ಚೆನ್ನೈ ಟೆಸ್ಟ್ – ಇಂಗ್ಲೆಂಡ್ ಗೆ ಶತಕದ ರೂಟ್… ನೂರನೇ ಟೆಸ್ಟ್ ಪಂದ್ಯದಲ್ಲಿ ಸೆಂಚುರಿಯ ಜಾಯ್..!
ನೂರನೇ ಟೆಸ್ಟ್ ಪಂದ್ಯವನ್ನು ಆಡುತ್ತಿರುವ ಇಂಗ್ಲೆಂಡ್ ನಾಯಕ ಜಾಯ್ ರೂಟ್ ಅರ್ಥಪೂರ್ಣಗೊಳಿಸಿದ್ರು ಚೆನ್ನೈ ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಜಾಯ್ ರೂಟ್ ಟೀಮ್ ಇಂಡಿಯಾ ವಿರುದ್ಧ ಸವಾರಿ ನಡೆಸಿದ್ರು. ವಿರಾಟ್ ಪಡೆಯ ಸ್ಪಿನ್ ಹಾಗೂ ವೇಗದ ದಾಳಿಗೆ ಜಾಯ್ ರೂಟ್ ದಿಟ್ಟ ಉತ್ತರವನ್ನು ನೀಡಿದ್ರು.
ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಜಾಯ್ ರೂಟ್ ಅವರು ಶತಕ ಹಾಗೂ ದ್ವಿಶತಕ ದಾಖಲಿಸಿದ್ದರು. ಇದೀಗ ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ದಾಖಲಿಸಿ ತನ್ನ ಬ್ಯಾಟಿಂಗ್ ಸಾಮಥ್ರ್ಯವನ್ನು ಮತ್ತೊಮ್ಮೆ ಪರಿಚಯಿಸಿದ್ರು.
ಈ ಮೂಲಕ ಜಾಯ್ ರೂಟ್ ಅವರು ತನ್ನ ಶತಕಗಳ ಸಂಖ್ಯೆಯನ್ನು 20ಕ್ಕೇರಿಸಿಕೊಂಡ್ರು. ಹಾಗೇ ನೂರು ಟೆಸ್ಟ್ ಪಂದ್ಯಗಳಲ್ಲಿ ರೂಟ್ ಅವರು 49 ಅರ್ಧಶತಕಗಳನ್ನು ಕೂಡ ದಾಖಲಿಸಿದ್ದಾರೆ. ಒಟ್ಟು 8,249 ರನ್ ಕೂಡ ಪೇರಿಸಿದ್ದಾರೆ.
2012ರಲ್ಲಿ ಭಾರತದ ವಿರುದ್ಧವೇ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡುತ್ತಿರುವ ರೂಟ್, ಇದೀಗ ನೂರನೇ ಟೆಸ್ಟ್ ಪಂದ್ಯವನ್ನು ಭಾರತದಲ್ಲೇ ಆಡುವ ಮೂಲಕ ಸ್ಮರಣೀಯವಾಗಿರಿಸಿಕೊಂಡ್ರು.
ಇನ್ನು ಇಂಗ್ಲೆಂಡ್ ಪರ ನೂರನೇ ಟೆಸ್ಟ್ ಪಂದ್ಯವನ್ನಾಡಿದ್ದ 15ನೇ ಆಟಗಾರನಾಗಿ ಹೊರಹೊಮ್ಮಿದ್ರು. ಜಾಯ್ ರೂಟ್ ಅವರ ಇತ್ತೀಚಿನ ಆಟವನ್ನು ಗಮನಿಸಿದಾಗ ಸಚಿನ್ ತೆಂಡುಲ್ಕರ್ ದಾಖಲೆಯನ್ನು ಅಳಿಸಿ ಹಾಕುವ ಸಾಮಥ್ರ್ಯ ಹೊಂದಿದ್ದಾರೆ ಅಂತ ಕೆಲವು ಕ್ರಿಕೆಟ್ ಪಂಡಿತರು ವಿಶ್ಲೇಷಣೆ ಮಾಡಿದ್ದಾರೆ. ಹಾಗೇ ಭಾರತದ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಮತ್ತು ನ್ಯೂಜಿಲೆಂಡ್ ನ ಕೇನ್ ವಿಲಿಯಮ್ಸ್ ಜೊತೆಗೂ ರೂಟ್ ಅವರನ್ನು ಹೋಲಿಕೆ ಮಾಡುತ್ತಿದ್ದು, ಇವರಿಗೆಲ್ಲಾ ಸ್ಪರ್ಧೆಯನ್ನು ಒಡ್ಡುತ್ತಿದ್ದಾರೆ.
ಹಾಗೇ ಜಾಯ್ ರೂಟ್ ಅವರು ಇಂಗ್ಲೆಂಡ್ ಪರ ಟೆಸ್ಟ್ ಕ್ರಿಕೆಟ್ ನಲ್ಲಿ ಗರಿಷ್ಠ ರನ್ ದಾಖಲಿಸಿದವರ ಸಾಲಿನಲ್ಲಿ ನಾಲ್ಕನೇಯವರಾಗಿದ್ದಾರೆ. ಆಲೆಸ್ಟರ್ ಕುಕ್ 12,472 ರನ್, ಗ್ರಹಾಂ ಗೂಚ್ 8900 ರನ್ ಹಾಗೂ ಆಲೆಕ್ಸ್ ಸ್ಟುವರ್ಟ್ 8643 ರನ್ ದಾಖಲಿಸಿದ್ದಾರೆ.
ಒಟ್ಟಿನಲ್ಲಿ ಜಾಯ್ ರೂಟ್ ಅವರು ಟೀಮ್ ಇಂಡಿಯಾಗೆ ಅಪಾಯಕಾರಿಯಾಗಿ ಪರಿಣಮಿಸುತ್ತಿದ್ದಾರೆ.








