ಕೇವಲ 5 ವರ್ಷಗಳಲ್ಲೇ ಮನುಷ್ಯರು ಮಂಗಳ ಗ್ರಹಕ್ಕೆ ಪ್ರಯಾಣಿಸಬಹುದು : ಎಲೋನ್ ಮಸ್ಕ್
ಅಮೆರಿಕಾ : ಸ್ಪೇಸ್ ಎಕ್ಸ್ ಕಂಪನಿಯ ಸಿಇಒ , ವಿಶ್ವದ ಅತ್ಯಂತ ಶ್ರೀಮಂತ ಎಲೋನ್ ಮಸ್ಕ್ ಅವರು , ಬಾಹ್ಯಾಕಾಶ ಲೋಕದ ಬಗ್ಗೆ ಅಚಚ್ಚರಿಕರ ಹೇಳಿಕೆ ನೀಡಿದ್ದಾರೆ.. ಹೌದು ಮುಂದಿನ 5 ವರ್ಷಗಳಲ್ಲಿ ಮಾನವನೂ ಮಂಗಳ ಗ್ರಹಕ್ಕೆ ಪ್ರಯಾಣ ಬೆಳೆಸಬಹುದು ಎಂದು ಎಲೋನ್ ಮಸ್ಕ್ ತಿಳಿಸಿದ್ದಾರೆ.
ಸ್ಪೇಸ್ಎಕ್ಸ್ನ ಸ್ಟಾರ್ಶಿಪ್ ರಾಕೆಟ್ಗಳಲ್ಲಿನ ಬೆಳವಣಿಗೆಯ ಆಧಾರಗಳ ಮೇಲೆ ಎಲೋನ್ ಮಸ್ಕ್ ಈ ಸುಳಿವನ್ನು ನೀಡಿದೆ..
ಇತ್ತೀಚಿನ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದ ಎಲೋನ್ ಮಸ್ಕ್ ಸ್ಪೇಸ್ ಎಕ್ಸ್ ಮಂಗಳ ಗ್ರಹದ ಮೇಲೆ ಮಾನವನನ್ನು ಯಾವಾಗ ಹೊತ್ತೊಯ್ಯಬಹುದು ಎಂಬ ಪ್ರಶ್ನೆಗೆ ಉತ್ತರಿಸಿ, ಒಳ್ಳೆಯ ಸನ್ನಿವೇಶವಿದ್ದರೆ ಮುಂದಿನ 5 ವರ್ಷಗಳೊಳಗೆ ಮಾನವ ಮಂಗಳ ಗ್ರಹದೆಡೆ ಪ್ರಯಾಣಿಸಬಹುದು. ಅದೇ ಸನ್ನಿವೆಶ ಚೆನ್ನಾಗಿಲ್ಲವೆಂದಾದಲ್ಲಿ ಈ ಸಮಯಾವಕಾಶ 10 ವರ್ಷಗಳ ವರೆಗೆ ವಿಸ್ತರಿಸಬಹುದು ಎಂದಿದ್ದಾರೆ.








