16 ಎಸೆತಗಳಲ್ಲಿ 50 ರನ್ ಸಿಡಿಸಿ ವಿಧ್ವಂಸ ಸೃಷ್ಟಿಸಿದ ಮೋಯಿನ್ ಆಲಿ
ತವರಿನಲ್ಲಿ ನಡೆದ ಏಕದಿನ ಹಾಗೂ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ವಿರುದ್ಧ ಸೋಲು ಕಂಡಿದ್ದ ಆಂಗ್ಲರ ತಂಡ ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿನ ಕೋಪವನ್ನು ಹೊರಹಾಕಿದೆ. ಇಂಗ್ಲೆಂಡ್ ಹಾಗೂ ಸೌತ್ ಆಫ್ರಿಕಾ ನಡುವೆ ನಡೆದ ಮೊದಲ ಟಿ20 ಪಂದ್ಯವು ರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಮೊದಲ ಟಿ20 ಪಂದ್ಯದಲ್ಲಿ ಪ್ರವಾಸಿ ತಂಡವನ್ನ 41 ರನ್‌ಗಳಿಂದ ಸೋಲಿಸಿದೆ.
ಬುಧವಾರ, ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ತಂಡ T20 ನಲ್ಲಿ ತಮ್ಮ ಎರಡನೇ ಅತ್ಯಧಿಕ ರನ್ ಗಳನ್ನ ದಾಖಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 234 ರನ್ ಗಳಿಸಿತು. ಬಳಿಕ ಆಫ್ರಿಕನ್ ಬ್ಯಾಟ್ಸ್‌ಮನ್‌ಗಳು ನಿಗದಿತ 20 ಓವರ್‌ಗಳಲ್ಲಿ ಎಂಟು ವಿಕೆಟ್‌ಗೆ 193 ರನ್ ಗಳಿಸಲಷ್ಟೆ ಶಕ್ತರಾದರು.
ಜೇಸನ್ ರಾಯ್ (8) ಮತ್ತು ಜೋಸ್ ಬಟ್ಲರ್ (22) ಅವರ ಆರಂಭಿಕ ವಿಕೆಟ್‌ಗಳ ನಂತರ, ಜಾನಿ ಬೈರ್‌ಸ್ಟೋವ್ (90) ಮೊದಲು ಡೇವಿಡ್ ಮಲಾನ್ (43) ಅವರೊಂದಿಗೆ ಸ್ಪೋಟಕ ಆಟವಾಡಿದರು. ನಂತರ ಮೊಯಿನ್ ಅಲಿ 52 ಜೊತೆ ಸೇರಿಸಿ ಅಬ್ಬರಿಸಿದರು. ನಾಲ್ಕನೇ ವಿಕೆಟ್‌ಗೆ ಕೇವಲ 35 ಎಸೆತಗಳಲ್ಲಿ 101 ರನ್ ಭಾರಿಸಿದ ಈ ಜೋಡಿ ಟಿ20ಯಲ್ಲಿ ಎರಡನೇ ವೇಗದ ಶತಕದ ಜೊತೆಯಾಟದ ದಾಖಲೆ ಬರೆದಿದೆ. ಆಂಡಿಲ್ ಫೆಹ್ಲುಕ್ವಾಯೊ ಎಸೆದ 17 ನೇ ಓವರ್ ನಲ್ಲಿ 5 ಸಿಕ್ಸರ್ ಭಾರಿಸಿ ಇಂಗ್ಲೆಂಡ್ ವಿಧ್ವಂಸವನ್ನೆ ಸೃಷ್ಟಿಸಿತು.