ವಿದ್ಯಾವಂತ ದಂಪತಿಯ ಮೂಡನಂಬಿಕೆಗೆ ಬಲಿಯಾದರು ಇಬ್ಬರು ಹೆಣ್ಮಕ್ಕಳು..!
ಆಂಧ್ರಪ್ರದೇಶ: ಮೂಢನಂಬಿಕೆ ಕೇವಲ ಅವಿದ್ಯಾವಂತರಲ್ಲಿ ಮಾತ್ರ ಇರಲ್ಲ. ಚೆನ್ನಾಗಿ ಶಿಕ್ಷಣ ಪಡೆದ ವಿದ್ಯಾವಂತರು ಇಂತಹ ಮೂಡನಂಬಿಕೆಗಳಲ್ಲಿ ಮೂಡನಂಬಿಕೆಯಿಂದ ಎಷ್ಟೆಲ್ಲಾ ಅವಿದ್ಯಾವಂತರ ರೀತಿ ವರ್ತಿಸುತ್ತಾರೆ. ಎಷ್ಟು ಕ್ರೂರಿಗಳಂತೆ ಪಾಪದ ಕೆಲಸಗಳನ್ನ ಮಾಡ್ತಾರೆ ಅನ್ನೋದಕ್ಕೆ ಈ ಪ್ರಕರಣವೇ ಸಾಕ್ಷಿ.
ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ ವಿದ್ಯಾವಂತ ದಂಪತಿಗಳು ನಿಧಿ ಸಿಗುತ್ತೆ ಅನ್ನೋ ನಂಬಿಕೆಯಿಂದ ಮಂತ್ರವಾದಿಯೊಬ್ಬನ ಮಾತನ್ನು ನಂಬಿ ತಾವು ಜನ್ಮ ನೀಡಿದ ಇಬ್ಬರು ಹೆಣ್ಣು ಮಕ್ಕಳನ್ನ ಬಲಿ ಕೊಟ್ಟಿದ್ದಾರೆ. ವಿಶಾಧಕರ ಸಂಗತಿಯೆಂದ್ರೆ ಇಂತಹ ನೀಚ ಕೃತ್ಯ ಎಸಗಿದವರು ಕಾಲೇಜಿನ ಪ್ರಾಂಶುಪಾಲರು. ಹೌದು ತಾಯಿ ಪದ್ಮಜಾ ಖಾಸಗಿ ಶಾಲೆಯಲ್ಲಿ ಉಪಪ್ರಾಂಶುಪಾಲೆಯಾಗಿ ಕಾರ್ಯ ನಿರ್ವಹಿಸುತ್ತಿದ್ದರೆ, ತಂದೆ ಪುರುಷೋತ್ತಮ್ ಸರ್ಕಾರಿ ಶಾಲೆಯೊಂದರಲ್ಲಿ ಉಪ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದರು.
ದಸರಾಗೆ ರೌದ್ರಂ ರಣಂ ರುಧಿರಂ ಸುನಾಮಿ
ಮದನಪಲ್ಲಿಯ ಶಿವಾಲಯ ದೇವಸ್ಥಾನದ ಬಳಿ ಈ ದುರ್ಘಟನೆ ನಡೆದಿದೆ. ಹಿರಿಯ ಮಗಳು ಅಲೈಕ್ಯ (27) ಭೋಪಾಲ್ ನಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದರೆ, ಕಿರಿಯ ಪುತ್ರಿ ಸಾಯಿ ದಿವ್ಯಾ (22) ಬಿಬಿಎ ಮಾಡಿದ್ದಲ್ಲದೆ ಮುಂಬೈನ ಎಆರ್ ರಹಮಾನ್ ಮ್ಯೂಸಿಕ್ ಶಾಲೆಯ ವಿದ್ಯಾರ್ಥಿನಿಯಾಗಿದ್ದರು. ಹೆತ್ತವರಿಂದಲೇ ಹತ್ಯೆಗೊಳಗಾದ ದುರ್ದೈವಿಗಳಾಗಿದ್ದಾರೆ.
