ADVERTISEMENT
Saturday, July 11, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಬಿಜೆಪಿ ಗೆಲ್ಲಿಸಲು ಚುನಾವಣಾ ಆಯೋಗದ ಸಂಚು: ಆಯೋಗ ಕೇಂದ್ರದ ಕಪಿಮುಷ್ಠಿಯಲ್ಲಿದೆ – ಪ್ರಿಯಾಂಕ್ ಖರ್ಗೆ ಸ್ಫೋಟಕ ಆರೋಪ

Shwetha by Shwetha
July 11, 2026
in ರಾಜ್ಯ, Newsbeat, Politics, State, ರಾಜಕೀಯ
Share on FacebookShare on TwitterShare on WhatsappShare on Telegram

ಬೆಂಗಳೂರು: ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಏಕಕಾಲಕ್ಕೆ ಹಲವು ಗಂಭೀರ ಆರೋಪಗಳನ್ನು ಮಾಡುವ ಮೂಲಕ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ. ಚುನಾವಣಾ ಆಯೋಗವು ಬಿಜೆಪಿಯನ್ನು ಗೆಲ್ಲಿಸಲು ಸಂಚು ರೂಪಿಸುತ್ತಿದೆ ಎಂದು ಹೇಳುವ ಮೂಲಕ ಅವರು ನೇರ ವಾಗ್ಧಾಳಿ ನಡೆಸಿದ್ದಾರೆ.

ಚುನಾವಣಾ ಆಯೋಗ ಕೇಂದ್ರದ ಕಪಿಮುಷ್ಠಿಯಲ್ಲಿ: ಗಂಭೀರ ಆರೋಪ

Related posts

ಬಂಗಾಳದಲ್ಲಿ ಯೋಗಿ ಮಾಡೆಲ್ ದರ್ಬಾರ್- ಕಾಮುಕನಿಗೆ ಎನ್‌ಕೌಂಟರ್ ಮೂಲಕ ಯಮಲೋಕದ ದರ್ಶನ: ಮಮತಾ ಬ್ಯಾನರ್ಜಿಗೆ ಮೊಟ್ಟೆ ಏಟು- ಎನ್‌ಕೌಂಟರ್ ವಿರೋಧಿಸಿದ ಟಿಎಂಸಿಗೆ ಸಾರ್ವಜನಿಕರ ಆಕ್ರೋಶದ ಬಿಸಿ

ಬಂಗಾಳದಲ್ಲಿ ಯೋಗಿ ಮಾಡೆಲ್ ದರ್ಬಾರ್- ಕಾಮುಕನಿಗೆ ಎನ್‌ಕೌಂಟರ್ ಮೂಲಕ ಯಮಲೋಕದ ದರ್ಶನ: ಮಮತಾ ಬ್ಯಾನರ್ಜಿಗೆ ಮೊಟ್ಟೆ ಏಟು- ಎನ್‌ಕೌಂಟರ್ ವಿರೋಧಿಸಿದ ಟಿಎಂಸಿಗೆ ಸಾರ್ವಜನಿಕರ ಆಕ್ರೋಶದ ಬಿಸಿ

