Election results 2022 | ಯುಪಿಯಲ್ಲಿ ಕೇಸರಿ.. ಪಂಜಾಬ್ ನಲ್ಲಿ ಆಪ್.. ಯಾರಿಗೆ ಎಲ್ಲಿ ಮುನ್ನಡೆ…?
ಹೈದರಾಬಾದ್ : ಉತ್ತರ ಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ್, ಮಣಿಪುರ ವಿಧಾನಸಭಾ ಚುನಾವಣೆ ಮತ ಎಣಿಕೆ ಆರಂಭವಾಗಿದೆ. ಮೊದಲಿಗೆ ಅಂಚೆ ಮತಗಳನ್ನು ಸಿಬ್ಬಂದಿ ಎಣಿಕೆ ಮಾಡಲಾಗಿದೆ.
ಸದ್ಯದ ಟ್ರೆಂಡ್ ಪ್ರಕಾರ
*ಉತ್ತರ ಪ್ರದೇಶದಲ್ಲಿ 403 ಕ್ಷೇತ್ರಗಳ ಪೈಕಿ 116 ಸ್ಥಾನಗಳಲ್ಲಿ ಬಿಜೆಪಿ ಆರಂಭಿಕ ಮುನ್ನಡೆ ಪಡೆದುಕೊಂಡಿದೆ.
ಸಮಾಜವಾದಿ ಪಕ್ಷ 77 ಹಾಗೂ ಬಿಎಸ್ ಪಿ 3 ಕಾಂಗ್ರೆಸ್ 2 ಸ್ಥಾನದಲ್ಲಿ ಮುನ್ನಡೆಯಲ್ಲಿದೆ. ಮ್ಯಾಜಿಕ್ ನಂಬರ್ : 202
*ಉತ್ತರಾಖಂಡದಲ್ಲಿ ಬಿಜೆಪಿ 28, ಕಾಂಗ್ರೆಸ್ 29 ಸ್ಥಾನಗಳಲ್ಲಿ ಮುನ್ನಡೆ ಪಡೆದುಕೊಂಡಿದೆ. ಮ್ಯಾಜಿಕ್ ನಂಬರ್ : 36
*ಪಂಜಾಬ್ನಲ್ಲಿ ಕಾಂಗ್ರೆಸ್ 21, ಎಎಪಿ 37, ಬಿಜೆಪಿ 1 ಕ್ಷೇತ್ರಗಳಲ್ಲಿ ಮುನ್ನಡೆಯಲಿದೆ. ಮ್ಯಾಜಿಕ್ ನಂಬರ್ : 61
*ಗೋವಾದಲ್ಲಿ ಬಿಜೆಪಿ 16, ಕಾಂಗ್ರೆಸ್ 15 ಸ್ಥಾನದಲ್ಲಿ ಮುನ್ನಡೆಯಲಿದೆ. ಮ್ಯಾಜಿಕ್ ನಂಬರ್ : 21
*ಮಣಿಪುರದಲ್ಲಿ ಬಿಜೆಪಿ 16, ಕಾಂಗ್ರೆಸ್ 13 ಸ್ಥಾನದಲ್ಲಿ ಮುನ್ನಡೆ ಪಡೆದುಕೊಂಡಿವೆ. ಮ್ಯಾಜಿಕ್ ನಂಬರ್ : 31
ಉತ್ತರ ಪ್ರದೇಶದಲ್ಲಿ 403, ಪಂಜಾಬ್ 117, ಉತ್ತರಾಖಂಡ್ 70, ಮಣಿಪುರ 60 ಹಾಗೂ ಗೋವಾದ 40 ಸ್ಥಾನಗಳಲ್ಲಿ ಮತದಾನವಾಗಿದ್ದು, ಇಂದು ಎಲ್ಲ ರಾಜ್ಯಗಳ ಫಲಿತಾಂಶ ಬಹಿರಂಗಗೊಳ್ಳಲಿದೆ.
elections-2022-results-counting-live-updates