ಕೊರೋನಾ ವೈರಸ್ ಸೋಂಕು ಭಾರತದಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಸ್ವಯಂ ನಿರ್ಬಂಧ (ಕ್ಯಾರಂಟೈನ್) ಸೌಲಭ್ಯಗಳಿಗೆ ಈಡನ್ ಗಾರ್ಡನ್ಸ್ ನ ಒಳಾಂಗಣ ಕ್ರೀಡಾಂಗಣವನ್ನು ಪಶ್ಚಿಮ ಬಂಗಾಳ ಸರ್ಕಾರಕ್ಕೆ ನೀಡಲು ಸಿದ್ಧ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.
ಪಾಂಡಿಚೆರಿ ಕ್ರಿಕೆಟ್ ಸಂಸ್ಥೆ (ಸಿಎಪಿ) ಕೊರೊನಾ ವೈರಸ್ ಸೋಂಕಿತ ರೋಗಿಗಳಿಗೆ ಸ್ವಯಂ ನಿರ್ಬಂಧ ಸೌಲಭ್ಯಕ್ಕಾಗಿ ಪುದುಚೇರಿಯಲ್ಲಿನ ಟುಟಿಪೆಟ್ ಕ್ಯಾಂಪಸ್ ಕಟ್ಟಡವನ್ನು ನೀಡಿದೆ.ಪಶ್ಚಿಮ ಬಂಗಾಲ ಸರ್ಕಾರ ಇಚ್ಛಿಸಿದರೆ ಖಂಡಿತವಾಗಿಯೂ ಈಡನ್ ಗಾರ್ಡನ್ಸ್ ನ ಕ್ರೀಡಾಂಗಣವನ್ನು ಹಸ್ತಾಂತರಿಸಲು ಸಿದ್ಧರಿದ್ದೇವೆ, ಇದೆಲ್ಲವೂ ತುರ್ತು ಅಗತ್ಯವಾಗಿದೆ ಎಂದು ಗಂಗೂಲಿ ಹೇಳಿದ್ದಾರೆ.
ಭಾರತದಲ್ಲಿ ಇಲ್ಲಿಯವರೆಗೆ ಕೋವಿದ್-19 ಸೋಂಕಿತರ ಸಂಖ್ಯೆ 562 ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 10ಕ್ಕೆ ಮುಟ್ಟಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಪ್ರಧಾನಿ ಮೋದಿ ಕೊರೊನಾ ಸೋಂಕು ವಿಸ್ತರಿಸುವುದನ್ನು ನಿಯಂತ್ರಿಸುವುದಕ್ಕಾಗಿ ಮುಂದಿನ ಮೂರು ವಾರ ಅಂದರೆ 21 ದಿನ ದೇಶವನ್ನು ಸಂಪೂರ್ಣ ಲಾಕ್ ಡೌನ್ ಮಾಡಲು ಆದೇಶಿಸಿದ್ದು, ಮಂಗಳವಾರ ಮಧ್ಯರಾತ್ರಿಯಿಂದ ಈ ಆದೇಶ ಜಾರಿಯಲ್ಲಿದೆ.