July 11, 2026
ಉದಯನಿಧಿ ಆರೋಪಕ್ಕೆ ಸಚಿವ ರಾಮಲಿಂಗಾ ರೆಡ್ಡಿ ತಿರುಗೇಟು

ಉದಯನಿಧಿ ಆರೋಪಕ್ಕೆ ಸಚಿವ ರಾಮಲಿಂಗಾ ರೆಡ್ಡಿ ತಿರುಗೇಟು

July 11, 2026

ರಾಜ್ಯ ಸರ್ಕಾರ ನೀಡುತ್ತಿರುವ ವಾಸಸ್ಥಳ ಪ್ರಮಾಣಪತ್ರದ ಬಗ್ಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಚುನಾವಣಾ ಆಯೋಗವು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದೆ ಎಂದು ಆರೋಪಿಸಿದರು. ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ಅಡ್ಡಾದಿಡ್ಡಿಯಾಗಿ ಡಿಲೀಟ್ ಮಾಡಲಾಗುತ್ತಿದೆ. ಎಸ್‌ಐಆರ್ ವ್ಯವಸ್ಥೆಯಲ್ಲಿ ಯಾವುದೇ ತರ್ಕವಿಲ್ಲ. ನಾಗರಿಕತ್ವ ಸಾಬೀತುಪಡಿಸಲು ಪಾಸ್‌ಪೋರ್ಟ್ ಕೇಳುವುದು ಎಷ್ಟು ಸರಿ? ಇವೆಲ್ಲವೂ ಬಿಜೆಪಿಯನ್ನು ಗೆಲ್ಲಿಸಲು ಆಯೋಗ ಮಾಡುತ್ತಿರುವ ಸಂಚು ಎಂದು ಕಿಡಿಕಾರಿದರು. ಮುಂದಿನ ಆರು ತಿಂಗಳಲ್ಲಿ ಏನೇನು ಬದಲಾವಣೆಗಳಾಗುತ್ತವೆ ಎಂದು ಕಾದು ನೋಡಿ ಎಂದು ಅವರು ಎಚ್ಚರಿಸಿದರು.

ಪಾರದರ್ಶಕತೆಯ ಪ್ರಶ್ನೆ

ಬೆಳಗಾವಿಯಲ್ಲಿ ನಡೆಯುತ್ತಿರುವ ಆರ್‌ಎಸ್‌ಎಸ್ ವಾರ್ಷಿಕ ಸಭೆಯ ಬಗ್ಗೆ ಮಾತನಾಡಿದ ಸಚಿವರು, ಅವರು ಖಾಸಗಿಯಾಗಿ ಏನು ಬೇಕಾದರೂ ಮಾಡಿಕೊಳ್ಳಲಿ, ನಮಗೆ ಅಭ್ಯಂತರವಿಲ್ಲ. ಆದರೆ ವ್ಯವಹಾರದಲ್ಲಿ ಪಾರದರ್ಶಕತೆ ಇರಲಿ ಎಂದು ಒತ್ತಾಯಿಸಿದರು. ರಾಮಮಂದಿರದ ಹುಂಡಿ ಕಳ್ಳತನದ ಬಗ್ಗೆಯೂ ಪ್ರಸ್ತಾಪಿಸಿದ ಅವರು, ಈ ವಿಚಾರದಲ್ಲಿ ಯಾರಿಗೆ ಎಷ್ಟೆಷ್ಟು ಪಾಲು ಸಿಕ್ಕಿದೆ ಎಂಬುದು ಬಹಿರಂಗವಾಗಲಿ. ಬರೀ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೆ ನೀಡುವುದರಿಂದ ಪ್ರಯೋಜನವಿಲ್ಲ ಎಂದು ಲೇವಡಿ ಮಾಡಿದರು.

ಪ್ರಶ್ನೆ ಪತ್ರಿಕೆ ಸೋರಿಕೆ: ಮೋದಿಗೆ ರಾಜೀನಾಮೆ ಪಡೆಯುವ ಶಕ್ತಿ ಇಲ್ಲವೇ?

ಯುಜಿಸಿ ನೆಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಖರ್ಗೆ, ಕಳೆದ ಹತ್ತು ವರ್ಷಗಳಲ್ಲಿ ಸಾಲು ಸಾಲು ಪೇಪರ್ ಲೀಕ್ ಪ್ರಕರಣಗಳು ನಡೆಯುತ್ತಿವೆ. ಇಂತಹ ಸಮಸ್ಯೆಗಳು ಎದುರಾದಾಗ ಪ್ರಧಾನಿ ಮೋದಿ ದೇಶ ಬಿಟ್ಟು ಹೋಗುತ್ತಾರೆ. ಅಮಾಯಕ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತಿರುವುದಕ್ಕೆ ಯಾರು ಹೊಣೆ? ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಪಡೆಯುವ ಶಕ್ತಿ ಮೋದಿಯವರಿಗಿಲ್ಲವೇ? ಹಾಗಿದ್ದಲ್ಲಿ ಪ್ರಧಾನಿಗಳಿಗಿಂತ ಸಚಿವರೇ ಪವರ್ ಫುಲ್ ಆಗಿದ್ದಾರೆಯೇ ಎಂದು ಪ್ರಶ್ನಿಸಿದರು.

