ರೈತರ ನಿದ್ದೆಗೆಡಿಸಿದ್ದ ಪುಂಡಾನೆ ಸೆರೆ
ಚಿಕ್ಕಮಗಳೂರು: ಕಳೆದ ಎರಡ್ಮೂರು ತಿಳಿಂಗಳಿನಿಂದ ಚಿಕ್ಕಮಗಳೂರು ತಾಲೂಕಿನ ಸುತ್ತಮುತ್ತಲಿನ ಹಳ್ಳಿಯ ರೈತರಿಗೆ ರೋದನೆ ಕೊಡುತ್ತಿದ್ದ ಪುಂಡಾನೆಯನ್ನು ಸ್ಥಳೀಯರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಹಿಡಿದಿದ್ದಾರೆ.
ತಾಲೂಕಿನ ಬೀಕನಹಳ್ಳಿ-ಹಂಪಾಪುರ, ಕೆಂಪನಹಳ್ಳಿ, ಚಂದ್ರಕಟ್ಟೆ, ಐನಳ್ಳಿ ಸೇರಿದಂತೆ ಸುತ್ತಮುತ್ತಲಿನ ರೈತರಿಗೆ ಪುಂಡಾನೆ ರೋದನೆ ಕೊಡುತ್ತಿತ್ತು. ಈ ಆನೆಯನ್ನು ಹಿಡಿಯಲು ಕಾರ್ಯಾಚರಣೆಗೆ ಇಳಿದಿದ್ದ ಅರಣ್ಯ ಇಲಾಖೆ ಸಿಬ್ಬಂದಿ, ಆನೆಯನ್ನು ಹಿಡಿಯಲು ಮೈಸೂರು ಅಂಬಾರಿ ಹೊರುವ ಭೀಮಾ-ಅರ್ಜುನ ಆನೆಯನ್ನು ಕರೆಸಿದ್ದರು.
ಆದರೆ ಇದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ನಂತರ ಸಕ್ರೇಬೈಲು ಆನೆ ಬಿಡಾರದಿಂದ ಸಾಗರ್, ಪಾಲು, ಭಾನುಮತಿಯೆಂಬ ಮತ್ತೆ ಮೂರು ಆನೆ ಕರೆಸಿ ಪುಂಡಾನೆಯನ್ನು ಹಿಡದಿದ್ದಾರೆ.