ಜಗತ್ತಿನಾದ್ಯಂತ ಕೊರೋನಾ ವೈರಸ್ ತನ್ನ ಮರಣ ಮೃದಂಗ ಮುಂದುವರಿಸಿದ್ದು, ಜಾಗತಿಕ ಅರ್ಥಿಕ ವ್ಯವಸ್ಥೆ ತಲ್ಲಣಗೊಂಡಿದೆ
ಇದೀಗ ಕೊರೋನಾ ವೈರಸ್ ಸೋಂಕಿನಿಂದ ಉಂಟಾದ ಅರ್ಥಿಕ ಬಿಕ್ಕಟ್ಟು ಜರ್ಮನಿಯ ಹೆಸ್ಸೆ ರಾಜ್ಯದ ಹಣಕಾಸು ಸಚಿವರ ಸಾವಿಗೆ ಕಾರಣವಾಗಿದೆ.
ಫ್ರಾಂಕ್‌ಫರ್ಟ್ ಒಳಗೊಂಡ ಜರ್ಮನಿಯ ಹೆಸ್ಸೆ ರಾಜ್ಯದ ಹಣಕಾಸು ಸಚಿವರು ಶವವಾಗಿ ಪತ್ತೆಯಾಗಿದ್ದಾರೆ. ಥಾಮಸ್ ಸ್ಕೇಫರ್ ರೈಲ್ವೆ ಹಳಿಗೆ ತಲೆಕೊಟ್ಟು ಸಾವಿಗೀಡಾಗಿದ್ದಾರೆ ಎಂದು ವೈಸ್ ಬಾಡೆನ್ ಪ್ರಾಸಿಕ್ಯೂಷನ್ ಕಚೇರಿ ಹೇಳಿದೆ. ಚಾನ್ಸೆಲರ್ ಏಂಜೆಲಾ ಮರ್ಕೆಲ್ ಅವರ ಕ್ರಿಶ್ಚಿಯನ್ ಡೆಮಾಕ್ರಟಿಕ್ ಯೂನಿಯನ್ ಸದಸ್ಯ 54 ವರ್ಷದ ಥಾಮಸ್ ಸ್ಕೇಫರ್ ಅವರ ಶವವನ್ನು ಫ್ರಾಂಕ್‌ಫರ್ಟ್ ಬಳಿಯ ಹೊಚ್‌ಹೈಮ್‌ನಲ್ಲಿ ರೈಲ್ವೆ ಹಳಿಗಳಲ್ಲಿ ಶನಿವಾರ ಪತ್ತೆ ಮಾಡಲಾಗಿದೆ. ಕೊರೊನಾವೈರಸ್ ಬಿಕ್ಕಟ್ಟಿನಿಂದಾಗಿ ಅವರು ಹತಾಶರಾಗಿದ್ದರು ಎಂದು ಹೇಳಿರುವ ಪ್ರಧಾನಿ ವೋಲ್ಕರ್ ಬೌಫಿಯರ್, ಜನರ ಭಾರಿ ನಿರೀಕ್ಷೆಗಳನ್ನು, ವಿಶೇಷವಾಗಿ ಆರ್ಥಿಕ ಸಹಾಯವನ್ನು ಪೂರೈಸುವಲ್ಲಿ ಯಶಸ್ವಿಯಾಗಲು ಸಾಧ್ಯವೇ ಎಂಬ ಬಗ್ಗೆ ಸ್ಕೇಫರ್ ಚಿಂತಿತರಾಗಿದ್ದರು ಎಂದು ಭಾನುವಾರ ಹೇಳಿದ್ದಾರೆ.
ನಾವು ಆಘಾತಕ್ಕೊಳಗಾಗಿದ್ದೇವೆ, ನಮಗೆ ಈ ಘಟನೆ ನಂಬುವುದಕ್ಕೆ ಆಗುತ್ತಿಲ್ಲ ಎಂದು ವೋಲ್ಕರ್ ಬೌಫಿಯರ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜರ್ಮನಿಯ ಹಣಕಾಸು ರಾಜಧಾನಿ ಎಂದು ಕರೆಸಿಕೊಳ್ಳುವ ಫ್ರಾಂಕ್‌ಫರ್ಟ್, ಹೆಸ್ಸೆ ರಾಜ್ಯದಲ್ಲಿಯೇ ಇದೆ. ಅಲ್ಲಿ ಪ್ರಮುಖವಾದ ಡ್ಯುಚ್ ಬ್ಯಾಂಕ್ ಮತ್ತು ಕಾಮರ್ಸ್ ಬ್ಯಾಂಕ್‌ನ ಪ್ರಧಾನ ಕಚೇರಿಗಳಿವೆ. ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಕೂಡ ಫ್ರಾಂಕ್‌ಫರ್ಟ್‌ನಲ್ಲಿದೆ.
10 ವರ್ಷಗಳ ಕಾಲ ಹೆಸ್ಸೆಯ ಹಣಕಾಸು ಮುಖ್ಯಸ್ಥರಾಗಿದ್ದ ಥಾಮಸ್ ಸ್ಕೇಫರ್, ಕಂಪನಿಗಳು ಮತ್ತು ಕಾರ್ಮಿಕರು ಕೊರೊನಾದಿಂದ ಉಂಟಾದ ಆರ್ಥಿಕ ಕುಸಿತವನ್ನು ಎದುರಿಸಲು ಹಗಲಿರುಳು ಶ್ರಮಿಸಿದ್ದರು ಎಂದು ವೋಲ್ಕರ್ ಬೌಫಿಯರ್ ಅವರನ್ನು ಸ್ಮರಿಸಿದರು.
ಆತ್ಮಹತ್ಯೆ ಮಾಡಿಕೊಂಡ ಥಾಮಸ್ ಸ್ಕೇಪರ್ ಜರ್ಮನಿಯಲ್ಲಿ ಭಾರಿ ಜನಪ್ರಿಯತೆ ಗಳಿಸಿದ್ದರು. ವೋಲ್ಕರ್ ಬೌಫಿಯರ್‌ನ ಉತ್ತರಾಧಿಕಾರಿ ಎಂದು ಹೆಸ್ಸೆ ರಾಜ್ಯದಲ್ಲಿ ಸ್ಕೇಪರ್ ಕರೆಸಿಕೊಳ್ಳುತ್ತಿದ್ದರು. ಸ್ಕೇಪರ್ ತಮ್ಮ ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಬೆಂಗಳೂರಿನ ಟೆಕ್ಕಿ ಆತ್ಮಹತ್ಯೆ: ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಏನಿದೆ..?
ಬೆಂಗಳೂರು ಮೂಲದ ಟೆಕ್ಕಿ ಅತುಲ್ ಸುಭಾಷ್ ಅವರ ಆತ್ಮಹತ್ಯೆ ಪ್ರಕರಣವು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್ ವಿಚ್ಛೇದನ ಪ್ರಕರಣಗಳಲ್ಲಿ ಜೀವನಾಂಶವನ್ನು ನಿರ್ಧರಿಸುವಾಗ ಪರಿಗಣಿಸಬೇಕಾದ...