ನೈತಿಕ ಪೊಲೀಸ್‌ಗಿರಿ ವಿರುದ್ಧ ಕಠಿಣ ಎಚ್ಚರಿಕೆ

ದಾವಣಗೆರೆಯಲ್ಲಿ ನಡೆದ ಲವ್ ಜಿಹಾದ್ ಪ್ರಕರಣ ಮತ್ತು ಭಜರಂಗದಳದ ದಾಳಿಯ ಕುರಿತು ಪ್ರತಿಕ್ರಿಯಿಸಿದ ಸಚಿವರು, ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದು ಸ್ಪಷ್ಟಪಡಿಸಿದರು. ದೂರು ನೀಡಲು ಪೊಲೀಸ್ ಠಾಣೆಗಳಿವೆ, ಅಲ್ಲಿ ದೂರು ನೀಡಿ. ಅದನ್ನು ಬಿಟ್ಟು ಸಮಾಂತರ ಸರ್ಕಾರ ನಡೆಸಲು ಹೊರಟರೆ ಅಥವಾ ನೈತಿಕ ಪೊಲೀಸ್‌ಗಿರಿ ಮಾಡಿದರೆ ನಾವು ಸುಮ್ಮನಿರುವುದಿಲ್ಲ. ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮಹಾರಾಷ್ಟ್ರದ ಗಡಿ ವಿವಾದದ ಬಗ್ಗೆ ಮಾತನಾಡಿದ ಸಚಿವರು, ನಾಡಿನ ನೆಲ, ಜಲ ಮತ್ತು ಭಾಷೆಯ ವಿಷಯದಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಕನ್ನಡಿಗರ ಬಗ್ಗೆ ನಮಗೂ ಅಪಾರ ಪ್ರೀತಿ ಇದೆ, ಯಾರೂ ಪ್ರಚೋದನಾಕಾರಿ ಮಾತನಾಡಬಾರದು ಎಂದು ಮರಾಠಿ ನಾಯಕರಿಗೆ ತಿಳಿಸಿದರು. ಇದೇ ವೇಳೆ ಬಿಜೆಪಿಯಲ್ಲಿ ನಾಯಕತ್ವದ ಗೊಂದಲವಿದ್ದು, ಅಡ್ಡ ಮತದಾನ ನಡೆದರೂ ಯಾರ ವಿರುದ್ಧವೂ ಕ್ರಮ ಕೈಗೊಳ್ಳಲಾಗದ ಸ್ಥಿತಿಯಲ್ಲಿ ಆ ಪಕ್ಷವಿದೆ ಎಂದು ವ್ಯಂಗ್ಯವಾಡಿದರು.

ShareTweetSendShare
Join us on:

Related Posts

ಬಂಗಾಳದಲ್ಲಿ ಯೋಗಿ ಮಾಡೆಲ್ ದರ್ಬಾರ್- ಕಾಮುಕನಿಗೆ ಎನ್‌ಕೌಂಟರ್ ಮೂಲಕ ಯಮಲೋಕದ ದರ್ಶನ: ಮಮತಾ ಬ್ಯಾನರ್ಜಿಗೆ ಮೊಟ್ಟೆ ಏಟು- ಎನ್‌ಕೌಂಟರ್ ವಿರೋಧಿಸಿದ ಟಿಎಂಸಿಗೆ ಸಾರ್ವಜನಿಕರ ಆಕ್ರೋಶದ ಬಿಸಿ

ಬಂಗಾಳದಲ್ಲಿ ಯೋಗಿ ಮಾಡೆಲ್ ದರ್ಬಾರ್- ಕಾಮುಕನಿಗೆ ಎನ್‌ಕೌಂಟರ್ ಮೂಲಕ ಯಮಲೋಕದ ದರ್ಶನ: ಮಮತಾ ಬ್ಯಾನರ್ಜಿಗೆ ಮೊಟ್ಟೆ ಏಟು- ಎನ್‌ಕೌಂಟರ್ ವಿರೋಧಿಸಿದ ಟಿಎಂಸಿಗೆ ಸಾರ್ವಜನಿಕರ ಆಕ್ರೋಶದ ಬಿಸಿ

by Shwetha
July 11, 2026
0

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬರುಯಿಪುರದಲ್ಲಿ ನಡೆದ 12 ವರ್ಷದ ಬಾಲಕಿಯ ಮೇಲಿನ ಅಮಾನುಷ ಗ್ಯಾಂಗ್‌ರೇಪ್ ಮತ್ತು ಕೊಲೆ ಪ್ರಕರಣದ ಮುಖ್ಯ ಆರೋಪಿ ಪ್ರಭಾಸ್ ಮೊಂಡಲ್ ಈಗ ಇತಿಹಾಸ....

