ENG v IND 2nd T20I : ಭಾರತಕ್ಕೆ 49 ರನ್ಗಳ ಭರ್ಜರಿ ಜಯ : 2-0 ಸರಣಿ ಮುನ್ನಡೆ
ಇಂಗ್ಲೆಂಡ್ ವಿರುದ್ಧ ನಡೆದ ಎರಡನೇ ಟಿ 20 ಪಂದ್ಯದಲ್ಲಿ ಟೀಂ ಇಂಡಿಯಾ 49 ರನ್ ಗಳ ಭರ್ಜರಿ ಜಯ ಸಾಧಿಸಿದೆ.
ಇದರೊಂದಿಗೆ ಮೂರು ಪಂದ್ಯಗಳ ಟಿ 20 ಸರಣಿಯನ್ನು ಒಂದು ಪಂದ್ಯ ಬಾಕಿ ಇರುವಂತೆ ಕೈ ವಶ ಮಾಡಿಕೊಂಡಿದೆ.
ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಭಾರತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 170 ರನ್ಗಳ ಪೈಪೋಟಿಯ ಮೊತ್ತ ಕಲೆಹಾಕಿತು.
ಈ ಸವಾಲು ಬೆನ್ನತ್ತಿದ ಇಂಗ್ಲೆಂಡ್ 17 ಓವರ್ಗಳಲ್ಲಿ 121 ರನ್ಗಳಿಗೆ ಸರ್ವಪತನಗೊಂಡಿತು.
ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯಿತು. ರೋಹಿತ್ ಶರ್ಮಾ, ರಿಷಬ್ ಪಂತ್ ಮೊದಲ ವಿಕೆಟ್ ಗೆ 49 ರನ್ ಗಳ ಜೊತೆಯಾಟವನ್ನ ನೀಡಿದರು.
ರೋಹಿತ್ ಶರ್ಮ(31) ರನ್ ಹಾಗೂ ರಿಷಬ್ ಪಂತ್(26) ರನ್ ಗಳಿಸಿದರು. ಆದರೆ ನಂತರದಲ್ಲಿ ನಾಟಕೀಯ ಕುಸಿತ ಕಂಡ ಭಾರತದ ಪರ ವಿರಾಟ್ ಕೊಹ್ಲಿ(1) ಮತ್ತೊಮ್ಮೆ ನಿರಾಸೆ ಮೂಡಿಸಿದರು.
ಸೂರ್ಯಕುಮಾರ್ ಯಾದವ್(15) ಹಾಗೂ ಹಾರ್ದಿಕ್ ಪಾಂಡ್ಯ(12) ರನ್ಗಳಿಸಿ ವಿಕೆಟ್ ಒಪ್ಪಿಸಿದರು.
ಪರಿಣಾಮ 89 ರನ್ಗಳಿಗೆ 5 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ರವೀಂದ್ರ ಜಡೇಜಾ 46 ರನ್ ಗಳಿಸಿ ತಂಡಕ್ಕೆ ನೆರವಾದರು.
ದಿನೇಶ್ ಕಾರ್ತಿಕ್ (12), ಹರ್ಷಲ್ ಪಟೇಲ್(13) ಹಾಗೂ ಭುವನೇಶ್ವರ್(2) ಅಲ್ಪಮೊತ್ತದ ಕಾಣಿಕೆ ನೀಡಿದರು.
ಪಂದ್ಯ ಗೆಲ್ಲಲು 171 ರನ್ ಗಳ ಪಡೆದ ಇಂಗ್ಲೆಂಡ್ ಗೆ ಆರಂಭದಿಂದಲೇ ಶಾಕ್ ಮೇಲೆ ಶಾಕ್ ಎದುರಾಯಿತು.
ಇನ್ನಿಂಗ್ಸ್ ಆರಂಭದಲ್ಲೇ ಪರಿಣಾಮಕಾರಿ ಬೌಲಿಂಗ್ ದಾಳಿ ನಡೆಸಿದ ಭುವನೇಶ್ವರ್ ಕುಮಾರ್(3/15) ವಿಕೆಟ್ ಪಡೆದು ಮಿಂಚಿದರೆ.
ಜಸ್ಪ್ರೀತ್ ಬುಮ್ರಾ(2/10), ಯುಜು಼ವೇಂದ್ರ ಚಹಲ್(2/10) ಆಂಗ್ಲರ ಬ್ಯಾಟಿಂಗ್ ಬೆನ್ನೆಲುಬು ಮುರಿದರು.
ಉಳಿದಂತೆ ಹಾರ್ದಿಕ್ ಪಾಂಡ್ಯ ಮತ್ತು ಹರ್ಷಲ್ ಪಟೇಲ್ ತಲಾ 1 ವಿಕೆಟ್ ಪಡೆದರು.
ಇಂಗ್ಲೆಂಡ್ ಪರ ಡೆವಿಡ್ ಮಲಾನ್ 19ರನ್, ಲಿಯಾಮ್ ಲಿವಿಂಗ್ ಸ್ಟೋನ್ 19 ರನ್ ಗಳಿಸಿದ್ದು ಬಿಟ್ಟರೇ ಉಳಿದ ಬ್ಯಾಟರ್ ಗಳು ಕ್ರೀಸ್ ನಲ್ಲಿ ಹೆಚ್ಚು ಕಾಲ ನಿಲ್ಲಲೇ ಇಲ್ಲ.
ಉತ್ತಮ ಬೌಲಿಂಗ್ ಮೂಲಕ ಭಾರತದ ಗೆಲುವಿನಲ್ಲಿ ಮಿಂಚಿದ ಭುವನೇಶ್ವರ್ ಕುಮಾರ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.