ಅಕ್ರಮ ಹಣ ವರ್ಗಾವಣೆ – ಜಾಕ್ವೆಲಿನ್ ಆರೋಪಿ ಎಂದು ಹೆಸರಿಸಿದ E D
ವಿಕ್ರಾಂತ್ ರೋಣಾ ಬೆಡಗಿ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಗೆ ED ಸಂಕಷ್ಟ ಎದುರಾಗಿದೆ. 200 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಟಿಯನ್ನು ಆರೋಪಿಯನ್ನಾಗಿ ಮಾಡಲು ಇ ಡಿ ಸಿದ್ಧತೆ ನಡೆಸಿದೆ. ಜಾರಿ ನಿರ್ದೇಶನಾಲಯ ಬುಧವಾರ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸುವ ಸಾಧ್ಯತೆ ಇದೆ. ಏಪ್ರಿಲ್ನಲ್ಲಿ ಜಾಕ್ವೆಲಿನ್ ಗೆ ಸೇರಿದ ಏಳು ಕೋಟಿಗೂ ಹೆಚ್ಚು ಆಸ್ತಿಯನ್ನ ಜಪ್ತಿ ಮಾಡಲಾಗಿತ್ತು.
ಈ ಪ್ರಕರಣದ ಪ್ರಮುಖ ಆರೋಪಿ ಸುಖೇಶ್ ಚಂದ್ರಶೇಖರ್ ಮತ್ತು ಜಾಕ್ವೆಲಿನ್ಗೆ ಇಬ್ಬರೂ ಸಂಬಂಧದಲ್ಲಿದ್ದರು. ಅವರ ಅನೇಕ ಖಾಸಗಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು, ನಂತರ ಇ ಡಿ ಜಾಕ್ವೆಲಿನ್ ಅವರನ್ನ ವಿಚಾರಣೆಗೆ ಕರೆದಿತ್ತು. ಇವರಿಬ್ಬರ ಪೋಟೋಗಳನ್ನ E D ಸಾಕ್ಷಿಯಾಗಿರಿಸಿದೆ. ರಾನ್ಬಾಕ್ಸಿ ಮಾಜಿ ಪ್ರಮೋಟರ್ ಪತ್ನಿಯರಿಂದ ಸುಕೇಶ್ 200 ಕೋಟಿ ರೂ ವಸೂಲಿ ಮಾಡಿದ ಆರೋಪವಿದೆ.
ಜಾಕ್ವೆಲಿನ್ ಬಂಧನ ಸಾಧ್ಯತೆ
ಈ ಪ್ರಕರಣದಲ್ಲಿ ಜಾಕ್ವೆಲಿನ್ ಬಂಧನ ಸದ್ಯಕ್ಕೆ ಸಾಧ್ಯವಿಲ್ಲ, ಏಕೆಂದರೆ ಇಡಿ ಇನ್ನೂ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿಲ್ಲ. ನ್ಯಾಯಾಲಯದ ವಿಚಾರಣೆಯ ನಂತರ ಬಂಧನವನ್ನು ಮಾಡಬಹುದು. ಆದರೆ, ಅವರನ್ನು ದೇಶದಿಂದ ಹೊರಗೆ ಹೋಗಲು ಇನ್ನೂ ಅನುಮತಿ ನೀಡಿಲ್ಲ.
ED to name Jacqueline Fernandez as accused in conman money laundering case