ಗ್ರೂಪ್ನಲ್ಲಿ ಟಾಪ್ ಆಗಲು ಇಂಗ್ಲೆಂಡ್ ಪ್ಲಾನ್, ಖಾತೆ ತೆರೆಯಲು ಬಾಂಗ್ಲಾದೇಶ ಪ್ರಿಪರೇಷನ್
ವಿಶ್ವಕಪ್ ಸೂಪರ್ 12ನಲ್ಲಿ ಬುಧವಾರದ ಮೊದಲ ಪಂದ್ಯವೇ ಸಖತ್ ಇಂಟರೆಸ್ಟಿಂಗ್ ಆಗಿರಲಿದೆ. ಏಕದಿನ ವಿಶ್ವಕಪ್ ಚಾಂಪಿಯನ್ ಇಂಗ್ಲೆಂಡ್, ಏಷ್ಯನ್ ಟೈಗರ್ ಬಾಂಗ್ಲಾದೇಶವನ್ನು ಎದುರಿಸಲಿದೆ. ಅಬುದಾಭಿಯಲ್ಲಿ ನಡೆಯುವ ಈ ಪಂದ್ಯ ಎ ಬಣದ ಅಗ್ರಸ್ಥಾನವನ್ನು ನಿರ್ಧಾರ ಮಾಡುವ ಸಾಧ್ಯತೆ ಹೆಚ್ಚಿದೆ.
ಇಂಗ್ಲೆಂಡ್ ತನ್ನ ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಹೀನಾಯವಾಗಿ ಸೋಲಿಸಿತ್ತು. ಹೀಗಾಗಿ ಆತ್ಮವಿಶ್ವಾಸ ಹೆಚ್ಚಿದೆ. ಬಾಂಗ್ಲಾದೇಶ ತನ್ನ ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಸೋಲು ಕಂಡಿತ್ತು. ಹೀಗಾಗಿ ಕೊಂಚ ಆತ್ಮವಿಶ್ವಾಸದ ಕೊರತೆ ಅನುಭವಿಸುತ್ತಿದೆ. ಆದರೂ ಬಾಂಗ್ಲಾದೇಶ ಯಾವ ಕ್ಷಣದಲ್ಲಾದರೂ ಪುಟಿದೇಳಬಹುದು,
ಇಂಗ್ಲೆಂಡ್ ಬೌಲಿಂಗ್ ಸಾಲಿಡ್ ಆಗಿ ಕಾಣುತ್ತಿದೆ. ಕ್ರಿಸ್ವೋಕ್ಸ್, ಕ್ರಿಸ್ ಜೊರ್ಡಾನ್ ಮತ್ತು ಟೈಮಲ್ ಮಿಲ್ಸ್ ವೇಗದ ಬೌಲಿಂಗ್ ಅಸ್ತ್ರಗಳು. ಮೊಯಿನ್ ಅಲಿ ಮತ್ತು ಆದಿಲ್ ರಶೀದ್ ಸ್ಪಿನ್ ಧ್ವಯರು. ಬ್ಯಾಟಿಂಗ್ ನಲ್ಲೂ ಇಂಗ್ಲೆಂಡ್ ಟಿ20 ಸ್ಪೆಷಲಿಸ್ಟ್ಗಳನ್ನು ಹೊಂದಿದೆ. ಜೇಸನ್ ರಾಯ್, ಜೋಸ್ ಬಟ್ಲರ್, ಡೇವಿಡ್ ಮಲಾನ್, ಜಾನಿ ಬೇರ್ ಸ್ಟೋವ್ ರಂತಹ ಸ್ಪೋಟಕ ಬ್ಯಾಟ್ಸ್ ಮನ್ಗಳಿದ್ದಾರೆ.
ಲಿವಿಂಗ್ ಸ್ಟೋನ್, ಮೊರ್ಗಾನ್ ಮತ್ತು ಮೊಯಿನ್ ಅಲಿ ದೊಡ್ಡ ಹೊಡೆತಗಳಿಗೆ ಫೇಮಸ್. ಬಾಂಗ್ಲಾದೇಶ ಶಕೀಬ್ ಅಲ್ ಹಸನ್ ಆಲ್ ರೌಂಡರ್ ಆಟದ ಮೇಲೆ ಹೆಚ್ಚು ಡಿಪೆಂಡ್ ಆಗಿದೆ. ಮುಷ್ಫಿಕರ್ ರಹೀಂ ಮತ್ತು ಮೊಹಮ್ಮದುಲ್ಲಾ ಬ್ಯಾಟಿಂಗ್ ಕೊಡುಗೆ ತುಂಬಾ ಇಂಪಾರ್ಟೆಂಟ್.
ಉಳಿದವರು ಕೂಡ ಈ ಸೂಪರ್ ಸ್ಟಾರ್ ಗಳಿಗೆ ಸಾಥ್ ನೀಡಿದರೆ ಗೆಲುವು ಸುಲಭವಾಗಲಿದೆ. ಡೇ ಟೈಮ್ ನಲ್ಲಿ ಈ ಪಂದ್ಯ ನಡೆಯುತ್ತಿರುವುದರಿಂದ ಅಬುದಾಭಿ ಪಿಚ್ ಮೇಲೂ ಕಣ್ಣಿದೆ. ಒಟ್ಟಿನಲ್ಲಿ ಇಂಗ್ಲೆಂಡ್ ಮತ್ತು ಬಾಂಗ್ಲಾದೇಶ ನಡುವಿನ ಮ್ಯಾಚ್ ಬಗ್ಗೆ ಉಳಿದ ತಂಡಗಳಿಗೂ ಗಮನ ಇರಲಿದೆ.