ಐಪಿಎಲ್ ನಲ್ಲಿ ಎಲಿಮಿನೇಟರ್ ಫೈಟ್ | ಕೆಕೆಆರ್- ಆರ್ಸಿಬಿ ನಡುವೆ ನಾಕೌಟ್ ಮ್ಯಾಚ್..!
ಯುಎಇಗೆ ಬಂದ ಮೇಲೆ ಕೊಲ್ಕತ್ತಾ ನೈಟ್ ರೈಡರ್ಸ್ ಅದೃಷ್ಟ ಬದಲಾಗಿದೆ. ಆಡಿರುವ 7 ಪಂದ್ಯಗಳಲ್ಲಿ 5ನ್ನು ಗೆದ್ದಿದೆ. ಭಾರತದಲ್ಲಿ ಐಪಿಎಲ್ ನಡೆದಿದ್ದಾಗ 7 ಪಂದ್ಯಗಳಲ್ಲಿ 5ನ್ನು ಸೋತಿತ್ತು.
ಈಗ ನೈಟ್ರೈಡರ್ಸ್ ಆತ್ಮವಿಶ್ವಾಸವೂ ಹೆಚ್ಚಿದೆ. ಇನ್ನೊಂದು ಕಡೆಯಲ್ಲಿ ಆರ್ಸಿಬಿ ತನ್ನ ಸ್ಥಿರ ಪ್ರದರ್ಶನದ ಮೂಲಕ ಗಮನ ಸೆಳೆದಿದೆ. ನೆಟ್ ರನ್ರೇಟ್ ಆಧಾರದಲ್ಲಿ 3ನೇ ಸ್ಥಾನ ಪಡೆದ ವಿರಾಟ್ ಬಳಗ ಕೆಕೆಆರ್ ವಿರುದ್ಧ ಎಲಿಮಿನೇಟರ್ ಆಡಲು ಸಿದ್ಧವಾಗಿದೆ.
ಶಾರ್ಜಾದಲ್ಲಿ ಸೋತವರು ಮನೆ ಕಡೆ ಮುಖಮಾಡಿದರೆ ಗೆದ್ದವರು ಚೆನ್ನೈ ವಿರುದ್ಧ ಫೈನಲ್ ಆಡಲು ಕ್ವಾಲಿಫೈಯರ್ 2ರಲ್ಲಿ ಡೆಲ್ಲಿ ವಿರುದ್ಧ ಸೆಣಸಾಡ ಬೇಕಿದೆ.
ಲೀಗ್ ಹಂತದಲ್ಲಿ ಕೆಕೆಆರ್ ಮತ್ತು ಆರ್ಸಿಬಿ ಎದುರಾಗಿದ್ದಾಗ 1-1ರಲ್ಲಿ ಸಮವಾಗಿತ್ತು. ಆರ್ಸಿಬಿ ಭಾರತದಲ್ಲಿ ಗೆದ್ದರೆ, ಕೆಕೆಆರ್ ಯುಎಇನಲ್ಲಿ ಆರ್ಸಿಬಿಯನ್ನು ಹೀನಾಯವಾಗಿ ಸೋಲಿಸಿತ್ತು.
ಹೀಗಾಗಿ ಕೆಕೆಆರ್ ಆತ್ಮವಿಶ್ವಾಸ ಹೆಚ್ಚಿದೆ. ಶಾರ್ಜಾದಲ್ಲಂತೂ ಕೆಕೆಆರ್ ಅಮೋಘ ಪ್ರದರ್ಶನ ನೀಡಿದೆ. ರಾಜಸ್ಥಾನ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್ ವಿರುದ್ಧ ಶಾರ್ಜಾದಲ್ಲಿ ಆರ್ಸಿಬಿ ಗೆದ್ದು ಬೀಗಿದ್ದು ಸುಳ್ಳಲ್ಲ.
ಕೆಕೆಆರ್ ಕೊನೆಯ ಲೀಗ್ ಪಂದ್ಯಕ್ಕೂ ಮುನ್ನ ಸಾಕಷ್ಟು ವಿಶ್ವಾಸಗಳಿಸಿಕೊಂಡಿದೆ. ಗಾಯಗೊಂಡಿದ್ದ ಆ್ಯಂಡ್ರೆ ರಸೆಲ್ ಮತ್ತು ಲೂಕಿ ಫರ್ಗ್ಯೂಸನ್ ಫಿಟ್ ಆಗಿದ್ದಾರೆ.
ಹೀಗಾಗಿ ತಂಡಕ್ಕೆ ಮರಳಲಿದ್ದಾರೆ. ಗಿಲ್ ಮತ್ತು ಅಯ್ಯರ್ ಫಾರ್ಮ್ ಬಗ್ಗೆ ಚಿಂತೆಯಿಲ್ಲ. ರಾಣಾ ಮತ್ತು ತ್ರಿಪಾಠಿ ಕೂಡ ರನ್ ಬೇಟೆಯಲ್ಲಿದ್ದಾರೆ.