ಯುವತಿಯರನ್ನು ಅವರ ತಾಯಿ ದೇವಲಾಯಕ್ಕೆ ಕರೆದೋಯ್ದು, ಪೂಜೆ ಸಲ್ಲಿಸಿದ್ದಾಳೆ. ನಂತರ ಅವರನ್ನು ಬೆತ್ತಲೆಗೊಳಿಸಿ, ಡಂಬಲ್ಸ್ ನಿಂದ ಹೊಡೆದು ಸಾಯಿಸಿರಬಹುದು ಎಂದು ಶಂಕಿಸಲಾಗಿದೆ. ಯಾಕಂದ್ರೆ ಇಬ್ಬರು ಯುವತಿಯ ಬೆತ್ತಲೆ ಶವ ಪತ್ತೆಯಾಗಿದೆ. ಆರಂಭದಲ್ಲಿ ದಂಪತಿಗಳು ಪೊಲೀಸರನ್ನು ಮನೆಗೆ ಪ್ರವೇಶಿಸದಂತೆ ತಡೆದಿದ್ದಾರೆ. ಪೊಲೀಸರು ಮನೆಯೊಳಗೆ ಪ್ರವೇಶಿದ ವೇಳೆ ಒಬ್ಬ ಯುವತಿ ಪೂಜಾಕೋಣೆಯಲ್ಲಿ ಶವವಾಗಿದ್ದರೆ ಇನ್ನೊಬ್ಬಳು ಇನ್ನೊಂದು ಕೋಣೆಯಲ್ಲಿ ಹೆಣವಾಗಿದ್ದಳು. ಎರಡೂ ಶವಗಳ ದೇಹಕ್ಕೆ ಕೆಂಪು ಬಣ್ಣದ ಬಟ್ಟೆ ಸುತ್ತಲಾಗಿದ್ದು ಅವುಗಳ ಸುತ್ತ ಕೆಲವು ಪೂಜಾ ಸಾಮಗ್ರಿಗಳನ್ನು ಇರಿಸಲಾಗಿತ್ತು.
ಭಾರತದ ಗಡಿಯತ್ತ ನುಸುಳಲು ಯತ್ನಿಸಿದ 20 ಚೀನಾ ಸೈನಿಕರಿಗೆ ಗಾಯ..!
ಪ್ರಾಥಮಿಕ ತನಿಖೆಯ ಸಮಯದಲ್ಲಿ, ದಂಪತಿಗಳು ತಮ್ಮ ಹೆಣ್ಣುಮಕ್ಕಳು ಮತ್ತೆ ಜೀವ ಪಡೆಯುತ್ತಾರೆ ಎಂದು ಹೇಳುವ ಮೂಲಕ ಶವಗಳನ್ನು ಒಂದು ದಿನ ಮನೆಯಲ್ಲಿ ಇರಿಸಲು ಒತ್ತಾಯಿಸಿದ್ದರು ಮದನಪಲ್ಲಿ ಡಿಎಸ್ಪಿ ರವಿ ಮನೋಹರ ಚಾರಿ ಹೇಳಿದ್ದಾರೆ.
ಒಟ್ಟಾರೆ ಇಂತಹ ನೀಚ ಕೃತ್ಯ ಮೌಢ್ಯಕ್ಕೆ ಅವಿವೇಕಿ ಕೆಲಸ ಮಾಡಿದ್ದು, ವಿದ್ಯಾವಂತ ಪ್ರಾಂಶುಪಾಲರು ಅನ್ನೋದು ನಿಜಕ್ಕೂ ವಿಷಾಧಕರ ಸಂತಿ. ಈ ದಂಪತಿಯ ಅವಿವೇಕಿ ತನಕ್ಕೆ ಬದುಕಿ ಬಾಳಬೇಕಾಗಿದ್ದ ಹೆಣ್ಮಕ್ಕಳು ಜೀವ ಕಳೆದುಕೊಂಡಿದ್ದು, ನಿಜಕ್ಕೂ ಆಘಾತಕಾರಿ ಸಂಗತಿಯಾಗಿದೆ.
ಚರ್ಮದಿಂದ ಚರ್ಮದ ಸಂಪರ್ಕವಿಲ್ಲದೆ ಎಸಗಿದ ಕೃತ್ಯ ಲೈಂಗಿಕ ದೌರ್ಜನ್ಯವಲ್ಲ : ಬಾಂಬೆ ಹೈಕೋರ್ಟ್
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel