ಗರ್ಭಪಾತವಾದ ಕಾರಣಕ್ಕೆ 30 ವರ್ಷ ಜೈಲು ಶಿಕ್ಷಿಗೆ ಗುರಿಯಾಗಿದ್ದ ಮಹಿಳೆ ಬಿಡುಗಡೆ
ಎಲ್ ಸಲ್ವಡೋರ್ : ಗರ್ಭಪಾತ ಮಾಡಿಸಿಕೊಂಡ ಕಾರಣಕ್ಕೆ 30 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ ಮಹಿಳೆ 10 ವರ್ಷಗಳ ಬಳಿಕ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಸಾರಾ ರೋಗೆಲ್ ಹಸರಿನ ಈ ಮಹಿಳೆ, ಮನೆಗೆಲಸ ಮಾಡುತ್ತಿದ್ದ ವೇಳೆ ರಕ್ತಸ್ರಾವದ ಸಮಸ್ಯೆಯಿಂದಾಗಿ ಅಕಸ್ಮಾತ್ ಆಗಿ ಆದ ಗರ್ಭಪಾತದ ಕಾರಣ ಅಕ್ಟೋಬರ್ 2012ರಲ್ಲಿ ಅವರನ್ನ ಬಂಧಿಸಲಾಗಿತ್ತು. ಇನ್ನೂ ಹುಟ್ಟದೇ ಇರುವ ಮಗುವನ್ನು ಕೊಂದಿರುವ ಆರೋಪದ ಮೇಲೆ 30 ವರ್ಷಗಳ ಕಾಲ ಶಿಲು ಶಿಕ್ಷೆಗೂ ಗುರಿಯಾಗಿದ್ದರು..
ಈ ಪ್ರಕರಣವನ್ನ ವಿರೋಧಿಸಿ ಜನರು ಬೀದಿಗಿಳಿದು ಉಗ್ರ ಹೋರಾಟಗಳನ್ನೂ ಸಹ ನಡೆಸಿದ್ದರು. ಸಾರಾ ಜೈಲಿಗೆ ಹೋಗುವ ತಪ್ಪು ಮಾಡಿಲ್ಲ. ತನ್ನ ಮಗುವನ್ನು ಕಳೆದುಕೊಂಡ ದುಃಖದಲ್ಲಿದ್ದ ಆಕೆ ತನ್ನ ಕುಟುಂಬದೊಂದಿಗೆ ಇರಬೇಕಿತ್ತು. ಆದರೆ ಆಕೆಯನ್ನು ಅನ್ಯಾಯವಾಗಿ 9 ವರ್ಷಗಳ ಕಾಲ ಸೆರೆವಾಸದಲ್ಲಿಡಲಾಯಿತು ಎಂದು ಮಹಿಳಾಪರ ಹೋರಾಟಗಾತಿ ಮೊರೆನಾ ತಿಳಿಸಿದ್ದಾರೆ. ಗರ್ಭಪಾತದ ವಿರುದ್ಧ ಅತ್ಯಂತ ಕಠಿಣ ಕಾನೂನುಗಳನ್ನು ಹೊಂದಿರುವ ಎಲ್ ಸಲ್ವಡಾರ್ ನಲ್ಲಿ ಅತ್ಯಾಚಾರದ ಪ್ರಕರಣಗಳಲ್ಲೂ ಸಹ ಗರ್ಭಪಾತಕ್ಕೆ ಅವಕಾಶ ಕೊಡಲಾಗಿಲ್ಲ. ಅಷ್ಟೇ ಅಲ್ಲ ತಾಯಂದಿರ ಜೀವಕ್ಕೇ ಹೋಗುತ್ತೆ ಅನ್ನೋ ಪರಿಸ್ಥಿತಿ ಇದ್ರೂ ಸಹ ಗರ್ಭಪಾತ ಮಾಡಿಸಿಕೊಂಡ್ರೆ 40 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ.