Elephants : ಹುಲಿ ಚಿರತೆ ಆಯ್ತು ಈಗ ಆನೆಗಳ ಉಪಟಳ – ಜನರಲ್ಲಿ ಆತಂಕ
ರಾಜ್ಯದಲ್ಲಿ ಈಗಾಗಲೇ ಅಲ್ಲಲ್ಲಿ ಚಿರತೆ, ಹುಲಿಗಳು ಕಾಣಿಸಿಕೊಂಡು ಜನ ಆತಂಕದಲ್ಲಿರುವಾಗಲೇ ಇದೀಗ ಆನೆಗಳ ಹಾವಳಿಯೂ ಹೆಚ್ಚಾಗಿದೆ.. ಕೆ.ಆರ್.ನಗರ ತಾಲೂಕಿನಲ್ಲಿ ಗ್ರಾಮಕ್ಕೆ ಆನೆಗಳು ನುಗ್ಗಿದ್ದು , ಗ್ರಾಮಸ್ಥರು , ರೈತರು ಭಯಭೀತರಾಗಿದ್ದಾರೆ.. ಆನೆಗಳ ಸೆರೆಗೆ ಗ್ರಾಮಸ್ಥರು ಆಗ್ರಹಿಸಿದ್ದು , ಅರಣ್ಯ ಿಲಾಖೆ ಅಧಿಕಾರಿಗಳು ಹೈರಾಣಾಗಿದ್ದಾರೆ..
ಅರಕೆರೆ ಗ್ರಾಮದಲ್ಲಿ ಆನೆಗಳು ಸಂಚಾರ ಮಾಡಿದ್ದು ಗ್ರಾಮಸ್ಥರು ಭಯಭೀತರಾಗಿದ್ದಾರೆ..
ರಡು ಆನೆಗಳು.
ಎರಡು ಆನೆಗಳು ಜಮೀನಿನಲ್ಲಿ ಓಡಾಡಿವೆ.. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳ ಕಾಡಿಗಟ್ಟಲು ಕಾರ್ಯಾಚರಣೆ ಶುರು ಮಾಡಿದ್ದಾರೆ.
ಎರಡು ತಿಂಗಳಿಂದಲೂ ಟಿ.ನರಸೀಪುರ ತಾಲೂಕಿನಲ್ಲಿ ಚಿರತೆ ಹಾವಳಿ ಇತ್ತು. ಇಬ್ಬರ ಜೀವಗಳನ್ನೂ ಬಲಿ ಪಡೆದಿವೆ.. ನಿರಂತರವಾಗಿ ಕಾರ್ಯಾಚರಣೆ ನಡೆಸಿದರೂ ಅವುಗಳ ಸುಳಿವು ಮಾತ್ರ ಸಿಕ್ಕಿಲ್ಲ..
ನಂಜನಗೂಡು ತಾಲೂಕಿನಲ್ಲಿ ರೈತನ ಮೇಲೆ ಹುಲಿ ದಾಳಿ ಮಾಡಿತ್ತು.. ಇದೀಗ ಏಕಕಾಲಕ್ಕೆ ಚಿರತೆ, ಹುಲಿ, ಆನೆಗಳ ವಿರುದ್ಧ ಕಾರ್ಯಾಚರಣೆ ಶುರುವಾಗಿದೆ.








