“ ಜನರು ಹೆಚ್ಚು ಬೀಫ್ ತಿನ್ನಲು ನಾನು ಪ್ರೋತ್ಸಾಹಿಸುತ್ತೇನೆ ” – ಬಿಜೆಪಿ ಸಚಿವ
ಮೇಘಾಲಯ : ಒಂದೆಡೆ ಬಿಜೆಪಿ ನಾಯಕರು ಗೋ ಹತ್ಯೆ ನಿಷೇಧದ ಮಾತುಗಳನ್ನ ಆಡ್ತಿದ್ದಾರೆ. ಅಷ್ಟೇ ಅಲ್ಲದೇ ಅನೇಕ ರಾಜ್ಯಗಳಲ್ಲಿ ಗೋಹತ್ಯೆ ನಿಷೇಧಿಸಲಾಗಿದೆ.. ಆದ್ರೆ ಇಲ್ಲೊಬ್ಬ ಬಿಜೆಪಿ ಸಚಿವರೇ ಚಿಕನ್, ಮಟನ್ ಹಾಗೂ ಮೀನಿಗಿಂತ ಹೆಚ್ಚಾಗಿ ರಾಜ್ಯದ ಜನರು ಬೀಫ್ ತಿನ್ನಬೇಕೆಂದು ಬೋಧನೆ ಮಾಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ..
ಹೌದು ಮೇಘಾಲಯದ ಬಿಜೆಪಿ ಸರಕಾರದಲ್ಲಿ ಸಚಿವರಾಗಿರುವ ಸನ್ಬೋರ್ ಶುಲ್ಲೈ ಇಂತಹದೊಂದು ಹೇಳಿಕೆ ನೀಡಿದ್ದಾರೆ. ಕಳೆದ ವಾರವಷ್ಟೇ ಸಂಪುಟಕ್ಕೆ ಸೇರ್ಪಡೆಗೊಂಡ ಹಾಗೂ ಪಶುಸಂಗೋಪನಾ ಮತ್ತು ಪಶುವೈದ್ಯಕೀಯ ಖಾತೆಯ ಜವಾಬ್ದಾರಿ ಹೊತ್ತಿರುವ ಶುಲ್ಲೈ ಹೇಳಿಕೆ ಈಗ ಚರ್ಚೆಗೆ ಗ್ರಾಸವಾಗಿದೆ. ಈ ಹೇಳಿಕೆ ನೀಡಿ ಪ್ರಜಾಪ್ರಭುತ್ವ ದೇಶದಲ್ಲಿ ಎಲ್ಲರಿಗೂ ತಮಗಿಷ್ಟವಾದುದನ್ನು ತಿನ್ನುವ ಸ್ವಾತಂತ್ರ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.
ಅಲ್ಲದೇ ಚಿಕನ್, ಮಟನ್ ಅಥವಾ ಮೀನಿಗಿಂತ ಜನರು ಹೆಚ್ಚು ಬೀಫ್ ತಿನ್ನಲು ನಾನು ಪ್ರೋತ್ಸಾಹಿಸುತ್ತೇನೆ. ಹೀಗೆ ಮಾಡುವುದರಿಂದ, ಬಿಜೆಪಿ ಸರಕಾರ ಗೋಹತ್ಯೆಯ ಮೇಲೆ ನಿಷೇಧ ಹೇರಲಿದೆ ಎಂಬ ಭಾವನೆ ದೂರವಾಗಲಿದೆ ಎಂದು ಹೇಳಿಕೊಂಡಿದ್ದಾರೆ.
ಅಷ್ಟೇ ಅಲ್ದೇ ನೆರೆಯ ಅಸ್ಸಾಂ ರಾಜ್ಯದಲ್ಲಿ ಹೊಸ ಗೋ ಕಾಯಿದೆ ಜಾರಿಯಾಗಿರುವುದರಿಂದ ಅಲ್ಲಿಂದ ಮೇಘಾಲಯಕ್ಕೆ ಗೋಸಾಗಾಟ ಬಾಧಿತವಾಗದಂತೆ ನೋಡಿಕೊಳ್ಳಲು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಅವರಿಗೆ ಪತ್ರ ಬರೆಯುವುದಾಗಿಯೂ ಮಾಹಿತಿ ನೀಡಿದ್ದಾರೆ.
ಅಮೆರಿಕಾದ ಪ್ರಜೆಗಳನ್ನ ವಂಚಿಸುತ್ತಿದ್ದ ಕಾಲ್ ಸೆಂಟರ್ – 65 ಜನರು ಅರೆಸ್ಟ್..!