ವಿಶ್ವದ ಶ್ರೀಮಂತ ವ್ಯಕ್ತಿ ಪಟ್ಟಿಯಿಂದ ಕುಸಿದ ಎಲಾನ್ ಮಸ್ಕ್….
ವಿಶ್ವದ ನಂಬರ್ 1 ಶ್ರೀಮಂತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಟೆಸ್ಲಾ ಕಂಪನಿಯ ಮಾಲೀಕ ಎಲಾನ್ ಮಸ್ಕ್ ಇದೀಗ 2 ನೇ ಸ್ಥಾನಕ್ಕೆ ಕುಸಿದಿದ್ದಾರೆ. ಬರ್ನಾರ್ಡ್ ಅರ್ನಾಲ್ಟ್ ಈಗ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ವಿರಾಜಮಾನರಾಗಿದ್ದಾರೆ.
ಬ್ಲೂಮ್ ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಎಲೋನ್ ಮಸ್ಕ್ ಒಟ್ಟು 178.6 ಬಿಲಿಯನ್ ಡಾಲರ್ ನಿವ್ವಳ ಮೌಲ್ಯ ಹೊಂದಿದ್ದಾರೆ. 188.6 ಬಿಲಿಯನ್ ಡಾಲರ್ ಸಂಪತ್ತು ಹೊಂದುವ ಮೂಲಕ ಅರ್ನಾಲ್ಟ್ ಶ್ರೀಮಂತರ ಪಟ್ಟಿಯಲ್ಲಿ ನಂಬರ್ 1 ಸ್ಥಾನಕ್ಕೆ ಏರಿದ್ದಾರೆ.
ಅಂದ್ಹಾಗೆ ಎಲಾನ್ ಮಸ್ಕ್ ಅವರು ಟ್ವಿಟ್ಟರ್ ಅನ್ನ ಖರೀದಿ ಮಾಡಿದ್ದೇ ಅವರಿಗೆ ನೆಗೆಟಿವ್ ಆಗಿರಬಹುದೆಂದು ಅಂದಾಜಿಸಲಾಗ್ತಿದೆ.. ಟ್ವಿಟ್ಟರ್ ನಲ್ಲಿ ತರಲಾಗಿರುವ ಬದಲಾವಣೆಗಳಿಂದ ಟ್ವಿಟ್ಟರ್ ನಿಂದ ಅನೇಕರು ಆಸಕ್ತಿ ಕಳೆದುಕೊಂಡು ಬಳಕೆದಾರರ ಸಂಖ್ಯೆ ಕುಸಿಯುತ್ತಿದೆ.
44 ಬಿಲಿಯನ್ ಡಾಲರ್ ಗೆ ಟ್ವಿಟ್ಟರ್ ನ್ನು ಎಲಾನ್ ಮಸ್ಕ್ ಖರೀದಿಸಿದರು. ಮಸ್ಕ್ ಅವರ ನಿವ್ವಳ ಮೌಲ್ಯವು ನ.8ರಂದು 200 ಶತಕೋಟಿ ಡಾಲರ್ ಗಿಂತ ಕಡಿಮೆಯಾಗಿದೆ.
ಸದ್ಯ ವಿಶ್ವದ 3 ನೇ ಶ್ರೀಮಂತರೆಂಬ ಹೆಗ್ಗಳಿಕೆ ಭಾರತದ ಗೌತಮ್ ಅದಾನಿ ಅವರದ್ದು.. (134 ಶತಕೋಟಿ ಡಾಲರ್ ನಿವ್ವಳ ಮೌಲ್ಯ) Elon Musk loses spot as the world’s richest person.