ಉದ್ಯೋಗಿಗಳೇ ಗಮನಿಸಿ – ಆಗಸ್ಟ್ 1 ರಿಂದ ಸಿಗಲಿದೆ ಈ ವಿಶೇಷ ಸೌಲಭ್ಯಗಳು..!
ನವದೆಹಲಿ : ಬರುವ ಆಗಸ್ಟ್ 1 ರಿಂದ ವೇತನ, ಪಿಂಚಣಿ, EMI ಸಂಬಂಧಿಸಿದ ನಿಯಮದಲ್ಲಿ ಮಹತ್ವದ ಬದಲಾವಣೆಯಾಗಲಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ರಾಷ್ಟ್ರೀಯ ಸ್ವಯಂಚಾಲಿತ ಕ್ಲಿಯರಿಂಗ್ ಹೌಸ್ ನಿಯಮಗಳನ್ನು ಬದಲಾಯಿಸಿದೆ. ಇದ್ರಿಂದಾಗಿ ಇನ್ಮುಂದೆ ವೇತನ, ಪಿಂಚಣಿ, ಇಎಂಐಗಾಗಿ ಬ್ಯಾಂಕ್ ಕೆಲಸದ ದಿನಗಳನ್ನು ಕಾಯಬೇಕಾದ ಅನಿವಾರ್ಯತೆ ಇರುವುದಿಲ್ಲ.. ಈ ಬದಲಾವಣೆಗಳು ಆಗಸ್ಟ್ 1ರಿಂದ ಜಾರಿಗೆ ಬರಲಿವೆ. ನ್ಯಾಚ್ ಸೇವೆಗಳು ವಾರದಲ್ಲಿ 7 ದಿನಗಳು ಲಭ್ಯವಿರಲಿವೆ. ಪ್ರಸ್ತುತ ಸೋಮವಾರದಿಂದ ಶುಕ್ರವಾರದವರೆಗೆ ಬ್ಯಾಂಕುಗಳು ತೆರೆದಿರುವಾಗ ಮಾತ್ರ ಈ ಸೌಲಭ್ಯಗಳು ಲಭ್ಯವಿವೆ.. ಇದ್ರಿಂದಾಗಿ ಬ್ಯಾಂಕಿನ ಕೆಲಸದ ಸಮಯದಲ್ಲಿ ಇದನ್ನು ಮಾಡಬೇಕಾಗಿತ್ತು. ಕೆಲವೊಮ್ಮೆ ತಿಂಗಳ ಮೊದಲ ದಿನವು ವಾರಾಂತ್ಯಕ್ಕೆ ಬರ್ತಿತ್ತು. ಈ ಕಾರಣದಿಂದಾಗಿ ಜನರು ತಮ್ಮ ಸಂಬಳವನ್ನು ಠೇವಣಿ ಇರಿಸಲು ಸೋಮವಾರದವರೆಗೆ ಕಾಯಬೇಕಾಗಿತ್ತು.
ಲಸಿಕೆ ಅಭಿಯಾನಕ್ಕೆ ಇದುವರೆಗೂ ಒಟ್ಟಾರೆಯಾಗಿ ಖರ್ಚಾಗಿರೋದೆಷ್ಟು ಗೊತ್ತಾ..?
ಆದ್ರೆ ಆಗಸ್ಟ್ 1ರಿಂದ ವಾರದ ಏಳೂ ದಿನ ಸೇವೆ ಸಿಗಲಿದೆ. ರಜಾ ದಿನಗಳಲ್ಲೂ ಈ ಸೇವೆ ಪಡೆಯಬಹುದಾಗಿದೆ. ಜೂನ್ ತಿಂಗಳಿನಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿತ್ತು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಶಕ್ತಿಕಾಂತ್ ದಾಸ್ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದರು. ಈ ನಿಯಮವನ್ನು ಆಗಸ್ಟ್ 1ರಿಂದ ಜಾರಿಗೆ ತರಲಾಗ್ತಿದೆ. ನ್ಯಾಚ್, ಭಾರತದ ಪಾವತಿ ನಿಗಮ ನಿರ್ವಹಿಸುವ ಬೃಹತ್ ಪಾವತಿ ವ್ಯವಸ್ಥೆಯಾಗಿದೆ. ಇದು ಲಾಭಾಂಶ, ಬಡ್ಡಿ, ಸಂಬಳ ಮತ್ತು ಪಿಂಚಣಿಯಂತಹ ವಿವಿಧ ರೀತಿಯ ಸಾಲ ವರ್ಗಾವಣೆಯ ಸೌಲಭ್ಯವನ್ನು ಒದಗಿಸುತ್ತದೆ. ಜೊತೆಗೆ ಗ್ಯಾಸ್ ಬಿಲ್ , ವಿದ್ಯುತ್ ಬಿಲ್, ಟೆಲಿಫೋನ್ ಬಿಲ್, ಮ್ಯೂಚುವಲ್ ಫಂಡ್ ಹೂಡಿಕೆ , ನೀರಿನ ಬಿಲ್, EMI, ವಿಮಾ ಪ್ರೀಮಿಯಂ ಪಾವತಿಸುವ ಸೌಲಭ್ಯವನ್ನೂ ಒದಗಿಸುತ್ತದೆ.
ಮಕ್ಕಳಿಗೆ ಕೊರೊನಾ ಲಸಿಕೆ ಯಾವಾಗ..? ಉತ್ತರ ಕೊಟ್ಟ ಏಮ್ಸ್ ನಿರ್ದೇಶಕರು…!
ಟೀಕಿಸುವವರ ವಿರುದ್ಧ ಬೇಹುಗಾರಿಕೆ ತಂತ್ರಜ್ಞಾನ ಬಳಕೆ ಖಂಡನೀಯ : ಅಮೆರಿಕಾ
ಕೊರೊನಾ ರಿಪೋರ್ಟ್ : 39,097 ಮಂದಿಗೆ ಸೋಂಕು
ಟಿಸಿಎಸ್ – 200 ಕ್ಕೂ ಹೆಚ್ಚು ಉದ್ಯೋಗಿಗಳನ್ನು ನೇಮಕಾತಿ ಮಾಡಿಕೊಳ್ಳಲು ನಿರ್ಧಾರ
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.