲ್ ಪ್ರದೇಶದಲ್ಲಿದೆ. ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದ ಮಾಹಿತಿಯ ಪ್ರಕಾರ, ಉತ್ತರಾಖಂಡ-ನೇಪಾಳ ಗಡಿಯುದ್ದಕ್ಕೂ ಹಿಮಾಲಯ ಪ್ರದೇಶದಲ್ಲಿ ನವೆಂಬರ್ 8 ಮತ್ತು 12 ರ ನಡುವೆ ಕನಿಷ್ಠ ಎಂಟು ಭೂಕಂಪಗಳು ಸಂಭವಿಸಿವೆ. ಭೂಕಂಪದ ಕೇಂದ್ರಬಿಂದು ನೇಪಾಳದ ಸಿಲೋಂಗ್ ನಗರದಿಂದ ಮೂರು ಕಿಲೋಮೀಟರ್ ದೂರದಲ್ಲಿದೆ, ಆದರೆ ಭಾರತ, ಚೀನಾ ಮತ್ತು ನೇಪಾಳದಲ್ಲಿ ಕಂಪನದ ಅನುಭವವಾಗಿದೆ ಎಂದು ಪಿಥೋರ್ಘರ್‌ನ ವಿಪತ್ತು ನಿರ್ವಹಣಾ ಅಧಿಕಾರಿ ಬಿಎಸ್ ಮಹಾರ್ ಹೇಳಿದ್ದಾರೆ.








