ರಷ್ಯಾ ಮತ್ತು ಉಕ್ರೇನ್ ಯುದ್ಧದ ಪರಿಣಾಮಗಳು – Saaksha Tv
- ಇಲ್ಲಿಯವರೆಗೆ ನಡೆದ ಸಂಘರ್ಷದಲ್ಲಿ 240 ಮಂದಿ ನಾಗರಿಕರು ಸಾವಿಗೀಡಾಗಿದ್ದಾರೆ. ಆದ್ರೆ ನಿಜವಾದ ಸಾವು-ನೋವಿನ ಪ್ರಮಾಣ ಇದಕ್ಕಿಂತ ಬಹಳಷ್ಟು ಹೆಚ್ಚಿರಬಹುದು ಎಂದು ವಿಶ್ವಸಂಸ್ಥೆ ಅಂದಾಜಿಸಿದೆ. ಬಹುತೇಕ ಈ ಸಾವು ನೋವುಗಳು ಶೆಲ್ಲಿಂಗ್ ಮತ್ತು ಬಾಂಬ್ ದಾಳಿಯಿಂದ ಸಂಭವಿಸಿವೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗ ಅಂದಾಜಿಸಿದೆ
- ಅಮೆರಿಕದ ಕೆಲವು ಬಾರ್‌ಗಳು ಮತ್ತು ಮದ್ಯದಂಗಡಿಗಳಲ್ಲಿ ರಷ್ಯಾದ ವೊಡ್ಕಾ ಪೂರೈಕೆ ನಿಷೇಧಿಸಲಾಗಿದ್ದು, ಉಕ್ರೇನ್ ಬ್ರ್ಯಾಂಡ್‌ಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ವಿರೋಧಿಸಿ ಈ ನಿರ್ಧಾರಕ್ಕೆ ಬರಲಾಗಿದೆ.
- ರಷ್ಯಾದ ಹಣಕಾಸು ವಲಯವನ್ನು ಕಠಿಣ ಆರ್ಥಿಕ ನಿರ್ಬಂಧಗಳ ಮೂಲಕ ಶಿಕ್ಷೆಗೆ ಗುರಿಪಡಿಸಲು ಈ ದೇಶಗಳು ನಿರ್ಧರಿಸಿವೆ. ಇದರ ಭಾಗವಾಗಿ ಜಾಗತಿಕವಾಗಿ ರಷ್ಯಾ ಕೇಂದ್ರ ಬ್ಯಾಂಕ್ ವ್ಯವಹರಿಸದಂತೆ ಅಮೆರಿಕ, ಯುರೋಪಿಯನ್ ಯೂನಿಯನ್ ಮತ್ತು ಯುಕೆ ದೇಶಗಳು ನಿರ್ಬಂಧಗಳನ್ನು ವಿಧಿಸಿವೆ. ಇದೇ ಮೊದಲ ಬಾರಿಗೆ ರಷ್ಯಾ ಕೇಂದ್ರ ಬ್ಯಾಂಕ್‌ಗೆ ಈ ನಿರ್ಬಂಧಗಳನ್ನು ಹೇರಲಾಗಿದೆ.
- ಲಿತ್ವೇನಿಯಾ, ಎಸ್ಟೋನಿಯಾ ಹಾಗು ಸ್ಲೋವೆನಿಯಾ ಮುಂತಾದ ಯುರೋಪಿಯನ್ ದೇಶಗಳು ತನ್ನ ದೇಶದ ವಿಮಾನ ಹಾರಾಟ ಪ್ರದೇಶ ಬಳಸದಂತೆ ರಷ್ಯಾ ನಿರ್ಬಂಧ ವಿಧಿಸಿದೆ. ಶನಿವಾರವಷ್ಟೇ ರೊಮೇನಿಯಾ, ಬಲ್ಗೇರಿಯಾ ಮತ್ತು ಜೆಕ್ ರಿಪಬ್ಲಿಕ್ ದೇಶಗಳಿಂದ ಆಗಮಿಸುವ ನಾಗರಿಕ ವಿಮಾನಗಳಿಗೆ ರಷ್ಯಾ ತನ್ನ ವಾಯುಪ್ರದೇಶಕ್ಕೆ ಪ್ರವೇಶ ನಿರಾಕರಿಸಿದೆ.
- ರಷ್ಯಾ ಸೇನೆ ಯುಕ್ರೇನ್ ಒಳಗೆ ರಣೋತ್ಸಾಹದಲ್ಲಿ ಮುನ್ನುಗ್ಗುತ್ತಿರುವಂತೆ ಅತ್ತ ರಷ್ಯಾದಲ್ಲೇ ನಾಗರಿಕರು, ಅಲ್ಲಿನ ಸರ್ಕಾರಿ ವಲಯ, ಸಾವಿರಾರು ವೈದ್ಯಕೀಯ ಸಿಬ್ಬಂದಿ, ಶಿಕ್ಷಕರು, ಎಂಜಿನಿಯರುಗಳು, ವಾಸ್ತುಶಿಲ್ಪಿಗಳಲ್ಲಿ ಯುದ್ಧ ವಿರೋಧಿ ಭಾವನೆ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ದೇಶದ ವಿವಿಧೆಡೆ ಅಧ್ಯಕ್ಷ ಪುಟಿನ್ ವಿರುದ್ಧ ಸಾಕಷ್ಟು ಪ್ರತಿಭಟನೆಗಳು ನಡೆದಿವೆ. ಆದರೆ, ಪ್ರತಿಭಟನಾಕಾರರನ್ನು ಬಂಧಿಸುವ ಮೂಲಕ ರಷ್ಯಾ ಸರ್ಕಾರ ಕಟು ನಿಲುವು ತಳೆದಿದೆ.
- ನಾವು ರಷ್ಯಾ ವಿಮಾನಗಳಿಗೆ ದೇಶದ ವಾಯು ಪ್ರದೇಶ ಪ್ರವೇಶಿಸಲು ಅನುಮತಿ ನೀಡುವುದಿಲ್ಲ ಎಂದು ಜರ್ಮನಿ ಪ್ರಕಟಿಸಿದೆ.
- ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎಂಬಂತೆ ಜರ್ಮನಿ, ಉಕ್ರೇನ್ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಪೂರೈಸಲು ಮುಂದಾಗಿದೆ. 1000 ಯುದ್ಧ ಟ್ಯಾಂಕ್ ನಿರೋಧಕ ಶಸ್ತ್ರಾಸ್ತ್ರಗಳು, 500 ಸ್ಟಿಂಜರ್ ಹಾಗು ಭೂಮಿಯಿಂದ ಆಗಸಕ್ಕೆ ಚಿಮ್ಮಿ ದಾಳಿ ಮಾಡಬಲ್ಲ ಕ್ಷಿಪಣಿಗಳನ್ನು ಉಕ್ರೇನ್‌ಗೆ ಪೂರೈಕೆ ಮಾಡುವುದಾಗಿ ಜರ್ಮನಿ ಘೋಷಿಸಿದೆ.








