ತಾಲಿಬಾನಿಗಳ ಕಪಿಮುಷ್ಠಿಯಲ್ಲಿರುವ ಅಫ್ಗಾನ್ ನಲ್ಲಿ ಭೂಕಂಪನ
ಅಫ್ಗಾನ್ : ಇಡೀ ಅಫ್ಗಾನ್ ಅನ್ನೇ ಸ್ಮಶಾಣದಂತೆ ಮಾಡಿ ಹೆಣಗಳ ರಾಶಿಗಳ ಮೇಲೆ ಸಾಮ್ರಾಜ್ಯಕಟ್ಟುಕೊಂಡು ಅಕ್ಷರಸಹ ಅಲ್ಲಿನ ಜನರಿಗೆ ನರಕ ದರ್ಶನ ಮಾಡಿಸುತ್ತಿದ್ದಾರೆ ರಾಕ್ಷಸ ತಾಲಿಬಾನಿಗಳು.. ಈ ನಡುವೆ ಈ ರಾಕ್ಷಸರ ಕಪಿಮುಷ್ಠಿಗೆ ಸಿಲುಕಿರುವ ಅಫ್ಗಾನ್ ನಲ್ಲಿ ಭೂಕಂಪನ ಉಂಟಾಗಿದೆ.
ಹೌದು.. ಗುರುವಾರ ( ಆಗಸ್ಟ್ 19) ಬೆಳಿಗ್ಗೆ ಸುಮಾರು 11.22ರ ಹೊತ್ತಿಗೆ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪನದಲ್ಲಿ 4.5 ರಷ್ಟು ತೀವ್ರತೆ ದಾಖಲಾಗಿರುವುದಾಗಿ ಭಾರತದ ರಾಷ್ಟ್ರೀಯ ಭೂಕಂಪನ ಮಾಪನಸಾಸ್ತ್ರ ಕೇಂದ್ರ ತಿಳಿಸಿದೆ. ಇನ್ನೂ ಹಿಂದೂ ಕುಶ್ ಪ್ರದೇಶ ಭೂಕಂಪನದ ಕೇಂದ್ರ ಬಿಂದುವಾಗಿದ್ದು, 92. ಕಿ. ಮೀ ಆಳದಲ್ಲಿ ಭೂಕಂಪನ ಸಂಭವಿಸಿದೆ. ಪ್ರಾಥಮಿಕ ವರದಿಯಲ್ಲಿ ತಿಳಿಸಿರುವಂತೆ ಜಬಲ್ ಸರಜ್ , ಬೆಜಾರಕ್ ಸೇರಿದಂತೆ ಹಲವೆಡೆ ಭೂಮಿ ಕಂಪಿಸಿದೆ ಎನ್ನಲಾಗಿದೆ.
ಅಫ್ಗಾನಿಸ್ತಾನವನ್ನು ಸ್ಮಶಾಣ ಮಾಡಿದ ತಾಲೀಬಾನಿಗಳನ್ನು ಸ್ವಾತಂತ್ರ್ಯ ಹೋರಾಟಗಾರರಿಗೆ ಹೋಲಿಸಿದ ಸಂಸದನ ವಿರುದ್ಧ ಕೇಸ್..!
ಇಡೀ ಅಫ್ಗಾನ್ ಅನ್ನೇ ಸ್ಮಶಾಣದಂತೆ ಮಾಡಿ ಹೆಣಗಳ ರಾಶಿಗಳ ಮೇಲೆ ಸಾಮ್ರಾಜ್ಯಕಟ್ಟುಕೊಂಡು ಅಕ್ಷರಸಹ ಅಲ್ಲಿನ ಜನರಿಗೆ ನರಕ ದರ್ಶನ ಮಾಡಿಸುತ್ತಿರುವ ತಾಲಿಬಾನರು ಉಗ್ರರೇ ಅಲ್ಲ ಪಾಪ ಸಾಮಾನ್ಯ ನಾಗರಿಕರು ಎಂದಿದ್ರು ಈ ಹಿಂದೆ ಪಾಕ್ ನ ಪ್ರದಾನಿ ಇಮ್ರಾನ್ ಸಾಹೇಬ್ರು.. ಇದೀಗ ಅಫ್ಗಾನ್ ನಲ್ಲಿ ಉಗ್ರರ ಸರ್ಕಾರ ರಚನೆಯಾಗಿದೆ.. ಪರೋಕ್ಷವಾಗಿ ತಾಲೀಬಾನಿಗಳನ್ನ ಕಪಟಿ ಚೀನಾ , ಉಗ್ರರ ಡ್ಯಾಡಿ ಪಾಕಿಸ್ತಾನ ಬೆಂಬಲಿಸಿವೆ.. ತಮ್ಮ ದೇಶದ ಜನ ಬಿಕಾರಿಯಾದ್ರೂ ಪರವಾಗಿಲ್ಲ ಉಗ್ರರು ಚನ್ನಾಗಿದ್ರೆ ಸಾಕು ಅನ್ನೋದು ಪಾಕಿಸ್ತಾನದ ಧ್ಯೇಯೋದ್ದೇಶ.. ಅದಕ್ಕೆ ನೋಡಿ ತಮ್ಮ ದೇಶ ಬಿಕಾರಿಯಾದ್ರೂ ತನ್ನ ಡ್ಯಾಡಿ ಚೀನಾ ಬಳಿ ಕೈ ಕಾಲಿಡಿದು ಸಾಲ ಸೂಲ ಮಾಡಿ ಉಗ್ರರ ಪೋಷಣೆ ಮಾಡುತ್ತಿದೆ.. ಆದ್ರೆ ಮುಸ್ಲಿಂ ರಾಷ್ಟ್ರಗಳಿಗೆ ತಮ್ಮ ಬೆಂಬಲ ಅನ್ನೋ ಮಾನ್ಯ ಇಮ್ರಾನ್ ಖಾನ್ ಅವರು ಮುಸ್ಲಿಂ ರಾಷ್ಟ್ರದ ಜನರಿಗೆ ತಾಲೀಬಾನಿಗಳು ನರಕ ದರ್ಶನ ಮಾಡಿಸುತ್ತಿದ್ರು ತುಟಿ ಬಿಚ್ಚದೇ ಮೌನ ವಹಿಸಿದ್ದಾರೆ.. ಬದಲಾಗಿ ತಾಲಿಬಾನಿಗಳ ವಿಜಯದಲ್ಲಿ ಗೆಲುವಿನ ನಗೆ ಬೀರುತ್ತಿದ್ದಾರೆ..