ಯುಎಇನಲ್ಲಿ ಕಲರ್ ಫುಲ್ ಟೂರ್ನಿ ಐಪಿಎಲ್ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಆರ್ ಸಿಬಿ ಸೇರಿದಂತೆ ಎಲ್ಲ ತಂಡಗಳು ಮೈದಾನಕ್ಕಿಳಿದು ತಾಲೀಮು ಆರಂಭಿಸಿವೆ. ಸೆಪ್ಟೆಂಬರ್ 19 ರಿಂದ ಟೂರ್ನಿ ಆರಂಭವಾಗಲಿದ್ದು, ಈಗಾಗಲೇ ಎಲ್ಲಾ ರೀತಿಯ ತಯಾರಿಗಳನ್ನು ಮಾಡಿಕೊಳ್ಳಲಾಗುತ್ತಿವೆ. ಇದರ ಮಧ್ಯೆ ಆರ್ ಸಿಬಿ ತಂಡದ ಸ್ಪಿನ್ನರ್ ಆಡಂ ಜಂಪಾ, ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 4ವಿಕೆಟ್ ಪಡೆದು ಜಾದೂ ಮಾಡಿದ್ದಾರೆ. 10ಓವರ್ ಗಳಲ್ಲಿ 55ರನ್ ನೀಡಿದ ಜಂಪಾ 4ವಿಕೆಟ್ ಪಡೆದ್ರು. ಜಂಪಾ ಸ್ಪಿನ್ ಜಾದೂಗೆ ಆರ್ ಸಿಬಿ ಫ್ರಾಂಚೈಸಿ ಫುಲ್ ಖುಷ್ ಆಗಿದೆ.
ಇನ್ನೂ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ಕೂಡ ನೆಟ್ ಗಳನ್ನು ಬೆವರಿಳಿಸುತ್ತಿದ್ದು, ಎದುರಾಳಿಗಳ ಮೇಲೆ ಮುಗಿಬೀಳಲು ತಯಾರಿ ನಡೆಸುತ್ತಿದ್ದಾರೆ. ಇದರ ಮಧ್ಯೆ ಆರ್ ಸಿಬಿ ತಂಡದ ಸ್ಪಿನ್ನರ್ ಆಡಂ ಜಂಪಾ, ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 4ವಿಕೆಟ್ ಪಡೆದು ಜಾದೂ ಮಾಡಿದ್ದಾರೆ. 10ಓವರ್ ಗಳಲ್ಲಿ 55ರನ್ ನೀಡಿದ ಜಂಪಾ 4ವಿಕೆಟ್ ಪಡೆದ್ರು. ಜಂಪಾ ಸ್ಪಿನ್ ಜಾದೂಗೆ ಆರ್ ಸಿಬಿ ಫ್ರಾಂಚೈಸಿ ಫುಲ್ ಖುಷ್ ಆಗಿದೆ.
ರಿಚರ್ಡ್ ಸನ್ ಸ್ಥಾನಕ್ಕೆ ಜಂಪಾ
ಕೆಲ ಕಾರಣಗಳಿಂದ ಆಸೀಸ್ ಬೌಲರ್ ಕೇನ್ ರಿಚರ್ಡ್ ಸನ್ ಈ ಬಾರಿಯ ಐಪಿಎಲ್ ನಿಂದ ಹೊರ ನಡೆದಿದ್ದಾರೆ. ಹೀಗಾಗಿ ಅವರ ಸ್ಥಾನಕ್ಕೆ ಆಡಂ ಜಂಪಾ ಅವರನ್ನು ಆರ್ ಸಿಬಿ ಫ್ರಾಂಚೈಸಿ ಆಯ್ಕೆ ಮಾಡಿಕೊಂಡಿದೆ. ಇದರೊಂದಿಗೆ ಯಜುವೇಂದ್ರ ಚಹಾಲ್, ಮೊಯಿನ್ ಅಲಿ, ಪವನ್ ನೇಗಿ ಅವರ ಸ್ಪೀನ್ ವಿಭಾಗಕ್ಕೆ ಜಂಪಾ ಸೇರ್ಪಡೆಗೊಂಡಿದ್ದಾರೆ.
ಈ ಹಿಂದೆ ರೈಸಿಂಗ್ ಪುಣೆ ಸೂಪರ್‍ಗೈಂಟ್ಸ್ ಪರ ಆಡಿದ್ದ ಜಂಪಾ ಪಾಲಿಗೆ ಇದೀಗ ಎರಡನೇ ಐಪಿಎಲ್ ಆಗಿದೆ. ಕಳೆದ ವರ್ಷ ಡಿಸೆಂಬರ್‍ನಲ್ಲಿ ನಡೆದಿದ್ದ ಹರಾಜಿನಲ್ಲಿ ಜಂಪಾ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ. ಆದರೆ, ರಿಚರ್ಡ್‍ಸನ್ ಅವರನ್ನು ಆರ್‍ಸಿಬಿ 4 ಕೋಟಿ ರೂ.ಗಳಿಗೆ ಖರೀದಿಸಿತ್ತು.
https://youtu.be/OEsS0wOJz7M








