ಮುಂಬೈ : ಇದೀಗ ದೇಶದಲ್ಲಿ ಹೆಚ್ಚೆಚ್ಚು ಜನರು ಎಲೆಕ್ಟ್ರಿಕಲ್ ವಾಹನಗಳತ್ತ ವಾಲುತ್ತಿದ್ದು , ಎಲೆಕ್ಟ್ರಿಕಲ್ ವಾಹನಗಳಿಗೆ ಹೆಚ್ಚು ಡಿಇಮ್ಯಾಂಡ್ ಬಂದಿದೆ.. ಇ ಕಾರು , ಇ ಬೈಕ್ ಗಳನ್ನೇ ಖರೀದಿಸಲು ಜನರು ಮುಂದಾಗುತ್ತಿದ್ದಾರೆ..
ಇದು ಪರಿಸರ ಸ್ನೇಹಿ , ಜೊತೆಗೆ ಹೆಚ್ಚಾಗ್ತಿರುವ ಪೆಟ್ರೋಲ್ , ಡೀಸೆಲ್ ಕೊರತೆಯ ನಡುವೆ ಭವಿಷ್ಯದಲ್ಲಿ ಉತ್ತಮ ಆಯ್ಕೆಯೂ.. ಆದ್ರೆ ಪ್ರತಿಯೊಂದರಲ್ಲೂ ಅನುಕೂಲ , ಅನಾಕೂಲಗಳಿದ್ದೇ ಇರುವ ಹಾಗೆ ಇದರಲ್ಲೂ ಇದೆ..
ಅಂದ್ಹಾಗೆ ಮಹಾರಾಷ್ಟ್ರದ ಪುಣೆಯಲ್ಲಿ ಎಲೆಕ್ಟ್ರಿಕಲ್ ಬೈಕ್‍ಗಳನ್ನು ಚಾರ್ಚಿಂಗ್ ಮಾಡುತ್ತಿದ್ದ ವೇಳೆ ಔಟ್‍ಲೆಟ್‍ನಲ್ಲಿ ಬೆಂಕಿ ಕಾಣಿಸಿಕೊಂಡು 7 ಎಲೆಕ್ಟ್ರಿಕಲ್ ಬೈಕ್‍ಗಳು ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ..
ಸೋಮವಾರ ಸಂಜೆ ಪುಣೆಯ ಗಂಗಾಧಾಮ್ ಪ್ರದೇಶದ ಬಳಿ ಇರುವ ಇ-ಬೈಕ್ ಅಂಗಡಿಯಲ್ಲಿ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಈ ಬಗ್ಗೆ ಮಾತನಾಡಿದ ಅಗ್ನಿಶಾಮಕ ದಳದ ಅಧಿಕಾರಿ, ಬೈಕ್‍ಗಳಿಗೆ ಪ್ಲಗ್ ಹಾಕಿ ಚಾರ್ಚಿಂಗ್ ಮಾಡುವ ವೇಳೆ ಶಾರ್ಟ್ ಸರ್ಕ್ಯೂಟ್ ಆಗಿ ಬೈಕ್ ಗಳಿಗೆ ಬೆಂಕಿ ಹೊತ್ತಿಕೊಂಡಿರಬಹುದು. ಆದರೆ ಬೆಂಕಿ ಹೊತ್ತಿಕೊಳ್ಳಲು ನಿಖರವಾದ ಕಾರಣ ತಿಳಿದಿಲ್ಲ.. ತನಿಖೆಯ ನಂತರವಷ್ಟೇ ತಿಳಿಯಲಿದೆ ಎಂದು ತಿಳಿಸಿದ್ದಾರೆ..








