KGF-2 ಚಿತ್ರತಂಡದಿಂದ ಎಡಿಟರ್ ಶ್ರೀಕಾಂತ್ ಹೊರನಡೆದಿದ್ದಾರೆ ಎಂದು ಹೇಳಲಾಗಿದೆ . ಕೆಜಿಎಫ್-2 ನಲ್ಲಿ ಹೀಗೆ ದಿಢೀರ್ ಬದಲಾವಣೆ ಕಂಡಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಶ್ರೀಕಾಂತ್ ಒಬ್ಬ ಅದ್ಭುತ ಎಡಿಟರ್, ಉಗ್ರಂ ಹಾಗೂ ಕೆಜಿಎಫ್ ಚಿತ್ರವನ್ ಎಡಿಟ್ ಮಾಡಿದ ಕೀರ್ತಿ ಶ್ರೀಕಾಂತ್ಗೆ ಸಲ್ಲುತ್ತದೆ. ಪ್ರಶಾಂತ್ ನೀಲ್ ಅವರ ಆಪ್ತ ಬಳಗದಲ್ಲಿ ಕಾಣಿಸಿಕೊಂಡಿದ್ದ ಶ್ರೀಕಾಂತ್ ಇದೀಗಾ ಚಿತ್ರತಂಡದಿಂದ ಹೊರ ಬಂದಿರುವುದು ಎಲ್ಲ ಅಚ್ಚರಿಗೆ ಕಾರಣವಾಗಿದೆ.
ಕೆಜಿಎಫ್ ಭಾರತೀಯ ಚಲನಚಿತ್ರರಂಗದಲ್ಲೇ ಹೊಸ ಸಂಚಲನ ಸೃಷ್ಟಿಸಿದ ಸ್ಯಾಂಡಲ್ವುಡ್ ಸಿನಿಮಾ. ಸ್ಯಾಂಡಲ್ ವುಡ್ ಸಿನಿಮಾಗಳೆಂದರೆ ಅಸಡ್ಡೆ ಮಾಡುತ್ತಿದ್ದ ಮಂದಿಗೆ ಸೆಡ್ಡು ಹೊಡೆಯುವಂತೆ ಮಾಡಿದ್ದು ಇದೇ ಅಪ್ಪಟ ಕನ್ನಡಿಗರ ಕೆಜಿಎಫ್. ಕೆಜಿಎಫ್ ಕನ್ನಡ ಸಿನಿಮಾ ರಂಗ ಮಾತ್ರವಲ್ಲದೇ ಇಡೀ ಭಾರತೀಯ ಸಿನಿರಂಗದಲ್ಲೇ ಒಂದು ಸೆನ್ಷೆಸಿಯಲ್ ಸೃಷ್ಟಿ ಮಾಡಿದ ಸಿನಿಮಾ. ಇದನ್ನ ಗೋಲ್ಡನ್ ಸಿನಿಮಾ ಎಂದರೆ ತಪ್ಪಾಗಲಾರದು.
ಕೆಜಿಎಫ್ ನಾಗಲೋಟಕ್ಕೆ ಪ್ರಶಾಂತ್ ನೀಲ್ ಚಿತ್ರತಂಡದ ಪರಿಶ್ರಮ ಕಾರಣವಾಗಿದೆ. ಹೀಗೆ ಪ್ರಶಾಂತ್ ನೀಲ್ ಅವರ ರೆಗ್ಯೂಲರ್ ಎಡಿಟರ್ ಆದ ಶ್ರೀಕಾಂತ್ ಚಿತ್ರತಂಡದಿಂದ ಯಾವುದೇ ಕಾರಣವಿಲ್ಲದೆ ದಢೀರ್ ಹೊರನಡೆದಿರುವುದು ಸ್ಯಾಂಡಲ್ವುಡ್ ಸಿನಿರಸಿಕರಿಗೆ ನಿರಾಶೆ ಮೂಡಿಸಿದೆ. ಈ ಬಗ್ಗೆ ಚಿತ್ರತಂಡ ಕೂಡ ಯಾವುದೇ ಮಾಹಿತಿ ಬಿಟ್ಟುಕೊಡದೇ ಇರುವುದು ಕುತೂಹಲಕ್ಕೆ ಕಾರಣವಾಗಿದೆ. ಇದೀಗಾ ಶ್ರೀಕಾಂತ್ ಸ್ಥಾನಕ್ಕೆ ಉಜ್ವಲ್ ಎಂಬ ಹೊಸ ಪ್ರತಿಭೆಯನ್ ಕರೆತರಲಾಗಿದೆ ಎಂದು ಹೇಳಲಾಗಿದೆ.
ಪ್ರಶಾಂತ್ ನೀಲ್ ಕೇವಲ ನಿರ್ದೇಶಕರು ಮಾತ್ರವಲ್ಲದೆ, ಒಬ್ಬ ಅತ್ಯೂತ್ತಮ ಎಡಿಟರ್ ಕೂಡ ಆಗಿದ್ದಾರೆ. ಕೆಜಿಎಫ್ ಚಿತ್ರದ ಸಾಕಷ್ಟು ಸೀನ್ಗಳನ್ನ ಪ್ರಶಾಂತ್ ಅವರೇ ಎಡಿಟಿಂಗ್ ಮಾಡಿದ್ದಾರೆ. ಇನ್ನ, ಶ್ರೀಕಾಂತ್ ಸ್ಥಾನಕ್ಕೆ ಹೊಸ ಪ್ರತಿಭೆ ಉಜ್ವಲ್ ಅವರನ್ನ ಕರೆತಂದಿದ್ದು, ಅವರ ಬಳಿ ಪ್ರಶಾಂತ್ ಯಾವಮಟ್ಟಿಗೆ ಕೆಲಸ ತೆಗೆಯಲಿದ್ದಾರೆ ಎಂಬುದು ಸಕತ್ ಕ್ಯೂರಿಯಾಸಿಟಿ ಮೂಡಿಸಿದೆ.
ಇದನ್ನೂ ಓದಿ – https://saakshatv.com/secret-behind-shah-ramulu-meet/