ಇಂಗ್ಲೆಂಡ್ ನಲ್ಲಿ 30 ಲಕ್ಷ ದಾಟಿದ ಕೊರೊನಾ ಕೇಸ್ : 20 ದಿನಗಳಲ್ಲಿ 12 ಲಕ್ಷಕ್ಕೆ ಏರಿಕೆ
ಲಂಡನ್: ಇಂಗ್ಲೆಂಡ್ ನಲ್ಲಿ ಕೊರೊನಾ ಹಾವಳಿ ಹೆಚ್ಚಾಗಿದೆ. ಕೇವಲ 20 ದಿನಗಳ ಅಂತರದಲ್ಲಿ ಸೋಂಕಿತರ ಸಂಖ್ಯೆ 12 ಲಕ್ಷ ಏರಿಕೆ ಕಂಡಿದೆ. ಈವರೆಗೂ ಒಟ್ಟು ಪತ್ತೆಯಾದ ಕೊರೊನಾ ಸೋಂಕಿತರ ಸಂಖ್ಯೆ 30 ಲಕ್ಷ ದಾಟಿದೆ. ಇನ್ನೂ ಈವರೆಗೂ ಮಹಾಮಾರಿಗೆ ಬಲಿಯಾದವರ ಸಂಖ್ಯೆ 80 ಸಾವಿರದ ಗಡಿ ದಾಟಿದೆ.
ಭಾರತದಲ್ಲಿ ಒಂದೇ ದಿನ 16,311 ಹೊಸ ಕೊರೊನಾ ಪಾಸಿಟಿವ್ ಕೇಸ್ ಪತ್ತೆ..!
30,72,349 ಮಂದಿ ಇದುವರೆಗೂ ಕೊರೊನಾ ಸೋಂಕಿಗೆ ಒಳಗಾಗಿದ್ದು, 81,431 ಮಂದಿ ಸಾವನ್ನಪ್ಪಿದ್ದಾರೆ. ಉಳಿದಂತೆ 1,406,967 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಇನ್ನೂ ಲಂಡನ್ ಕೊರೊನಾ ಹಾವಳಿಗೆ ತತ್ತರಿಸಿದ್ದು, ಎಮರ್ಜೆನ್ಸಿ ಅಲರ್ಟ್ ಘೋಷಣೆ ಮಾಡಲಾಗಿದೆ. ಇತ್ತ ಇಂಗ್ಲೆಂಡ್ನಲ್ಲಿ ಸಂಪೂರ್ಣ ಲಾಕ್ ಡೌನ್ ಮುಂದುವರಿದಿದೆ.
ಲಂಡನ್ ನಲ್ಲಿ ಪ್ರತಿ 30 ಜನರಲ್ಲಿ ಒಬ್ಬರು ಕೊರೊನಾ ಸೋಂಕಿಗೆ ತುತ್ತಾಗಿದ್ದು, ಬಹುತೇಕ ಆಸ್ಪತ್ರೆಗಳು ಸೋಂಕಿತ ರೋಗಿಗಳಿಂದ ಭರ್ತಿಯಾಗಿವೆ. ಹೀಗಾಗಿ ಜನರು ಮನೆಯಲ್ಲಿ ಇರುವಂತೆ ಲಂಡನ್ ಮೇಯರ್ ಸಾದಿಕ್ ಖಾನ್ ಸೂಚನೆ ನೀಡಿದ್ದಾರೆ. ಅಲ್ಲದೇ ಪರಿಸ್ಥಿತಿ ಮಿತಿ ಮೀರಿ ಹೋಗಿದೆ. ದಯಮಾಡಿ ಮನೆಯಲ್ಲಿಯೇ ಇರಿ. ಮನೆಯಿಂದ ಹೊರಗೆ ಬಂದ್ರೆ ಚಿಕಿತ್ಸೆ ಸಿಗಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel







