ಮನೆಯಲ್ಲೇ ಕುಳಿತು ಆಧಾರ್ ಕಾರ್ಡ್ ನಲ್ಲಿ ಮಾಹಿತಿ ಅಪ್ ಡೇಟ್ ಮಾಡುವುದು ಹೇಗೆ – ಯುಐಡಿಎಐ ನಿಂದ ಮತ್ತೊಮ್ಮೆ ಈ ಸೌಲಭ್ಯ Update information Aadhaar Cards
ಹೊಸದಿಲ್ಲಿ, ಡಿಸೆಂಬರ್24: ಯುಐಡಿಎಐ ಮತ್ತೆ ಕೋಟಿ ಆಧಾರ್ ಕಾರ್ಡ್ ಬಳಕೆದಾರರಿಗಾಗಿ ಅಗತ್ಯ ನಿರ್ಧಾರವನ್ನು ಕೈಗೊಂಡಿದೆ. ಆಧಾರ್ ಕಾರ್ಡ್ ನಲ್ಲಿ ಮಾಹಿತಿ ಅಪ್ ಡೇಟ್ ಮಾಡಲು ಬಯಸುವವರು ಮನೆಯಲ್ಲಿ ಕುಳಿತು ವಿವರಗಳನ್ನು ನವೀಕರಿಸಬಹುದಾಗಿದೆ. ಈ ನಡುವೆ ವಿಳಾಸ ಹೊರತುಪಡಿಸಿ ಇತರ ವಿವರಗಳನ್ನು ನವೀಕರಿಸುವ ಸೌಲಭ್ಯವನ್ನ UIDAI ನಿಲ್ಲಿಸಿತ್ತು. ಆದರೆ ಇದೀಗ ಮತ್ತೊಮ್ಮೆ ಈ ಸೌಲಭ್ಯವನ್ನು ಆರಂಭಿಸಲಾಗಿದೆ. Update information Aadhaar Cards
ಈಗ ನೀವು ಮನೆಯಲ್ಲಿ ಕುಳಿತುಕೊಂಡು ಆಧಾರ್-ಸಂಬಂಧಿತ ಜನಸಂಖ್ಯಾ ವಿವರಗಳನ್ನು ನವೀಕರಿಸಬಹುದು. ಇದಕ್ಕಾಗಿ ಈಗ ಎಲ್ಲಿಯೂ ಹೋಗಬೇಕಾದ ಅಗತ್ಯವಿಲ್ಲ. ಈ ವಿವರಗಳಲ್ಲಿ, ಕಾರ್ಡ್‌ದಾರರು ತಮ್ಮ ಹೆಸರು, ವಿಳಾಸ, ಹುಟ್ಟಿದ ದಿನಾಂಕ ಮತ್ತು ಲಿಂಗವನ್ನು ಸುಲಭವಾಗಿ ನವೀಕರಿಸಲು ಸಾಧ್ಯವಾಗುತ್ತದೆ.
Uidai.gov.in/images/AadhaarHandbook2020.pdf ನಲ್ಲಿ ಆಧಾರ್ ಕೈಪಿಡಿಯ ಪಿಡಿಎಫ್ ಫೈಲ್ ಇದೆ. ಈ ಕೈಪಿಡಿಯಲ್ಲಿ, ಆಧಾರ್‌ನಲ್ಲಿ ಹೆಸರನ್ನು ಬದಲಾಯಿಸುವುದರಿಂದ ಯಾವುದೇ ರೀತಿಯ ತಿದ್ದುಪಡಿಗಳನ್ನು ಸರಿಪಡಿಸುವ ಸಂಪೂರ್ಣ ಪ್ರಕ್ರಿಯೆಯನ್ನು ನೀಡಲಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಯುಐಡಿಎಐ, ಮನೆಯಲ್ಲೇ ಕುಳಿತು ಯುಐಡಿಎಐ ವೆಬ್ ಸೈಟ್ʼನಲ್ಲಿ ನಿಮ್ಮ ಹೆಸರು, ವಿಳಾಸ, ಜನ್ಮ ದಿನಾಂಕ ಮತ್ತು ಲಿಂಗವನ್ನು ಅಪ್ ಡೇಟ್ ಮಾಡಿ ಎಂದು ಹೇಳಿದೆ.
https://ssup.uidai.gov.in/ssup/ ಲಿಂಕ್ ಬಳಸಿ
ಮನೆಯಿಂದಲೇ ಈಗ ಆಧಾರ್ ಕಾರ್ಡ್ ಅಪ್ ಡೇಟ್ ಮಾಡಬಹುದಾಗಿದೆ.
ಈ ನಡುವೆ UIDAI ವಿಳಾಸವನ್ನು ಹೊರತುಪಡಿಸಿ, ಉಳಿದ ಮಾಹಿತಿಗಳನ್ನು ನವೀಕರಿಸುವ ಸೌಲಭ್ಯವನ್ನು ನಿರಾಕರಿಸಿತ್ತು. ಇದರಿಂದಾಗಿ ಉಳಿದ ಮಾಹಿತಿಗಳನ್ನು, ಅಪ್ ಡೇಟ್ ಮಾಡಲು ಕೇಂದ್ರಕ್ಕೆ ಹೋಗಬೇಕಾದ ಅನಿವಾರ್ಯತೆ ಇತ್ತು. ಆದರೆ ಈಗ ಮತ್ತೆ ಮನೆಯಲ್ಲಿಯೇ ಕುಳಿತು ಅಪ್ಡೇಟ್ ಮಾಡಿಕೊಳ್ಳಬಹುದು.
