ಎಲೆಕ್ಷನ್ ಎಫೆಕ್ಟ್ : ಬಿಜೆಪಿಯಿಂದ ಉಚಿತ ಎಲ್ ಪಿಜಿ ಘೋಷಣೆ
ಗುಜರಾತ್ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳ ಮಾತ್ರ ಬಾಕಿ ಉಳಿದಿವೆ. ದೀಪಾವಳಿ ಮುಗಿಯುತ್ತಿದ್ದಂತೆ ಚುನಾವಣೆ ಆಯೋಗ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟವಾಗಲಿದೆ.
ಈ ಹಿನ್ನೆಲೆಯಲ್ಲಿ ಗುಜರಾತ್ ನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಜನರಿಗೆ ಹಲವು ಆಶ್ವಾಸನೆಗಳನ್ನು ನೀಡುತ್ತಿದ್ದಾರೆ.
ಈ ಬಾರಿ ಗುಜರಾತ್ ನಲ್ಲಿ ಬಿಜೆಪಿ ವರ್ಸಸ್ ಆಮ್ ಆದ್ಮಿ ಪಾರ್ಟಿ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಎರಡೂ ಪಕ್ಷಗಳು ತಮ್ಮದೇಯಾದ ರಣತಂತ್ರಗಳನ್ನು ರೂಪಿಸುತ್ತಾ ಜನರನ್ನು ಸೆಳೆಯುತ್ತಿವೆ.
ಅದರ ಭಾಗವಾಗಿ ಮೋದಿ ತವರು ಗುಜರಾತ್ ನಲ್ಲಿ ಆಡಳಿತರೂಢ ಬಿಜೆಪಿ ಪಕ್ಷ ಉಚಿತ ಕೊಡುಗೆಗಳ ಆಶ್ವಾಸನೆಗಳನ್ನು ನೀಡುತ್ತಿದೆ.
ವಿಧಾನಸಭಾ ಚುನಾವಣೆಯಲ್ಲಿ ಗಮನದಲ್ಲಿಟ್ಟುಕೊಂಡು ಗುಜರಾತ್ ಬಿಜೆಪಿ ಸರ್ಕಾರ ರಾಜ್ಯಾದ್ಯಂತ ಪ್ರತಿ ಮನೆಗೂ ವರ್ಷಕ್ಕೆ ಎರಡು ಎಲ್ ಪಿಜಿ ಸಿಲಿಂಡರ್ ಗಳನ್ನು ಉಚಿತವಾಗಿ ನೀಡಲು ತೀರ್ಮಾನ ತೆಗೆದುಕೊಂಡಿದೆ.
ಇದರಿಂದ ಸರ್ಕಾರಕ್ಕೆ 1 ಸಾವಿತ ಕೋಟಿ ಹೊರೆಬೀಳಲಿದ್ದು, ಇದಕ್ಕಾಗಿ ಸರ್ಕಾರ 650 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆಯಂತೆ.
ಗುಜರಾತ್ ನಲ್ಲಿ 38 ಲಕ್ಷಕ್ಕೂ ಹೆಚ್ಚು ಗೃಹಿಣಿಯರಿದ್ದು, ಮಹಿಳಾ ಮತಗಳನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆ ಜಾರಿ ಮಾಡಲಾಗಿದೆ ಎಂದು ಅಂದಾಜಿಸಲಾಗುತ್ತಿದೆ.
ಅಂದಹಾಗೆ ಇಲ್ಲಿ ವಿಚಿತ್ರ ಸಂಗತಿ ಏನಂದರೇ ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿ ಅವರು ಅರವಿಂದ ಕೇಜ್ರಿವಾಲ್ ಅವರ ಉಚಿತ ಕೊಡುಗೆಗಳ ಆಶ್ವಾಸನೆಗಳನ್ನ ಟೀಕೆ ಮಾಡಿದ್ದರು. ಆದ್ರೆ ಇದೀಗ ಮೋದಿ ತವರಿನಲ್ಲಿಯೇ ಉಚಿತ ಕೊಡುಗೆ ಸದ್ದು ಮಾಡುತ್ತಿದೆ.