`ಐಟಿ’ ಅಲ್ಲ `ಇಡಿ’ ಹಿಡಿತದಲ್ಲಿ ಜಮೀರ್ ಅಹ್ಮದ್..!
ಬೆಂಗಳೂರು : ಕಂಡ ಕಂಡಲ್ಲೆಲ್ಲಾ ಹಣ ಹಂಚುತ್ತಿದ್ದ ಶಾಸಕ ಜಮೀರ್ ಅಹ್ಮದ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿರೋದು ಖಚಿತವಾಗಿದೆ.
ಆರಂಭದಲ್ಲಿ ಆದಾಯಕ್ಕಿಂತ ಹೆಚ್ಚಿನ ಆಸ್ತಿಗಳಿಕೆ ಆರೋಪದಡಿ ಜಮೀರ್ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿತ್ತು.
ಇದೀಗ ಜಮೀರ್ ನಿವಾಸದ ಮೇಲೆ ದಾಳಿ ನಡೆಸಿರೋದು ಐಟಿ ಅಧಿಕಾರಿಗಳಲ್ಲ, ಬದಲಾಗಿ ಅಕ್ರಮ ಹಣ ವರ್ಗಾವಣೆ ಆರೋಪದಡಿ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ ಎಂದು ಹೇಳಲಾಗುತ್ತಿದೆ.
ಅಲ್ಲದೆ ಇದೀಗ ಜಾರಿ ನಿರ್ದೇಶನಾಲಯ ಜಮೀರ ಅಹ್ಮದ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.
ಈ ಹಿಂದೆ ಐಎಂಎ ಪ್ರಕರಣದಲ್ಲಿ ಜಮೀರ್ ಅಹ್ಮದ್ ಹೆಸರು ಬಲವಾಗಿ ಕೇಳಿ ಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಜಮೀರ್ ಅಹ್ಮದ್ ವಿಚಾರಣೆಗೆ ಹಾಜರಾಗಿದ್ದರು. ಇದೀಗ ಅಕ್ರಮ ಹಣ ವರ್ಗಾವಣೆ ಆರೋಪ ಕೇಳಿ ಬಂದಿದ್ದು, ಇಡಿ ವಶದಲ್ಲಿರುವ ಜಮೀರ್ ಅಹ್ಮದ್ ವಿಚಾರಣೆ ನಡೆಸಲಾಗುತ್ತಿದೆ.