ಸುಕನ್ಯಾ ಸಮೃದ್ಧಿ ಉಳಿತಾಯ ಯೋಜನೆ – ವರ್ಷಕ್ಕೆ ಕೇವಲ 250 ರೂಪಾಯಿ ಹೂಡಿಕೆ ಮಾಡಿ ಮಗಳ ಭವಿಷ್ಯ ರೂಪಿಸಿ
ಮನೆಯಲ್ಲಿಯೇ ಕುಳಿತು ಆಧಾರ್ ಕಾರ್ಡ್ ನವೀಕರಿಸುವುದು ಹೇಗೆ..?
ಇದಕ್ಕಾಗಿ ನೀವು ಮೊದಲು UIDAI ಅಧಿಕೃತ ವೆಬ್ ಸೈಟ್ ಗೆ ಭೇಟಿ ಕೊಡಿ.
ಇಲ್ಲಿ ನೀವು ‘ನನ್ನ ಆಧಾರ್’ ವಿಭಾಗಕ್ಕೆ ಹೋಗಿ ‘ ಆಧಾರ ಅನ್ನು ಅಪ್ ಡೇಟ್ ಮಾಡಿ’ ಕ್ಲಿಕ್ ಮಾಡಿ.
ನಂತರ, ಕೇಳಿರುವ ಮಾಹಿತಿಯನ್ನು ಟೈಪ್ ಮಾಡಿ. ಬಳಿಕ ‘ಆನ್ ಲೈನ್ ನಲ್ಲಿ ಅಪ್ ಡೇಟ್ ಮಾಡಿ’ ಮೇಲೆ ಕ್ಲಿಕ್ ಮಾಡಿ.
ಇದಾದ ನಂತರ ಹೊಸ ಪುಟ ತೆರೆದುಕೊಳ್ಳುತ್ತದೆ.
ಇದಲ್ಲದೆ, ನೀವು ನೇರವಾಗಿ https://ssup.uidai.gov.in/ssup/ ಸಹ ಭೇಟಿ ನೀಡಬಹುದು.
ಇಲ್ಲಿ ನೀವು ಆಧಾರ್ ಅಪ್ ಡೇಟ್ ಮಾಡಿ ಮೇಲೆ ಕ್ಲಿಕ್ ಮಾಡಿ .
ಹೊಸದಾಗಿ ತೆರೆಯಲಾದ ಪುಟದಲ್ಲಿ 12 ಅಂಕಿಗಳ ಆಧಾರ್ ಸಂಖ್ಯೆಯನ್ನು ನಮೂದಿಸಿ.
ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ಮತ್ತು OTP ಯನ್ನು ಕಳುಹಿಸಿ ಕ್ಲಿಕ್ ಮಾಡಿ .
ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿಯನ್ನು ಟೈಪ್ ಮಾಡಿ.
ಈಗ ಹೊಸದಾಗಿ ತೆರೆಯಲಾದ ಪುಟದಲ್ಲಿ ನಿಮಗೆ ಎರಡು ಆಯ್ಕೆಗಳು ದೊರೆಯಲಿವೆ :
1) ಪೂರಕ ದಾಖಲೆ ಪುರಾವೆಯೊಂದಿಗೆ ವಿಳಾಸ ಸೇರಿದಂತೆ ಜನಸಂಖ್ಯಾ ವಿವರಗಳ ನವೀಕರಣ
2) ವಿಳಾಸ ದೃಢೀಕರಣ ಪತ್ರದ ಮೂಲಕ ವಿಳಾಸ ಪರಿಷ್ಕರಣೆ
ಹೆಸರು, ಜನ್ಮ ದಿನಾಂಕ, ಲಿಂಗ, ವಿಳಾಸ ವನ್ನು ದಾಖಲೆ ಪುರಾವೆಯೊಂದಿಗೆ ನವೀಕರಿಸಲು ‘ಅಪ್ ಡೇಟ್ ಡೆಮೊಗ್ರಾಪ್ಡೇಟಾ’ ಕ್ಲಿಕ್ ಮಾಡಬೇಕು.
ನಂತರ, ನೀವು ನವೀಕರಿಸಬೇಕೆಂದಿರುವ ವಿವರವನ್ನು ಆಯ್ಕೆ ಮಾಡಬೇಕು. ಇದಾದ ನಂತರ, ಮುಂದಿನ ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ.
ಆನ್ ಲೈನ್ ನಲ್ಲಿ ಆಧಾರ್ ಕಾರ್ಡ್ ನವೀಕರಿಸುವಾಗ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ನಿಮ್ಮ ಬಳಿ ಇರುವುದು ಅವಶ್ಯಕ. ಯಾಕೆಂದರೆ, ಪ್ರಕ್ರಿಯೆ ಪೂರ್ಣಗೊಳಿಸಲು ಕಳುಹಿಸುವ ಎಲ್ಲಾ OTPಗಳು ಅದೇ ಸಂಖ್ಯೆಗೆ ಕಳುಹಿಸಲಾಗುತ್ತದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಶೂನ್ಯ ಕ್ಯಾಲೊರಿಗಳನ್ನು ಹೊಂದಿರುವ ಸೂಪರ್ ಪವರ್‌ಫುಲ್ ಆಹಾರಗಳು https://t.co/5MztkNWqE9
— Saaksha TV (@SaakshaTv) December 21, 2020
ನಿಮ್ಮ ಆಧಾರ್ ಸಂಖ್ಯೆ ದುರ್ಬಳಕೆ ಆಗಿದೆಯೇ? ತಿಳಿಯುವುದು ಹೇಗೆ – ಇಲ್ಲಿದೆ ಮಾಹಿತಿhttps://t.co/iPUk4egRxi
— Saaksha TV (@SaakshaTv) December 21, 2020