ಉದಯನಿಧಿ ಆರೋಪಕ್ಕೆ ಸಚಿವ ರಾಮಲಿಂಗಾ ರೆಡ್ಡಿ ತಿರುಗೇಟು

ಉದಯನಿಧಿ ಆರೋಪಕ್ಕೆ ಸಚಿವ ರಾಮಲಿಂಗಾ ರೆಡ್ಡಿ ತಿರುಗೇಟು

by Shwetha
July 11, 2026
0

ರಾಮಲಿಂಗಾ ರೆಡ್ಡಿ ಅವರು, ಉದಯನಿಧಿ ಸ್ಟಾಲಿನ್ ಅವರ ಕಾವೇರಿ ನೀರು ಬಿಡುಗಡೆ ಕುರಿತ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. ಕರ್ನಾಟಕ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವುದಿಲ್ಲ ಎಂದು ನಾವು...

ದಿನ ಭವಿಷ್ಯ (07-07-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (11-07-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
July 11, 2026
0

ದಿನ ಭವಿಷ್ಯ 11-07-2026 ಮೇಷ ರಾಶಿ ಮೇಷ ರಾಶಿಯವರಿಗೆ ಇಂದು ಮಧ್ಯಮ ಫಲ ಸಿಗಲಿದೆ. ವ್ಯಾಪಾರದಲ್ಲಿ ಹೊಸ ಯೋಜನೆಗಳನ್ನು ಹಾಕಿಕೊಳ್ಳಲು ಇದು ಸಕಾಲವಲ್ಲ. ಇಂದು ಯಾವುದೇ ದೊಡ್ಡ...

mohammad salah

fifaworldcup-2026: ಫುಟ್‍ಬಾಲ್ ಅಂಗಳದ ಈಜಿಪ್ಟ್ ಚಿರತೆ ಮಹಮ್ಮದ್ ಸಲಾಹ್.. ಆಟದಷ್ಟೇ ಹೃದಯ ಗೆದ್ದ ಮಾಣಿಕ್ಯ..!⚽👑🇪🇬 🐆

by admin
July 10, 2026
0

ಒಂದು ಕ್ಷಣ ಕಣ್ಣುಮುಚ್ಚಿ.. ಆಮೇಲೆ ಓದಿ ನೋಡಿ.. ಆಗ ನಿಮ್ಮಲ್ಲೂ ಮೂಡಬಹುದೊಂದು ಭಾವನೆ.. ಹೀಗೂ ಇದೆಯಾ ಅನ್ನೋ ಯೋಚನೆ..! 🚀🔥⚽ ಇದು ಒಂದು ಸಣ್ಣ ಹಳ್ಳಿಯ ಕೆಳ...

ಭಾವಿ ಸಿಎಂ ಎಂಬ ಹಣೆಪಟ್ಟಿ ನನಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ -ನನಗೆ ಪಟ್ಟ ಬೇಡ ಜನರ ಪ್ರೀತಿ ಬೇಕು: ಭಾವಿ ಸಿಎಂ ಎಂಬ ಕೂಗಿಗೆ ಚಿತ್ರದುರ್ಗದಲ್ಲಿ ವಿಜಯೇಂದ್ರ ಖಡಕ್ ಪ್ರತಿಕ್ರಿಯೆ

ಭಾವಿ ಸಿಎಂ ಎಂಬ ಹಣೆಪಟ್ಟಿ ನನಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ -ನನಗೆ ಪಟ್ಟ ಬೇಡ ಜನರ ಪ್ರೀತಿ ಬೇಕು: ಭಾವಿ ಸಿಎಂ ಎಂಬ ಕೂಗಿಗೆ ಚಿತ್ರದುರ್ಗದಲ್ಲಿ ವಿಜಯೇಂದ್ರ ಖಡಕ್ ಪ್ರತಿಕ್ರಿಯೆ

by Shwetha
July 10, 2026
0

ಚಿತ್ರದುರ್ಗ: ರಾಜ್ಯ ರಾಜಕಾರಣದಲ್ಲಿ ಮುಂದಿನ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಚರ್ಚೆಗಳು ಸದಾ ಸುದ್ದಿಯಲ್ಲಿರುತ್ತವೆ. ಆದರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ನೀಡಿರುವ ಒಂದು ಹೇಳಿಕೆ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram