ಆ್ಯಶಸ್ ಸರಣಿಗೆ ಆಸ್ಟ್ರೇಲಿಯಾ ಭರ್ಜರಿ ಆರಂಭ: ಈ ಸರಣಿಯಲ್ಲಿ 85 ವರ್ಷಗಳ ಬಳಿಕ ಪಂದ್ಯದ ಮೊದಲ ಎಸೆತದಲ್ಲೇ ವಿಕೆಟ್ ಪತನ, ಆ್ಯಶಸ್ ಇತಿಹಾಸದಲ್ಲಿ ಇದು ನಾಲ್ಕನೇ ಬಾರಿ.
ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯ ನಡುವಿನ ಅತ್ಯಂತ ಹಳೆಯ ಕ್ರಿಕೆಟ್ ಸಮರ ಎಂದು ಪರಿಗಣಿಸಲಾಗಿರುವ ಆಶಸ್ ಸರಣಿ ಆರಂಭವಾಗಿದೆ. ಇಂಗ್ಲೆಂಡ್ ಪಂದ್ಯದ ಮ0ದಲದಿನವೆ ಕಳಪೆ ಆರಂಭವನ್ನ ಪಡೆದುಕೊಂಡಿದೆ, ಮಿಚೆಲ್ ಸ್ಟಾರ್ಕ್ ಎಸೆದ ಪಂದ್ಯದ ಮೊದಲ ಎಸೆತದಲ್ಲೇ ಆರಂಭಿಕ ರೋರಿ ಬರ್ನ್ಸ್ ಬೌಲ್ಡ್ ಮಾಡಿ ಪಂದ್ಯಕ್ಕೆ ಭರ್ಜರಿ ಶುರುವಾತು ತಂದುಕೊಟ್ಟರು. 1936ರಲ್ಲಿ ಆ್ಯಶಸ್ ಸರಣಿಯಲ್ಲಿ ಅಂದರೆ 85 ವರ್ಷಗಳ ಹಿಂದೆ ಪಂದ್ಯದ ಮೊದಲ ಎಸೆತದಲ್ಲೇ ವಿಕೆಟ್ ಪತನವಾಯಿತು. 139 ವರ್ಷಗಳ ಆಶಸ್ ಇತಿಹಾಸದಲ್ಲಿ ಇದು ನಾಲ್ಕನೇ ಬಾರಿ. ಈ ಸರಣಿಯನ್ನು ಮೊದಲ ಬಾರಿಗೆ 1882 ರಲ್ಲಿ ಆಡಲಾಯಿತು.
ಇಂಗ್ಲೆಂಡ್ ನಾಯಕ ಜೋ ರೂಟ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆಸ್ಟ್ರೇಲಿಯದ ಬೌಲರ್‌ಗಳ ಮುಂದೆ ರೂಟ್‌ನ ಈ ನಿರ್ಧಾರ ತಪ್ಪೆಂದು ಸಾಬೀತಾಯಿತು. ಮೊದಲ ಎಸೆತದಲ್ಲಿ ಸ್ಟಾರ್ಕ್ ರೋರಿ ಬರ್ನ್ಸ್ ಅವರ ಸ್ಟಂಪ್‌ಗಳನ್ನು ಚದುರಿಸಿದರು. ಬರ್ನ್ಸ್ ಈ ಋತುವಿನಲ್ಲಿ ಆರನೇ ಬಾರಿ ರನ್ ಇಲ್ಲದೆ ಔಟಾದರು. 6 ಓವರ್‌ಗೆ 11 ರನ್‌ಗಳಿಗೆ ಇಂಗ್ಲೆಂಡ್‌ನ ಮೂರು ವಿಕೆಟ್‌ಗಳು ಪತನಗೊಂಡಿದ್ದವು.
ಪಂದ್ಯ ಶುರುವಾದ ಒಂದು ಗಂಟೆಯೊಳಗೆ ಇಬ್ಬರು ಇಂಗ್ಲೆಂಡ್ ಆಟಗಾರರಾದ ಬರ್ನ್ಸ್ ಮತ್ತು ನಾಯಕ ಜೋ ರೂಟ್ ಶೂನ್ಯಕ್ಕೆ ಔಟಾಗಿ ಪೆವಿಲಿಯನ್‌ಗೆ ಮರಳಿದರು. ಅದೇ ಸಮಯದಲ್ಲಿ ಡೇವಿಡ್ ಮಲಾನ್ 9 ಎಸೆತಗಳಲ್ಲಿ 6 ರನ್ ಗಳಿಸಿ ಆಸ್ಟ್ರೇಲಿಯಾ ಬೌಲರ್ ಗಳಿಗೆ ವಿಕೆಟ್ ಒಪ್ಪಿಸಿದರು.