ನವದೆಹಲಿ: ಹರಿಯಾಣ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಆಯೋಗ ಮುಂದೂಡಿದೆ.
ಅಸೋಜ್ ಅಮವಾಸ್ಯೆಯನ್ನು ಬಿಷ್ಣೋಯ್ ಸಮುದಾಯದ (Bishnoi community)ವರು ಹಬ್ಬದಂತೆ ಆಚರಿಸುತ್ತಿದ್ದಾರೆ. ಹೀಗಾಗಿ ಭಾರತೀಯ ಚುನಾವಣಾ ಆಯೋಗವು (ECI) ಹರಿಯಾಣ ಹಾಗೂ ವಿಧಾನಸಭಾ ಚುನಾವಣೆಗಳ ದಿನಾಂಕದಲ್ಲಿ ಬದಲಾವಣೆ ಘೋಷಿಸಿದೆ.
ಅಕ್ಟೋಬರ್ 1 ರಂದು ನಡೆಯಬೇಕಿದ್ದ ಹದಿಯಾಣ ವಿಧಾನಸಭಾ ಚುನಾವಣಾ (Haryana Assembly polls) ದಿನಾಂಕವನ್ನು ಅಕ್ಟೋಬರ್ 5ಕ್ಕೆ ನಿಗದಿಪಡಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರ (Jammu and Kashmir) ಹಾಗೂ ಹರಿಯಾಣ ವಿಧಾನಸಭೆ ಚುನಾವಣೆಯ ಮತ ಎಣಿಕೆ ದಿನಾಂಕವನ್ನು ಅಕ್ಟೋಬರ್ 4ರ ಬದಲಿಗೆ ಅಕ್ಟೋಬರ್ 8ಕ್ಕೆ ಮುಂದೂಡಲಾಗಿದೆ.
ಈ ಮೂಲಕ ಚುನಾವಣಾ ಆಯೋಗವು ಗುರು ಜಾಂಬೇಶ್ವರನ ಸ್ಮರಣಾರ್ಥ ಅಸೋಜ್ ಅಮವಾಸ್ಯೆ ಹಬ್ಬ ಆಚರಿಸುವ ಬಿಷ್ಣೋಯ್ ಸಮುದಾಯದ ದೀರ್ಘಕಾಲದ ಸಂಪ್ರದಾಯಕ್ಕೆ ಗೌರವ ನೀಡಿದೆ.