ಕ್ಯಾಪ್ಟನ್ ಮೊರ್ಗಾನ್ ಬಗ್ಗೆ ಚಿಂತೆಯಿದ್ದರೂ ಕಾರ್ತಿಕ್, ರಸೆಲ್ ಮತ್ತು ಶಕೀಬ್ ಅದನ್ನು ದೂರ ಮಾಡುವ ಸಾಮರ್ಥ್ಯ ಹೊಂದಿದ್ದಾರೆ.
ಬೌಲಿಂಗ್ನಲ್ಲಿ ವರುಣ್ ಚಕ್ರವರ್ತಿ, ನರೈನ್ ಮತ್ತು ಲೂಕಿ ಫರ್ಗ್ಯೂಸನ್ ಚಿಂತೆ ದೂರ ಮಾಡಲಿದ್ದಾರೆ.
ಇನ್ನು ಆರ್ಸಿಬಿ ಕೂಡ ಸೂಪರ್ ಟೀಮ್ ಆಗಿ ಕಾಣುತ್ತಿದೆ. ವಿರಾಟ್ ಮತ್ತು ದೇವದತ್ ಇತ್ತೀಚೆಗೆ ರನ್ಗಳಿಸದೇ ಇದ್ದರೂ ಉತ್ತಮ ಟಚ್ನಲ್ಲಿದ್ದಾರೆ.
ಶ್ರೀಕರ್ ಭರತ್ ಏನ್ ಮಾಡಬಲ್ಲರು ಅನ್ನುವುದು ಡೆಲ್ಲಿ ವಿರುದ್ಧದ ಮ್ಯಾಚ್ನಲ್ಲಿ ಗೊತ್ತಾಗಿದೆ. ಗ್ಲೆನ್ ಮ್ಯಾಕ್ಸ್ವೆಲ್ ಅದ್ಭುತ ಆಟ ಆಡ್ತಿದ್ದಾರೆ.
ಎಬಿ ಡಿ ವಿಲಿಯರ್ಸ್ ಡೇಂಜರಸ್. ಬೌಲಿಂಗ್ನಲ್ಲೂ ಆರ್ಸಿಬಿ ಸೂಪರ್. ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್ ಮತ್ತು ಚಹಲ್ ಅದ್ಭುತ ಆಟವನ್ನು ಆಡ್ತಿದ್ದಾರೆ.
ಶಾರ್ಜಾದ ಸ್ಲೋ ಪಿಚ್ ಎರಡೂ ತಂಡಗಳ ಬ್ಯಾಟ್ಸ್ಮನ್ಗಳಿಗೆ ಕಾಟ ಕೊಡುವುದು ಗ್ಯಾರೆಂಟಿ. ಹೀಗಾಗಿ ಬೌಲರ್ಗಳು ಪಂದ್ಯದ ಟರ್ನಿಂಗ್ ಪಾಯಿಂಟ್ ಆಗಲಿದ್ದಾರೆ.
ಕೊಲ್ಕತ್ತಾ ನೈಟ್ರೈಡರ್ಸ್
1.ಶುಭ್ಮನ್ ಗಿಲ್, 2. ವೆಂಕಟೇಶ್ ಅಯ್ಯರ್, 3. ರಾಹುಲ್ ತ್ರಿಪಾಠಿ, 5. ನಿತೀಶ್ ರಾಣಾ, 5. ಇಯಾನ್ ಮೊರ್ಗಾನ್, 6. ಆಂಡ್ರೆ ರಸೆಲ್, 7. ದಿನೇಶ್ ಕಾರ್ತಿಕ್, 8. ಸುನೀಲ್ ನರೈನ್, 9. ಲೂಕಿ ಫರ್ಗ್ಯೂಸನ್, 10. ವರುಣ್ ಚಕ್ರವರ್ತಿ, 11. ಶಿವಂ ಮಾವಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು:
ವಿರಾಟ್ ಕೊಹ್ಲಿ, 2. ದೇವದತ್ ಪಡಿಕಲ್, 3. ಶ್ರೀಕರ್ ಭರತ್, 4. ಗ್ಲೆನ್ಮ್ಯಾಕ್ಸ್ವೆಲ್, 5. ಎಬಿ ಡಿ ವಿಲಿಯರ್ಸ್, 6. ಡ್ಯಾನ್ ಕ್ರಿಶ್ಚಿಯನ್/ ಕೈಲ್ ಜೇಮಿಸನ್/ ವಹಿಂಡು ಹಸರಂಗ 7. ಶಹಬಾಝ್ ಅಹ್ಮದ್, 8. ಹರ್ಷಲ್ ಪಟೇಲ್, 9. ಜಾರ್ಜ್ ಗಾರ್ಟನ್, 10. ಮೊಹಮ್ಮದ್ ಸಿರಾಜ್ 11. ಯಜ್ವೇಂದ್ರ ಚಹಲ್









