ಮಂಗಳವಾರ ಕನ್ನಡದಲ್ಲಿ ‘ಏನ್ ಸಮಾಚಾರ’ ಎಂದು ಟ್ವಿಟರ್ ಇಂಡಿಯಾದ ಅಧಿಕೃತ ಟ್ವಿಟರ್ ಖಾತೆಯಿಂದ
ಟ್ವೀಟ್ ಮಾಡಲಾಗಿದೆ. ಇದಕ್ಕೆ ಸಂತೋಷ ವ್ಯಕ್ತಪಡಿಸಿದ ಕನ್ನಡಿಗರು ಬಗೆ ಬಗೆಯ ಉತ್ತರಗಳನ್ನು ರೀಟ್ವೀಟ್ ಮಾಡಿದ್ದಾರೆ.
ಟ್ವಿಟರ್ ಇಂಡಿಯಾದ ಅಧಿಕೃತ ಟ್ವಿಟರ್ ಖಾತೆಯಿಂದ ಮಂಗಳವಾರ ಮಧ್ಯಾಹ್ನ 1.11 ನಿಮಿಷಕ್ಕೆ ‘ಏನ್ ಸಮಾಚಾರ’ ಎಂದು ಟ್ವೀಟ್ ಮಾಡಲಾಗಿದೆ. ಸಂಜೆ 7ರ ಸಮಯಕ್ಕೆ 740ಕ್ಕೂ ಹೆಚ್ಚು ಬಾರಿ ರೀಟ್ವೀಟ್ ಆಗಿದೆ ಮತ್ತು ಮೂರೂವರೆ ಸಾವಿರಕ್ಕೂ ಅಧಿಕ ಮಂದಿ ಮೆಚ್ಚಿದ್ದಾರೆ.
ಕನ್ನಡಿಗರು ಬಗೆ ಬಗೆಯ ಉತ್ತರಗಳನ್ನೇ ‘ಏನ್ ಸಮಾಚಾರ’ ಎಂಬ ಟ್ವೀಟ್ ಗೆ ರೀಟ್ವೀಟ್ ಮಾಡಿದ್ದಾರೆ.
ಕೆಲವರು ‘ಊಟಾ ಆಯ್ತ’, ‘ಕನ್ನಡದಲ್ಲಿ ಟ್ವೀಟ್ ಮಾಡಿದ ನಿಮಗೆ ಶ್ಯಾವಿಗೆ ಪಾಯಸ ಕುಡಿಸುತ್ತೇವೆ’, ‘ವಿದ್ಯಾರ್ಥಿ ಭವನದ ದೋಸೆ ಕೊಡಿಸುತ್ತೇವೆ’, ‘ಕನ್ನಡದವರಿಗೆಲ್ಲೋ ಕೆಲಸ ಕೊಟ್ಟಂತಿದೆ’ ಎಂದು ಟ್ವೀಟ್ ಮಾಡಿದ್ದರೆ, ಇನ್ನೂ ಕೆಲವರು ‘ಬೆಂಗಳೂರು ಬಿಸಿಲಿನಿಂದ ಉರಿತಿರೋದ ಒಂದು ಸಮಾಚಾರ’, ‘ಕನ್ನಡ ಬರಲ್ಲ ಅನ್ನೋವ್ರಿಗೆ ನೀನೂ ಸ್ವಲ್ಪ ಕನ್ನಡ ಕಲಿಸಪ್ಪ’ ಎಂದೆಲ್ಲಾ ಟ್ವೀಟ್ ಮಾಡಿದ್ದಾರೆ.
ಸದ್ಯ ಟ್ವಿಟರ್ ಇಂಡಿಯಾದ ‘ಏನ್ ಸಮಾಚಾರ’ ಟ್ವೀಟ್ ಸಕತ್ ವೈರಲ್ ಆಗುತ್ತಿದೆ.








