ಟ್ವೀಟರ್ ಖರೀದಿಸಿದ ನಂತರ ಕಂಪನಿಗೆ ಮೊದಲ ಸಲಹೆ ನೀಡಿದ ಎಲಾನ್ ಮಸ್ಕ್
ಟ್ವೀಟರ್ ಸೋಶಿಯಲ್ ಮೀಡಿಯಾ ನೆಟ್ವರ್ಕ್ ನ್ನೇ ಖರೀದಿ ಮಾಡಿದ ಎಲಾನ್ ಮಸ್ಕ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಬಹು ಚರ್ಚಿತ ವ್ಯಕ್ತಿ.
ಟ್ವೀಟರ್ ಕೊಂಡುಕೊಳ್ಳುವುದಕ್ಕೂ ಮೊದಲೆ ಟ್ವೀಟರ್ ನ ಕಾರ್ಯ ವೈಖರಿ ಬಗ್ಗೆ ಎಲಾನ್ ಮಸ್ಕ್ ದೂರುತ್ತಿದ್ದರು. ಇದೀಗ ಟ್ವಿಟ್ಟರ್ ಎಲೋನ್ ಮಸ್ಕ್ ಕೈ ಸೇರಿದ್ದು ಮೊದಲ ಬಾರಿಗೆ ಟ್ವೀಟರ್ ಫೀಚರ್ಸ್ ಗೆ ಸಂಬಂಧಿಸಿದಂತೆ ಸಲಹೆಯನ್ನು ನೀಡಿದ್ದಾರೆ. ಟ್ವಿಟರ್ ನಲ್ಲಿ ನೇರ ಸಂದೇಶ ಕಳುಹಿಸುವಾಗ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಅನ್ನು ಹೊಂದಿರಬೇಕು ಇದರಿಂದ ಯಾರೂ ನಿಮ್ಮ ಸಂದೇಶವನ್ನು ಟ್ರ್ಯಾಕ್ ಮಾಡಲು ಅಥವಾ ಹ್ಯಾಕ್ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಎಲೋನ್ ಮಸ್ಕ್ ಟ್ವೀಟ್ ಮಾಡಿ, ಟ್ವಿಟ್ಟರ್ ಡಿಎಂ (ಡೈರೆಕ್ಟ್ ಮೆಸೇಜ್) ಸಿಗ್ನಲ್ ಅಪ್ಲಿಕೇಶನ್‌ನಂತೆ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಅನ್ನು ಹೊಂದಿರಬೇಕು, ಇದರಿಂದ ಯಾರೂ ನಿಮ್ಮ ಸಂದೇಶಗಳನ್ನು ಕಣ್ಣಿಡಲು ಅಥವಾ ಹ್ಯಾಕ್ ಮಾಡಲು ಸಾಧ್ಯವಿಲ್ಲ ಎಂದು ಟ್ವಿಟ್ ಮಾಡಿದ್ದಾರೆ.
ವಾಟ್ಸಾಪ್, ಸಿಗ್ನಲ್‌ಗೆ ಮತ್ತು ಟೆಲಿಗ್ರಾಮ್‌ನಿಂದ ಫೇಸ್‌ಬುಕ್ ಮೆಸೆಂಜರ್‌ಗೆ ಎಲ್ಲಾ ಅಪ್ಲಿಕೇಶನ್‌ಗಳು ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಆಗಿ ಮೆಸೇಜ್ ರವಾನಿಸುತ್ತಿವೆ.
ಎಂಡ್-ಟು-ಎಂಡ್ ಎನ್‌ಕ್ರಿಪ್ಶ ನಲ್ಲಿ ಮೆಸೆಜ್ ಕಳುಹಿಸುವುದರಿಂದ ಮೆಸೆಜ್ ಕಳುಹಿಸಿದ ಮತ್ತು ಸ್ವೀಕರಿಸಿದ ವ್ಯಕ್ತಿ ಬಿಟ್ಟು ನಡುವಿನ ಯಾವುದೇ 3 ನೇ ವ್ಯಕ್ತಿ ಸಂದೇಶವನ್ನ ನೋಡಲು ಸಾಧ್ಯವಾಗುವುದಿಲ್ಲ. ನಿಮ್ಮ ಸಂದೇಶವ ಕೊನೆಯಿಂದ ಕೊನೆಯವರೆಗೆ ಎನ್‌ಕ್ರಿಪ್ಟ್ ಆಗಿದ್ದರೆ, ಯಾವುದೇ ಮೂರನೇ ವ್ಯಕ್ತಿ ಸಹ ನೋಡುಲು ಸಾಧ್ಯವಿಲ್ಲ.








