Earthquake | ಜಮಖಂಡಿಯಲ್ಲಿ ಕಂಪಿಸಿದ ಭೂಮಿ
ಬಾಗಲಕೋಟೆ : ಉತ್ತರ ಕರ್ನಾಟಕದ ಭಾಗದ ಜನರಿಗೆ ಪದೇ ಪದೇ ಭೂಕಂಪನದ ಅನುಭವ ಆಗುತ್ತಲೇ ಇದೆ.
ಇತ್ತೀಚೆಗೆ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಜನರಿಗೆ ಭೂ ಕಂಪಿಸಿದ ಅನುಭವ ಆಗಿತ್ತು.
ಇದೀಗ ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಭೂಕಂಪನದ ಅನುಭವವಾಗಿದೆ.
ಮೊದಲು ಟೈರ್ ಬ್ಲಾಸ್ಟ್ ತರಹ ಶಬ್ದ ಬಂದಿದ್ದು, ಬಳಿಕ ಎರಡು ಸೆಕೆಂಡ್ ಗಳ ಭೂಮಿ ಕಂಪಿಸಿದೆ ಎಂದು ಜಮಖಂಡಿ ಹುಡ್ಕೊ ಕಾಲೋನಿ ಜನರು ತಿಳಿಸಿದ್ದಾರೆ.
ಇಂದು ಬೆಳಿಗ್ಗೆ ೬ ಗಂಟೆ ೨೧ ನಿಮಿಷದ ವೇಳೆ ಕಂಪನದ ಅನುಭವವಾಗಿದೆ. ಇದರಿಂದ ಜನರು ಭಯಭೀತಗೊಂಡಿದ್ದಾರೆ.