ಶೀತ, ಕೆಮ್ಮು ಮತ್ತು ಕೆಲವರಿಗೆ ಡಸ್ಟ್ ಅಲರ್ಜಿಯಿಂದ ಕೂಡ ಕಫದ ಸಮಸ್ಯೆ ಉಂಟಾಗುತ್ತದೆ. ಅನೇಕರು ಇದಕ್ಕಾಗಿ ಆವಿ ತೆಗೆದುಕೊಳ್ಳುವುದು ಅಥವಾ ಇನ್ನಿತರ ಪರಿಹಾರವನ್ನು ಮಾಡಿಕೊಳ್ಳುತ್ತಾರೆ. ಇವತ್ತು ನಾವು ಹಿಂದಿನ ಕಾಲದಲ್ಲಿ ನಮ್ಮ ಪೂರ್ವಜರು ಬಳಸುತ್ತಿದ್ದ ಒಂದು ಮನೆಮದ್ದಿನ ಬಗ್ಗೆ ಮಾಹಿತಿ ನೀಡುತ್ತೇವೆ. ಈ ಮನೆಮದ್ದು 5 ವರ್ಷ ಮೇಲ್ಪಟ್ಟವರು ಮಾತ್ರ ಉಪಯೋಗಿಸಬೇಕು.
ಬೇಕಾಗಿರುವ ಸಾಮಗ್ರಿಗಳು:
ಬೆಲ್ಲ
ಅರಿಶಿಣದ ಪುಡಿ
ಕಲ್ಲುಪ್ಪು
ತಯಾರಿಸುವ ವಿಧಾನ:
1. ಶುದ್ಧವಾದ ಬೆಲ್ಲವನ್ನು ತೆಗೆದುಕೊಂಡು, ಒಂದು ಪಾತ್ರೆಗೆ ಹಾಕಿ ಕರಗಿಸಿಕೊಳ್ಳಬೇಕು.
2. ನಂತರ ಇದನ್ನು ಸೋಸಿ ಅದಕ್ಕೆ ¼ ಚಮಚ ಅರಿಶಿಣ ಮತ್ತು ¼ ಚಮಚ ಕಲ್ಲುಪ್ಪು ಸೇರಿಸಿ ಚೆನ್ನಾಗಿ ಕಲಸಬೇಕು.
ಉಪಯೋಗಿಸುವ ವಿಧಾನ:
ಈ ಕರಗಿದ ಬೆಲ್ಲದ ಮಿಶ್ರಣವನ್ನು ದಿನಕ್ಕೆ 3 ಬಾರಿ ಸಣ್ಣ ಪ್ರಮಾಣದಲ್ಲಿ ಚಪ್ಪರಿಸಿ ಸೇವಿಸಬೇಕು. ಇದರ ಪರಿಣಾಮವಾಗಿ ಕಫದ ಸಮಸ್ಯೆ ನಿವಾರಣೆಯಾಗುತ್ತದೆ.
ಪ್ರಯೋಜನಗಳು:
ಬೆಲ್ಲ: ರೋಗನಿರೋಧಕ ಶಕ್ತಿ ಹೊಂದಿದೆ.
ಅರಿಶಿಣ: ಆಂಟಿ ಇನ್ ಫ್ಲಾಮೇಟರಿ ಮತ್ತು ಆಂಟಿ ಬ್ಯಾಕ್ಟೀರಿಯಲ್ ಗುಣಗಳನ್ನು ಹೊಂದಿದೆ.
ಉಪ್ಪು: ಆಂಟಿ ಬಯೋಟಿಕ್ ಅಂಶವನ್ನು ಹೊಂದಿದೆ.
ಈ ಮನೆಮದ್ದು ಕಫದ ಸಮಸ್ಯೆ, ಗಂಟಲು ಕೆರೆತ ಮತ್ತು ಇತರ ಸಂಬಂಧಪಟ್ಟ ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿದೆ.
ಸೂಚನೆ : ಇಲ್ಲಿರುವ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ನೀಡಲಾಗಿದೆ.