ಜಪಾನ್ ನಲ್ಲಿ ಪ್ರಬಲ ಭೂಕಂಪ – 120 ಮಂದಿಗೆ ಗಾಯ, ಹಲವರ ಸ್ಥಿತಿ ಗಂಭೀರ
ಜಪಾನ್ : ಜಪಾನಿನ್ ನಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ಹೆದ್ದಾರಿಯಲ್ಲಿ ಭೂ ಕುಸಿತ ಉಂಟಾಗಿದೆ. ಭೂ ಕಂಪನದಿಂದಾಗಿ ಬುಲೆಟ್ ರೈಲು ಮಾರ್ಗಗಳು ಮತ್ತು ಹಲವು ಕಟ್ಟಡಗಳು ಹಾನಿಗೊಳಗಾಗಿವೆ. ಹಲವೆಡೆ ವಿದ್ಯುತ್ ಕಡಿತವೂ ಆಗಿದೆ. ತಡರಾತ್ರಿ ಫುಕುಶಿಮಾ ಮತ್ತು ಮಿಯಾಗಿ ಪ್ರದೇಶದಲ್ಲಿ ಭೂ ಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 7.3ರಷ್ಟು ದಾಖಲಾಗಿದೆ.
ಆಂಧ್ರಪ್ರದೇಶ: ಕರ್ನೂಲ್ನಲ್ಲಿ ಭೀಕರ ರಸ್ತೆ ಅಪಘಾತ – 14 ಮಂದಿ ಸ್ಥಳದಲ್ಲೇ ದುರ್ಮರಣ
ಇನ್ನೂ ಭೂಕಂಪದಿಂದಾಗಿ 120 ಕ್ಕೂ ಹೆಚ್ಚು ಮಂದಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನೂವರೆಗೂ ಯಾವುದೇ ಸಾವಿನ ಪ್ರಕರಣ ದಾಖಲಾಗಿಲ್ಲ ಎಂದು ಜಪಾನ್ ನ ಮುಖ್ಯ ಸಂಪುಟ ಕಾರ್ಯದರ್ಶಿ ಕತ್ಸುನೊಬು ಕಟು ತಿಳಿಸಿದ್ದಾರೆ. ಸಮುದ್ರದ 55 ಕಿ.ಮೀ ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ಪತ್ತೆಯಾಗಿದೆ.ಇದರಿಂದಾಗಿ ಸುನಾಮಿ ಸಂಭವಿಸಿಲ್ಲ. ಬುಲೆಟ್ ರೈಲು ಸೇವೆಗಳನ್ನು ಸೋಮವಾರದವರೆಗೂ ಸ್ಥಗಿತಗೊಳಿಸಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel