ಸುಶಾಂತ್ ಸಾವಿನ ಪ್ರಕರಣದಲ್ಲಿ ಈಗಾಗಲೇ ಇಡಿ ಅಡೆಕತ್ತರಿಯಲ್ಲಿ ಸಿಲುಕಿರುವ ರಿಯಾ ಹಾಗೂ ಕುಟುಂಬಕ್ಕೆ ಇದೀಗ ಮತ್ತೊಂದ್ ಬಿಗ್ ಶಾಕ್ ಸಿಕ್ಕಿದೆ. ರಿಯಾ ಚಕ್ರವರ್ತಿ ಮತ್ತು ಕುಟುಂಬದವರು ಇಂದು ಮೂರನೆ ದಿನ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮುಂದೆ ಹಾಜರಾಗಿದ್ದು, ರಿಯಾ, ತಂದೆ ಇಂದ್ರಜಿತ್, ತಮ್ಮ ಶೊವಿಕ್ ರನ್ನು ಇಡಿ ಅಧಿಕಾರಿಗಳು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಈಗಾಗಲೆ ರಿಯಾ ಚಕ್ರವರ್ತಿ ಅವರ ಒಂದು ವರ್ಷದ ಫೋನ್ ಕಾಲ್ ದಾಖಲೆಗಳನ್ನು ಪಡೆದುಕೊಂಡಿರುವ ಅಧಿಕಾರಿಗಳು. ಇದೀಗ ರಿಯಾ ಚಕ್ರವರ್ತಿ ಮೊಬೈಲ್ ಫೋನ್ ಜೊತೆಗೆ ಲ್ಯಾಪ್ ಟ್ಯಾಪ್, ಟ್ಯಾಬ್ ಗಳನ್ನು ಮತ್ತು ಇತರ ಗ್ಯಾಜೆಟ್ ಗಳನ್ನು ಈ ವೇಳೆ ವಶಕ್ಕೆ ಪಡೆದಿದ್ದಾರೆ. ಒಟ್ಟು 4 ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆಯಲಾಗಿದೆ. ರಿಯ ಚಕ್ರವರ್ತಿ ಅವರ 2 ಮೊಬೈಲ್ ಫೋನ್, ತಂದೆ ಇಂದ್ರಜಿತ್ ಚಕ್ರವರ್ತಿ ಮತ್ತು ಸಹೋದರ ಶೋಯಿಕ್ ಅವರ ತಲಾ ಒಂದು ಫೋನ್ ಅನ್ನು ವಶಕ್ಕೆ ಪಡೆದಿದ್ದಾರೆ. ಇದಷ್ಟೇ ಅಲ್ಲದೇ ಲ್ಯಾಪ್ ಟಾಪ್, ಟ್ಯಾಬ್ ಗಳನ್ನು ಸಹ ವಶಕ್ಕೆ ಪಡೆದಿದ್ದಾರೆ. ಇತ್ತ ನನ್ನದೇನೂ ತಪ್ಪಿಲ್ಲ, ನನ್ನ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನ ಮಾಡಲಾಗುತ್ತಿದೆ ಎಂದು ಆರೋಪಿಸುತ್ತಲೇ ಇರುವ ರಿಯಾ ಮಾತ್ರ ಇಡಿ ಅಧಿಕಾರಿಗಳ ಯಾವುದೇ ಪ್ರಶ್ನೆಗಳಿಗೂ ಸರಿಯಾಗಿ ಸ್ಪಂದಿಸುತ್ತಿಲ್ಲ. ಆಕೆಯ ತಮ್ಮ ತಂದೆಯೂ ಕೂಡ ಈ ಬಗ್ಗೆ ತುಟಿ ಬಿಚ್ಚಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ರಿಯಾ ಚಕ್ರವರ್ತಿ ಎರಡು ಮೊಬೈಲ್ ಫೋನ್ ಬಳಸುತ್ತಿದ್ದು, ಒಂದು ಮೊಬೈಲ್ ಫೋನಿನ ದಾಖಲೆಗಳನ್ನು ಮಾತ್ರ ನೀಡಿದ್ದರು. ಇನ್ನೊಂದು ಫೋನ್ ಬಗ್ಗೆ ರಹಸ್ಯವಾಗಿದ್ದರು. ಆದರೆ ಇಡಿ ವಿಚಾರಣೆ ವೇಳೆ ರಿಯಾ ಬಳಿಸುತ್ತಿದ್ದ ಎರಡನೇ ಫೋನ್ ರಹಸ್ಯ ಬಯಲಾಗಿದ್ದು, ಅಧಿಕಾರಿಗಳು ಎರಡೂ ಫೋನ್ ಅನ್ನು ವಶಪಡಿಸಿಕೊಂಡಿದ್ದಾರೆ.
ಇನ್ನು ಸಾಲದ ಸಮಸ್ಯೆಗಳ ಚಿಂತೆ ಬೇಡ. ಈ ಮೂರು ದಿನ, ಹೋಗಿ ಅವನನ್ನು ನೋಡಿ. ಹೆಚ್ಚು ತೊಂದರೆ ಕೊಡುವ ಸಾಲದ ಹೊರೆಯೂ ಮಾಯವಾಗುತ್ತದೆ.
ಇನ್ನು ಸಾಲದ ಸಮಸ್ಯೆಗಳ ಚಿಂತೆ ಬೇಡ. ಈ ಮೂರು ದಿನ, ಹೋಗಿ ಅವನನ್ನು ನೋಡಿ. ಹೆಚ್ಚು ತೊಂದರೆ ಕೊಡುವ ಸಾಲದ ಹೊರೆಯೂ ಮಾಯವಾಗುತ್ತದೆ. ಇಂದು ನಾವು ಕೀ...







