ಗುಡಿಸಲಿಗೆ ನುಗ್ಗಿದ ಟ್ರಕ್ : ಎಂಟು ಮಂದಿ ದಾರುಣ ಸಾವು Gujarat saaksha tv
ಅಮ್ರೇಲಿ : ಟ್ರಕ್ ವೊಂದು ಗುಡಿಸಲಿಗೆ ನುಗ್ಗಿದ ಪರಿಣಾಮ ಎಂಟು ಮಂದಿ ದಾರುಣವಾಗಿ ಮೃತಪಟ್ಟಿರುವ ಘಟನೆ ಗುಜರಾತ್ ನ ಅಮ್ರೆಲಿ ಜಿಲ್ಲೆಯ ಬಧದ ಗ್ರಾಮದಲ್ಲಿ ನಡೆದಿದೆ.
ಇಂದು ಮುಂಜಾನೆ 2:30 ರ ಸುಮಾರಿಗೆ ಈ ಘಟನೆ ನಡೆದಿದ್ದು, 8 ಮತ್ತು 13 ವರ್ಷ ಇಬ್ಬರು ಮಕ್ಕಳು ಸೇರಿ ಎಂಟು ಮಂದಿ ಕೊನೆಯುಸಿರೆಳೆದಿದ್ದಾರೆ.
ಇನ್ನಿಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ.
ಚಾಲಕನ ನಿಯಂತ್ರಣ ತಪ್ಪಿ ಟ್ರಕ್ ರಸ್ತೆಯ ಬದಿಯ ಗುಡಿಸಲಿಗೆ ನುಗ್ಗಿದೆ. ಇದರಿಂದ ನಿದ್ರೆಗೆ ಜಾರಿದ್ದ ಎಂಟು ಮಂದಿ ಅಸುನೀಗಿದ್ದಾರೆ ಎಂದು ಅಮ್ರೇಲಿ ಪೆÇಲೀಸ್ ವರಿಷ್ಠಾಧಿಕಾರಿ ನಿರ್ಲಿಪ್ತ್ ರಾಯ್ ಮಾಹಿತಿ ನೀಡಿದ್ದಾರೆ. ಅಲ್ಲದೆ ಈ ಬಗ್ಗೆ ತನಿಖೆ ಮುಂದುವರೆದಿರುವುದಾಗಿ ತಿಳಿಸಿದ್ದಾರೆ.









