ವಿಶ್ವದಲ್ಲೇ ಮೊದಲ ಬಾರಿಗೆ 5 ವರ್ಷದ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ಕಡ್ಡಾಯಗೊಳಿಸಿದ ಈಕ್ವೆಡಾರ್..!
ಈಕ್ವೆಡಾರ್ : ವಿಶ್ವಾದ್ಯಂತ ಕೊರೊನಾ , ಒಮಿಕ್ರಾಂತ್ ಆತಂಕದ ನಡುವೆ ಲಸಿಕೆ ಅಭಿಯಾನವೂ ಭರದಿಂದ ಸಾಗ್ತಿದೆ.. ಆದ್ರೆ ಬಹುತೇಕ ದೇಶಗಳಲ್ಲಿ 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ನೀಡಲಾಗ್ತಿದೆ, ಅದಕ್ಕಿಂತ ಚಿಕ್ಕ ವಯಸ್ಸಿನ ಮಕ್ಕಳಿಗೂ ಲಸಿಕೆ ನೀಡಲಾಗ್ತಿದೆ ಆದ್ರೆ ಕಡ್ಡಾಯ ಮಾಡಿಲ್ಲ..
ಆದ್ರೆ ವಿಶ್ವದಲ್ಲೇ ಮೊದಲ ಬಾರಿಗೆ ಇಂತಹ ಸಾಹಸಕ್ಕೆ ಮುಂದಾಗಿರುವ ಈಕ್ವೆಡಾರ್ ನಲ್ಲಿ 5 ವರ್ಷ ಮೇಲ್ಪಟ್ಟ ಎಲ್ಲಾ ಮಕ್ಕಳಿಗೂ ಲಸಿಕೆ ಕಡ್ಡಾಯಗೊಳಿಸಲಾಗಿದೆ.. ಈ ಮೂಲಕ ಮಕ್ಕಳಿಗೂ ಕೊರೊನಾ ಲಸಿಕೆಯನ್ನು ಕಡ್ಡಾಯಗೊಳಿಸಿದ ಮೊದಲ ದೇಶವಾಗಿ ಹೊರಹೊಮ್ಮಿದೆ ಈಕ್ವೆಡಾರ್.
ಅಮೆರಿಕದಲ್ಲಿ ಕೊರೊನಾ ರೂಪಾಂತರಿ ಒಮಿಕ್ರಾನ್ ಹಾವಳಿ ಹೆಚ್ಚುತ್ತಿದ್ದಂತೆ ಈಕ್ವೆಡಾರ್ ದೇಶ ಮಕ್ಕಳಿಗೂ ಲಸಿಕೆಯನ್ನು ಕಡ್ಡಾಯಗೊಳಿಸಿದೆ. ಗುರುವಾರ ದೇಶದಲ್ಲಿ 5 ವರ್ಷ ಮೇಲ್ಪಟ್ಟ ಮಕ್ಕಳಿಗೆ ಕೋವಿಡ್ ಲಸಿಕೆಯನ್ನು ಕಡ್ಡಾಯಗೊಳಿಸಿರುವುದಾಗಿ ಆರೋಗ್ಯ ಸಚಿವಾಲಯ ತಿಳಿಸಿದೆ.
ಈಕ್ವೆಡಾರ್ ನ 1.7 ಕೋಟಿ ಜನಸಂಖ್ಯೆಯಲ್ಲಿ ಸುಮಾರು 69% ಜನರು ಇಲ್ಲಿಯ ವರೆಗೆ ಲಸಿಕೆಯ 2 ಡೋಸ್‌ಗಳನ್ನು ಪಡೆದಿದ್ದಾರೆ. 9 ಲಕ್ಷ ಜನರು ಬೂಸ್ಟರ್ ಡೋಸ್ ಪಡೆದಿದ್ದಾರೆ. ಇದೀಗ 5 ವರ್ಷ ಮೇಲ್ಪಟ್ಟ ಮಕ್ಕಳೂ ಲಸಿಕೆ ಪಡೆಯಲು ಅರ್ಹರು ಎಂದು ಘೋಷಿಸಲಾಗಿದೆ.
ವಾರದ ಹಿಂದೆ ಈಕ್ವೆಡಾರ್‌ನಲ್ಲಿ ಮೊದಲ ಓಮಿಕ್ರಾನ್ ಪ್ರಕರಣ ದಾಖಲಾಗಿತ್ತು. ಪ್ರಕರಣಗಳ ಹೆಚ್ಚಳವನ್ನು ತಡೆಗಟ್ಟುವ ನಿಟ್ಟಿನಲ್ಲಿ ರೆಸ್ಟೋರೆಂಟ್, ಶಾಪಿಂಗ್ ಮಾಲ್‌ಗಳು, ಸಿನಿಮಾ ಥಿಯೇಟರ್ ಹಾಗೂ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶಿಸಲು ಲಸಿಕೆಯ ಪ್ರಮಾಣ ಪತ್ರವನ್ನು ಸಲ್ಲಿಸುವುದು ಕಡ್ಡಾಯಗೊಳಿಸಿತ್ತು.
ತಜಕಿಸ್ತಾನ್, ತುರ್ಕಮೆನಿಸ್ತಾನ್, ಇಂಡೋನಾಷ್ಯಾ, ಮೈಕ್ರೋನೇಷಿಯಾ ಮತ್ತು ನ್ಯೂ ಕ್ಯಾಲೆಡೋನಿಯಾದಲ್ಲಿ ವಯಸ್ಕರಿಗೆ ಲಸಿಕೆಯನ್ನು ಕಡ್ಡಾಯಗೊಳಿಸಲಾಗಿದೆ.