ಕಣ್ಣಿದ್ರು ಕಣ್ಮುಚ್ಚಿ ಕುಳಿತ ಶಿಕ್ಷಣ ಇಲಾಖೆ : ಹಣ ನೀಡಲೇಬೇಕು ವಿದ್ಯಾರ್ಥಿಗಳು
ಕುಷ್ಟಗಿ : ಕೊರೊನಾ ಆರ್ಭಟ ಕಡಿಮೆ ಹಾಗುತ್ತಿರುವ ಹಿನ್ನೆಲೆ ಸ್ಥಗಿತಗೊಂಡಿದ್ದ ಶಾಲಾ – ಕಾಲೇಜುಗಳು ಮತ್ತೆ ಹೊಸ ನೀತಿ ನಿಯಮಗಳೊಂದಿಗೆ ಆರಂಭವಾಗುತ್ತಿವೆ.
ಕೊರೊನಾ ಸಂಕಷ್ಟಕ್ಕೆ ಸಿಲುಕಿ ಈಗ ಮತ್ತೆ ಶಾಲಾ-ಕಾಲೇಜುಗಳತ್ತ ಮುಖ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಹೌದು..! ಹಳ್ಳಿಯಿಂದ ಉನ್ನತ ಶಿಕ್ಷಣದ ಸಲುವಾಗಿ ಪಟ್ಟಣಕ್ಕೆ ಮುಖ ಮಾಡಿದ ವಿದ್ಯಾರ್ಥಿಗಳು ಹಾಸ್ಟೆಲ್ ಗಳು ಪ್ರಾರಂಭವಾಗಿದ್ದರೂ ನಿರ್ಧಿಷ್ಠ ಸೂಚನೆಗಳು ಇಲ್ಲದ ಕಾರಣ ಹೊಸಬರಿಗೆ ಹಾಸ್ಟಲ್ ಪ್ರವೇಶ ಸಿಗುತ್ತಿಲ್ಲ.
ಈ ಹಿನ್ನೆಲೆ ಅನಿವಾರ್ಯವಾಗಿ ವಿದ್ಯಾರ್ಥಿಗಳು ಬಸ್ ನಲ್ಲೇ ಪ್ರಯಾಣಿಸುವ ಪರಿಸ್ಥಿತಿ ಎದುರಾಗಿದೆ. .
ಇದು ಒಂದು ಕಡೆಯಾದ್ರೆ ಬಡ ಕುಟುಂಬದ ವಿದ್ಯಾರ್ಥಿಗಳು ಬಸ್ ಪಾಸ್ ನವಿಕರಣಗೊಳ್ಳದ ಹಿನ್ನೆಲೆಯಲ್ಲಿ ಬಸ್ ಟಿಕೆಟ್ ವಿತರಕರು ವಿದ್ಯಾರ್ಥಿಗಳಿಂದ ಹಣ ಪಡೆದು ಪ್ರಯಾಣಕ್ಕೆ ಅವಕಾಶ ಮಾಡಿಕೊಡುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆ ಯಾಗುತ್ತಿದೆ.
2019-20ರ ಸಾಲಿನ ಹಳೆಯ ಬಸ್ ಪಾಸ್ ಹಾಗೂ ಶಾಲಾ ಕಾಲೇಜುಗಳಿಗೆ ಶುಲ್ಕ ಪಾವತಿಸಿದ ರಸೀದಿಗಳನ್ನು ಬಸ್ ಚಾಲನಾ ಸಿಬ್ಬಂದಿಗೆ ತೋರಿಸಿ ಉಚಿತವಾಗಿ ಪ್ರಯಾಣಿಸಲು ಶಿಕ್ಷಣ ಮತ್ತು ಸಾರಿಗೆ ಇಲಾಖೆಗಳು ಆದೇಶ ಹೊರಡಿಸಿವೆ.
ಈ ನಿಯಮದಲ್ಲಿ ಆಧಾರ್ ಕಾರ್ಡ್ ಕಡ್ಡಾಯ ಎಂದು ಎಲ್ಲಿಯೂ ಹೇಳಿಲ್ಲ. ಆದರೆ ಕುಷ್ಟಗಿ ತಾಲೂಕಿನಲ್ಲಿ ಕೆಲವೊಂದು ಕಡೆ ವಿದ್ಯಾರ್ಥಿಗಳು ಬಸ್ ಸಂಚಾರದಲ್ಲಿ ಹಿಂದಿನ ವರ್ಷದ ಪಾಸ್ ಮತ್ತು ಶುಲ್ಕ ಪಾವತಿಸಿದ ರಸೀದಿಗಳನ್ನು ತೋರಿಸಿದರೂ ಕೂಡಾ ಟಿಕೆಟ್ ತೆಗೆದುಕೊಳ್ಳಬೇಕಾದ ಪರಿಸ್ಥಿತಿಯಲ್ಲಿದ್ದಾರೆ.
ಇನ್ನೊಂದು ಕಡೆ ಕೆಲವು ವಿದ್ಯಾರ್ಥಿಗಳು ಹೊಸದಾಗಿ ಶಾಲಾ ಕಾಲೇಜುಗಳಿಗೆ ಪ್ರವೇಶ ಪಡೆದಿರುವವರು ಹಳೆಯ ಬಸ್ ಪಾಸ್ ನ್ನು ಹೊಂದಿರುವುದಿಲ್ಲ. ಇನ್ನೇನು ಕೆಲವು ದಿನಗಳಲ್ಲಿ ಎಲ್ಲಾ ಕಡೆ ಶಾಲಾ ಕಾಲೇಜುಗಳು ಪ್ರಾರಂಭವಾಗಲಿದ್ದು, ಇಂತಹ ಸಮಯದಲ್ಲಿ ಹೊಸದಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳು ಬಸ್ ನಲ್ಲಿ ಸಂಚರಿಸುವುದು ಹೇಗೆ ಎಂಬುದೇ ಪ್ರಶ್ನೆಯಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









